2026 : ಹಣ ಮತ್ತು ಜೀವನದ ಬ್ಯಾಲೆನ್ಸ್‌ ಹೀಗಿರಲಿ - ದುಡ್ಡೇ ದೊಡ್ಡಪ್ಪ ಇನ್ನೇನ್ ಇಲ್ಲಪ್ಪ!

Published : Dec 30, 2025, 01:16 PM IST
Money management

ಸಾರಾಂಶ

ಸಂಬಳ ಬಂದು ಬೀಳ್ತಿದ್ದ ಹಾಗೆ ಮ್ಯಾಜಿಕ್‌ನಂತೆ ಹತ್ತಾರು ಕಡೆ ಕರಗಿ ಕಣ್ಮರೆಯಾಗೋದರ ಬಗ್ಗೆ ಸಾಕಷ್ಟು ಜೋಕ್‌ಗಳಿವೆ. ಆದರೆ ಹಣಕಾಸಿನ ವಿಚಾರದಲ್ಲಿ ಕೆಲವು ನಿಯಮ ಪಾಲಿಸದಿದ್ರೆ ಲೈಫೇ ಜೋಕ್‌ ಆಗಬಹುದು. ಇಲ್ಲಿ ಸಂಬಳ ನಿರ್ವಹಣೆಯ ಶಿಸ್ತಿನ ದಾರಿಗಳಿವೆ. 1. 50-30-20 ನಿಯಮವನ್ನು ಜಾರಿಗೆ ತನ್ನಿ

ಸಂಬಳ ಬಂದು ಬೀಳ್ತಿದ್ದ ಹಾಗೆ ಮ್ಯಾಜಿಕ್‌ನಂತೆ ಹತ್ತಾರು ಕಡೆ ಕರಗಿ ಕಣ್ಮರೆಯಾಗೋದರ ಬಗ್ಗೆ ಸಾಕಷ್ಟು ಜೋಕ್‌ಗಳಿವೆ. ಆದರೆ ಹಣಕಾಸಿನ ವಿಚಾರದಲ್ಲಿ ಕೆಲವು ನಿಯಮ ಪಾಲಿಸದಿದ್ರೆ ಲೈಫೇ ಜೋಕ್‌ ಆಗಬಹುದು. ಇಲ್ಲಿ ಸಂಬಳ ನಿರ್ವಹಣೆಯ ಶಿಸ್ತಿನ ದಾರಿಗಳಿವೆ. 1. 50-30-20 ನಿಯಮವನ್ನು ಜಾರಿಗೆ ತನ್ನಿ

ಹಣಕಾಸು ನಿರ್ವಹಣೆ ಬಗ್ಗೆ ಮನಸ್ಸಲ್ಲೇ ಲೆಕ್ಕಾಚಾರ ಹಾಕುವುದಕ್ಕಿಂತ ಕೂಡಲೇ ಜಾರಿಗೆ ತರುವತ್ತ ಗಮನಕೊಡಿ. ಇದನ್ನು ಕೊನೇತನಕ ಇದನ್ನು ಪಾಲಿಸುವ ಗಟ್ಟಿ ಮನಸ್ಸು ಮಾಡಿ. ನಿಮ್ಮ ಹಣವನ್ನು ಹೀಗೆ ವಿಭಾಗಿಸಿಕೊಳ್ಳಿ. ಶೇ.50 ಅಗತ್ಯ ಖರ್ಚುಗಳಿಗೆ ಮೀಸಲು.

ಶೇ.30 ಲೈಫ್‌ಸ್ಟೈಲ್‌ ಸಂಬಂಧಿ ಖರ್ಚು. ಶೇ.20 ಉಳಿತಾಯ ಮತ್ತು ಹೂಡಿಕೆ .

