ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು

Published : Feb 17, 2026, 08:48 AM IST
Money

ಸಾರಾಂಶ

ಎರಿಕ್‌ ಸ್ಕಡರ್‌ ಎಂಬ ಆರ್ಥಿಕ ತಜ್ಞ, ‘ ನನ್ನ ಕ್ಲೈಂಟ್‌ಗಳಿಗೆ ಹಣ ಎಲ್ಲಿ ಖರ್ಚಾಗುತ್ತೆ ಅಂತ ನಾನು ತೋರಿಸಿದಾಗ; ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀನಿ ಅಂತ ಗೊತ್ತೇ ಇರಲಿಲ್ಲ ಎಂದು ಉದ್ಗರಿಸುತ್ತಾರೆ. ಆದರೆ ಇಂಥಾ ಸೂಕ್ಷ್ಮ ಎಚ್ಚರ ನಾಳೆಗಳ ಟೆನ್ಶನ್‌ ಅನ್ನು ಅರ್ಧ ಕಡಿಮೆ ಮಾಡುತ್ತದೆ’  

ಎರಿಕ್‌ ಸ್ಕಡರ್‌ ಎಂಬ ಆರ್ಥಿಕ ತಜ್ಞ, ‘ ನನ್ನ ಕ್ಲೈಂಟ್‌ಗಳಿಗೆ ಹಣ ಎಲ್ಲಿ ಖರ್ಚಾಗುತ್ತೆ ಅಂತ ನಾನು ತೋರಿಸಿದಾಗ; ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀನಿ ಅಂತ ಗೊತ್ತೇ ಇರಲಿಲ್ಲ ಎಂದು ಉದ್ಗರಿಸುತ್ತಾರೆ. ಆದರೆ ಇಂಥಾ ಸೂಕ್ಷ್ಮ ಎಚ್ಚರ ನಾಳೆಗಳ ಟೆನ್ಶನ್‌ ಅನ್ನು ಅರ್ಧ ಕಡಿಮೆ ಮಾಡುತ್ತದೆ’ ಎನ್ನುತ್ತಾರೆ. ಆ ಥರ ವಿನಾಕಾರಣ ಹಣ ಪೋಲಾಗುವ 9 ಸಂದರ್ಭಗಳು ಇಲ್ಲಿವೆ.

1. ಪಾರ್ಟಿಯಲ್ಲಿ ದೊಡ್ಡ ಜನ ಆಗೋ ಕ್ರೇಜ್

ವೀಕೆಂಡ್‌ನಲ್ಲಿ ಪಾರ್ಟಿ ಕೊಟ್ಟು ಗೆಳೆಯರ ಕಣ್ಣಲ್ಲಿ ದೊಡ್ಡವರಾಗುವ ಕ್ರೇಜ್‌ ಕೆಲವರಿಗಿರುತ್ತದೆ. ಆದರೆ ಅವರಿಗಿರುವ ಸಂಪಾದನೆಯಲ್ಲಿ ಈ ‘ದೊಡ್ಡಸ್ತಿಕೆ’ ದುಬಾರಿಯಾಗಿರುತ್ತದೆ. ಪಾರ್ಟಿ ಮುಗಿದ ಮೇಲೆ ಹಣದ ಜೊತೆಗೆ ದೊಡ್ಡಸ್ತಿಕೆಯೂ ಕರಗುತ್ತದೆ.

2. ಊಟ ಕೊಡಿಸುವ ಔದಾರ್ಯ

ಇಡೀ ತಂಡ ಊಟಕ್ಕೆ ಹೋಟೆಲಿಗೆ ಹೋದಾಗ ಬಿಲ್‌ ತಾನೇ ಪಾವತಿಸುವ ಮನಸ್ಥಿತಿ ತಿಂಗಳಾಂತ್ಯದಲ್ಲಿ ದುಗುಡಕ್ಕೆ ನೂಕಬಹುದು.

3. ಕಡಿಮೆ ತಿಂದರೂ ಹೆಚ್ಚಿನ ಹಣ ಪಾವತಿಸುವುದು

ಸ್ನೇಹಿತರ ಜೊತೆ ಹೋದಾಗ ನೀವು ಒಬ್ಬರೇ ಇರುತ್ತೀರಿ, ಅವರು ಫ್ಯಾಮಿಲಿ ಜೊತೆಗಿರುತ್ತಾರೆ. ನೀವು ಕಡಿಮೆ ತಿಂದು ಹಣ ಪಾವತಿಗೆ ಮೊದಲು ಮುಂದಾಗುತ್ತೀರಿ. ಇದು ಅನಗತ್ಯ.

4. ಆಹ್ವಾನ ಬಂದೆಡೆಗೆಲ್ಲ ಹೋಗುವ ಮನಸ್ಥಿತಿ

ಆತ್ಮೀಯರ ಕಾರ್ಯಕ್ರಮಗಳ ಜೊತೆಗೆ ಸುಮ್ಮನೆ ಔಪಚಾರಿಕತೆಗೆಂದು ಕರೆದ ಕಾರ್ಯಕ್ರಮಕ್ಕೂ ಹೋಗುವುದರಿಂದ ಖರ್ಚು ಹೆಚ್ಚಾಗುತ್ತದೆ. ಅನಿವಾರ್ಯ ಕಾರ್ಯಕ್ರಮಕ್ಕಷ್ಟೇ ಹೋಗುವುದರಿಂದ ಕಾಸು ಉಳಿಯುತ್ತದೆ, ಮರ್ಯಾದೆಯೂ ಹೆಚ್ಚುತ್ತದೆ.