ಇದರಿಂದ ಸುಮ್‌ ಸುಮ್ನೆ ಖರ್ಚು ಮಾಡುವುದು ತಪ್ಪುತ್ತದೆ. ಹಣ ಪೋಲಾಗುವುದಕ್ಕೆ ಬ್ರೇಕ್‌ ಬೀಳುತ್ತದೆ. 2. ಕೆಲಸ ಹೋದ್ರೆ 6 ತಿಂಗಳು ಜೀವನ ನಿರ್ವಹಿಸುವಷ್ಟುಉಳಿತಾಯ ಇರಲಿ

ಕನಿಷ್ಠ 6 ತಿಂಗಳು ಸಂಬಳ ಬರದಿದ್ದರೂ ಸಂಪೂರ್ಣ ಜೀವನ ನಿರ್ವಹಣೆಗೆ ಬೇಕಾದಷ್ಟು ಹಣ ನಿಮ್ಮ ಬಳಿ ಇರಲಿ. ಇದನ್ನು ಲಿಕ್ವಿಡ್‌ ಫಂಡ್‌ ಅಂತ ಕರೆಯುವ ಕ್ಷಿಪ್ರ ಹೂಡಿಕೆಗಳಲ್ಲಿಯೂ ಹಾಕಬಹುದು.  

1 ವರ್ಷದ ಎಫ್‌ಡಿ, ಪೋಸ್ಟ್‌ ಆಫೀಸ್‌ನ ಕೆಲವು ಸ್ಕೀಮ್‌ಗಳಲ್ಲಿ ಹಾಕಿದ್ರೂ ನಡೆಯುತ್ತೆ.

ಇದು ಉದ್ಯೋಗ ಕಳೆದುಕೊಂಡಾಗ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಹಾಯವಾಗುತ್ತದೆ. 3. ಜೀವ ವಿಮೆ ಮಾತ್ರವಲ್ಲ, ಆದಾಯ ವಿಮೆಯೂ ಅಗತ್ಯ ಆದಾಯ ರಕ್ಷಣಾ ವಿಮೆ ಅಥವಾ ಇನ್‌ಕಂ ಪ್ರೊಟೆಕ್ಷನ್‌ ಇನ್ಶೂರೆನ್ಸ್‌ ಅನ್ನುವುದು ಈ ಹೊತ್ತಿನ ಅಗತ್ಯ. ಅಂಗವೈಕಲ್ಯ ವಿಮೆ

ಆದಾಯ ನಷ್ಟ ವಿಮೆ ಈ ಇನ್ಶೂರೆನ್ಸ್‌ ಅಡಿಯಲ್ಲಿ ಬರುತ್ತದೆ. ಸಂಬಳದ ಶೇ.1 ಅಥವಾ ಶೇ.2ರಷ್ಟನ್ನು ಈ ಪ್ರೀಮಿಯಂಗೆ ಕೊಟ್ಟರೆ ಸಂಪೂರ್ಣ ಆದಾಯವನ್ನು ರಕ್ಷಿಸಬಹುದು. 4. ತೆರಿಗೆ ಉಳಿಸುವಂತೆ ಸಂಬಳವನ್ನು ಸೆಟ್‌ ಮಾಡಿ

ಕಂಪನಿಯ ಒಪ್ಪಿಗೆ ಇದ್ದರೆ ಸಂಬಳದ ಹಣವನ್ನು ಟ್ಯಾಕ್ಸ್‌ ಫ್ರೀ ಆಗಿ ಡಿಸೈನ್‌ ಮಾಡಬಹುದು. ಎಲ್‌ಟಿಎ (ರಜೆ, ಪ್ರಯಾಣ ಭತ್ಯೆ)

ಆಹಾರ ಭತ್ಯೆ

ಪುಸ್ತಕ/ಶಿಕ್ಷಣ ವೆಚ್ಚ

ಎನ್‌ಪಿಎಸ್‌ ಪ್ಲಾನ್‌ (ಗರಿಷ್ಠ ಶೇ.10ರಷ್ಟು ಟ್ಯಾಕ್ಸ್‌ ಫ್ರೀ) ತಿಂಗಳ ಭತ್ಯೆಯನ್ನು ಹೀಗೆ ವಿನ್ಯಾಸ ಮಾಡಿದರೆ ಕಾನೂನು ಪ್ರಕಾರ ತೆರಿಗೆ ಉಳಿಸಬಹುದು.