5. ದೊಡ್ಡ ಈವೆಂಟ್‌ಗೆ ಹೋಗುವ ಮೊದಲು ಯೋಚಿಸಿ

ಅವಶ್ಯಕತೆ ಇಲ್ಲದ, ನಿಮ್ಮ ಲೆವೆಲ್‌ಗೆ ಮೀರಿದ ದೊಡ್ಡ ಈವೆಂಟ್‌ಗೆ ಹೋಗೋದು ಕೂಡ ಜೇಬಿನ ಭಾರ ಇಳಿಸುವ ಕಾರ್ಯಕ್ರಮವೇ. ಕೆಲವು ಗಂಟೆಗಳ ಕಾರ್ಯಕ್ರಮಕ್ಕೆ ನೀವು ಕೆಲವು ಸಾವಿರ ಖರ್ಚು ಮಾಡಿರುತ್ತೀರಿ.

6. ಹಣ ಕಡಿಮೆ ಇದ್ದಾಗಲೂ ಔಟಿಂಗ್‌

ಸ್ನೇಹಿತರೆಲ್ಲ ಔಟಿಂಗ್‌ ಹೋಗುತ್ತಾರೆ ಎಂದು ಹಣಕ್ಕೆ ಸಮಸ್ಯೆ ಇದ್ದಾಗಲೂ ಹೋಗುವ ಮೊದಲು ಯೋಚಿಸಿ. ಇದು ನಿಮ್ಮ ಹಣ ಕರಗಿಸುವ ಜೊತೆಗೆ ಔಟಿಂಗ್‌ ಖುಷಿಯನ್ನೂ ನೀಡಲಾರದು.

7. ಕೈಬಿಚ್ಚಿ ಕೊಡುವ ಧಾರಾಳತೆ

ಇನ್ನೊಬ್ಬರ ಕಷ್ಟ ಕಂಡು ಕರಗುವ ಮಾನವೀಯತೆ ಅತ್ಯಗತ್ಯ. ಆದರೆ ಈ ಮಾನವೀಯತೆ ನಾಳೆ ನಮ್ಮನ್ನು ಕಷ್ಟಕ್ಕೆ ತಳ್ಳುವಂತಿರಬಾರದು. ನಮ್ಮ ಬಜೆಟ್‌ ಬಗ್ಗೆಯೂ ಜಾಗರೂಕತೆ ಇರಬೇಕು.

8. ಉಡುಗೊರೆ ನೀಡುವ ಅಭ್ಯಾಸ

ಪ್ರತೀ ಹಬ್ಬಕ್ಕೂ ಆಪ್ತರನ್ನು ಕರೆದು ಉಡುಗೊರೆ ಕೊಟ್ಟು ಸತ್ಕರಿಸುವ ಸಂಪ್ರದಾಯ ಕೆಟ್ಟದೇನೂ ಅಲ್ಲ. ಆದರೆ ಅದು ನಿಮ್ಮ ಸೇವಿಂಗ್ಸ್‌ಗೆ ಮಾರಕ.

8. ರಜೆಯಲ್ಲಿ ಮಜಾ

ರಜೆ ಬಂದಾಗ ಹೊರಗೆ ತಿನ್ನೋದು, ಶಾಪಿಂಗ್‌ ಮತ್ತೊಂದು ಅಂತ ಖರ್ಚು ಮಾಡೋ ಮೊದಲು ಆ ಹಣವನ್ನು ಸೇವಿಂಗ್ಸ್‌ ಆಗಿಟ್ಟರೆ ಆಪತ್ತಿನ ಕಾಲದಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ.

9. ಟ್ರಿಪ್‌ ಅಭ್ಯಾಸ

ಟ್ರಿಪ್‌ ಅಂದಾಗ ಅಲ್ಲಿ ಉಳಿದುಕೊಳ್ಳಲು, ಓಡಾಟಕ್ಕೆ, ತಿನ್ನೋದಕ್ಕೆ ಅಂತ ಖರ್ಚು ಜಾಸ್ತಿ ಇರುತ್ತದೆ. ಪದೇ ಪದೇ ಟ್ರಿಪ್‌ ಮಾಡಿದರೆ ಆರ್ಥಿಕ ಕುಸಿತ ಉಂಟಾಗಬಹುದು.

ಮೇಲಿನ ಕೆಲವು ಅಭ್ಯಾಸಗಳಿಗೆ ಬ್ರೇಕ್‌ ಹಾಕಿ ನೋಡಿ, ಅರ್ಧ ಟೆನ್ಶನ್‌ ಕಡಿಮೆ ಆಗುತ್ತದೆ.

PREV
Read more Articles on

Recommended Stories

ಸಮಸ್ತ ಶೋಷಿತರ ಆಶಾ ಕಿರಣ ಪರಮೇಶ್ವರ್‌
ಆ.7ರಿಂದ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್: ಗ್ರಾಹಕರಿಗೆ ಭಾರಿ ರಿಯಾಯಿತಿ, ಆಕರ್ಷಕ ಆಫರ್