5. ಕೇರಿಯರ್ ಗ್ರೋಥ್‌ ಫಂಡ್ ಇಟ್ಟುಕೊಳ್ಳಿ  

ವರ್ಷಕ್ಕೆ ರು. 50,000 ದಿಂದ ರು.1 ಲಕ್ಷವನ್ನು ಸ್ಕಿಲ್‌ ಅಥವಾ ಕೌಶಲ್ಯ ಹೆಚ್ಚಿಸಿಕೊಳ್ಳಲು, ಕೆಲಸದಲ್ಲಿ ಮೇಲ್ದರ್ಜೆಗೆ ಏರಿಸಬಲ್ಲ ತರಬೇತಿಗಳಿಗೆ ಮೀಸಲಿಡಿ. ಇದು ಭವಿಷ್ಯದ ಆದಾಯ ಹೆಚ್ಚಿಸಲು ನೇರ ಸಹಾಯ ಮಾಡುತ್ತದೆ. 6. ಶೇ.5 ರಿಂದ 10ರಷ್ಟನ್ನು ಗ್ಲೋಬಲ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ.

ಅಂತಾರಾಷ್ಟ್ರೀಯ ಇಂಡೆಕ್ಸ್ ಫಂಡ್ ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ. ಇದರಿಂದ ಭಾರತದಲ್ಲಿ ಆರ್ಥಿಕ ಹಿಂಜರಿತ, ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತದಂಥಾ ಅಪಾಯ ಉಂಟಾದರೂ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

7. ಸಾಲದ ಇಎಂಐಗಳು ಸಂಬಳದ ಶೇ. 30ಕ್ಕಿಂತ ಕೆಳಗಿರಲಿ. ಇಎಂಐ ಹೆಚ್ಚಾದರೆ ಹಣಕಾಸು ಸ್ವಾತಂತ್ರ್ಯ ಕಗ್ಗಂಟಾಗುತ್ತದೆ. ಸಂಬಳದ ಶೇ.30ಕ್ಕಿಂತ ಇಎಂಐ ಹೆಚ್ಚಾಗದಿರಲಿ. 8. ತಿಂಗಳ ಖರ್ಚು ಕಡಿಮೆ ಮಾಡಲು ಯತ್ನಿಸಿ.

ಕರೆಂಟ್‌ ಬಿಲ್‌ ಮೊತ್ತ ಇಳಿಸಲು ಸೋಲಾರ್‌ ಹಾಕಿಸಿ, ನೀರಿನ ಉಳಿತಾಯಕ್ಕೆ ಪ್ಲಾನ್‌ ಮಾಡಿ. ಇವೆಲ್ಲ ದೀರ್ಘಕಾಲದಲ್ಲಿ ಖರ್ಚು ಕಡಿಮೆ ಮಾಡುತ್ತವೆ.

9. ನಿವ್ವಳ ಲಾಭ ಅಥವಾ ನೆಟ್‌ವರ್ಥ್‌ ಅನ್ನು ಮೂರು ತಿಂಗಳಿಗೊಮ್ಮೆ ಪರಿಶೀಲಿಸಿ ಆಸ್ತಿ

ಸಾಲ

ಹೂಡಿಕೆ

ವಾರ್ಷಿಕ ಆರ್ಥಿಕ ಅಭಿವೃದ್ಧಿ

ಇವುಗಳನ್ನು ಕರೆಕ್ಟಾಗಿ ಪರಿಶೀಲಿಸುತ್ತಿದ್ದರೆ ಹೂಡಿಕೆಯ ಶಿಸ್ತು ಬರುತ್ತದೆ.

10. ಪ್ರಮುಖ ಕಾರ್ಯಗಳಿಗೆ 5 ವರ್ಷ ಮೊದಲೇ ಸಿದ್ಧತೆ ಇರಲಿ. ಮನೆ ಖರೀದಿ

ಮಕ್ಕಳ ಶಿಕ್ಷಣ

ಉದ್ಯೋಗ ವಿರಾಮ

ನಿವೃತ್ತಿ

ಈ ಬಗ್ಗೆ ಮೊದಲೇ ಪ್ಲಾನ್‌ ಮಾಡಿಕೊಂಡರೆ ದುಬಾರಿ ಸಾಲಗಳನ್ನು ತಪ್ಪಿಸಬಹುದು.

PREV
Read more Articles on

Recommended Stories

ರಾಜ್ಯಗಳ ಜತೆ ಚರ್ಚಿಸಿಯೇ ಜಿ ರಾಮ್‌ ಜಿ ಜಾರಿ
2025: ದೂರಸಂಪರ್ಕ ಉದ್ಯಮದ ಹೊಸ ಅಧ್ಯಾಯದ ಮುಂಚೂಣಿಯಲ್ಲಿ ಏರ್‌ಟೆಲ್‌