ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಕೆಲವು ವರ್ಷಗಳಲ್ಲಿ ಅಮೆಜಾನ್ ಇಂಡಿಯಾದಲ್ಲಿ ಮಾರಾಟಗಾರರ ಸಮುದಾಯ ಹೇಗೆ ವಿಕಸನಗೊಂಡಿದೆ? ಸಣ್ಣ ನಗರಗಳ ಭಾಗವಹಿಸುವಿಕೆ ಹೇಗಿದೆ?
ಕಳೆದ ಕೆಲವು ವರ್ಷಗಳಲ್ಲಿ ಅಮೆಜಾನ್ ಇಂಡಿಯಾದಲ್ಲಿ ಮಾರಾಟಗಾರರ ಸಂಖ್ಯೆ ಮತ್ತು ವ್ಯಾಪ್ತಿ ಗಣನೀಯವಾಗಿ ಬೆಳೆದಿದೆ. ಕೇವಲ ಆನ್‌ಲೈನ್‌ನಲ್ಲಿ ಸರಕು ಮಾರಾಟ ಮಾಡುವ ಮಾಧ್ಯಮವಾಗಿ ಆರಂಭವಾದ ಇದು, ಇಂದು ಉದ್ಯಮಿಗಳು ತಮ್ಮದೇ ಆದ ಸ್ವತಂತ್ರ ಬ್ರ್ಯಾಂಡ್‌ಗಳನ್ನು ನಿರ್ಮಿಸುವ ವಿಶಾಲ ಸಮುದಾಯವಾಗಿ ಬೆಳೆದುನಿಂತಿದೆ. ಪ್ರಸ್ತುತ ಅಮೆಜಾನ್ ವೇದಿಕೆಯಲ್ಲಿ 17 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರಿದ್ದಾರೆ.ಇದರಲ್ಲಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆಯೆಂದರೆ, ಶೇಕಡ 70ಕ್ಕಿಂತ ಹೆಚ್ಚು ಮಾರಾಟಗಾರರು 2ನೇ ಮತ್ತು 3ನೇ ಹಂತದ ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗಗಳಿಂದ ಬರುತ್ತಿದ್ದಾರೆ. ಭೌಗೋಳಿಕ ಗಡಿಗಳನ್ನು ಮೀರಿ ಸಣ್ಣ ಪಟ್ಟಣಗಳ ಉದ್ಯಮಿಗಳು ತಮ್ಮ ಉತ್ಪನ್ನಗಳಿಗೆ ರಾಷ್ಟ್ರವ್ಯಾಪಿ ಬೇಡಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಉತ್ತರ ಪ್ರದೇಶದ ಟೀಲನ್ ಕೇವಲ ₹5,000 ಅಲ್ಪ ಬಂಡವಾಳದೊಂದಿಗೆ ಆರಂಭವಾಗಿ ಇಂದು ತಿಂಗಳಿಗೆ ₹10 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ಹಾರ್ಡ್‌ವೇರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಹೈದರಾಬಾದ್‌ನ ಸೋಮಾನಿ ಪ್ಯಾಕೇಜಿಂಗ್ 10 ಉತ್ಪನ್ನಗಳಿಂದ ಆರಂಭಿಸಿ ಇಂದು 300ಕ್ಕೂ ಹೆಚ್ಚು ಉತ್ಪನ್ನ ಶ್ರೇಣಿಯೊಂದಿಗೆ ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ 40,000ಕ್ಕೂ ಹೆಚ್ಚು ಗ್ರಾಹಕರಿಗೆ ನಿರಂತರ ಸೇವೆ ನೀಡುತ್ತಿದೆ.
ಡಿಜಿಟಲ್ ಮಾರುಕಟ್ಟೆಯಲ್ಲಿ ವೆಚ್ಚ ನಿರ್ವಹಣೆ, ಉತ್ತಮ ಗುಣಮಟ್ಟದ ಉತ್ಪನ್ನ ಲಿಸ್ಟಿಂಗ್, ದಾಸ್ತಾನು ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಸೂಕ್ತ ಜಾಹೀರಾತು ನೀಡಿ ಗ್ರಾಹಕರನ್ನು ತಲುಪುವುದು ಎಂಎಸ್‌ಎಂಇಗಳ ಮುಂದಿರುವ ಮುಖ್ಯ ಸವಾಲುಗಳು. ಈ ಸಂಕೀರ್ಣತೆಗಳನ್ನು ನಿವಾರಿಸಲು ಅಮೆಜಾನ್ ಕಡಿಮೆ ವೆಚ್ಚದ ಮತ್ತು ಅತ್ಯಂತ ಸರಳ ಮಾರಾಟ ಪ್ರಕ್ರಿಯೆಯನ್ನು ರೂಪಿಸಿದೆ. ಇತ್ತೀಚಿನ ಶುಲ್ಕ ಕಡಿತಗಳ ಜತೆಗೆ, ಸೆಲ್ಲರ್ ಅಸಿಸ್ಟೆಂಟ್, ಜೆನ್ಎಐ ಲಿಸ್ಟಿಂಗ್ ಟೂಲ್ಸ್, ಲಿಸ್ಟಿಂಗ್ ಐಕ್ಯೂ ಮತ್ತು ಪ್ರೈಸಿಂಗ್ ಐಕ್ಯೂ ಮುಂತಾದ ಅತ್ಯಾಧುನಿಕ ಎಐ ಆಧಾರಿತ ತಂತ್ರಜ್ಞಾನ ಪರಿಕರಗಳನ್ನು ಪರಿಚಯಿಸಲಾಗಿದೆ.
ಮಹಿಳಾ ಉದ್ಯಮಶೀಲತೆ ಮತ್ತು ಸಾಂಪ್ರದಾಯಿಕ ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಅಮೆಜಾನ್ ಕೈಗೊಂಡಿರುವ ಕ್ರಮಗಳೇನು?
ಅದೇ ರೀತಿ, ಅಮೆಜಾನ್ ಕಾರಿಗರ್ ಯೋಜನೆಯು ವಾರಣಾಸಿ, ಜೈಪುರ, ಕೊಯಮತ್ತೂರು ಮುಂತಾದ ಐತಿಹಾಸಿಕ ನಗರಗಳ ನೇಕಾರರು ಮತ್ತು ಕುಶಲಕರ್ಮಿಗಳ 470ಕ್ಕೂ ಹೆಚ್ಚು ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 2 ಲಕ್ಷಕ್ಕೂ ಅಧಿಕ ಕರಕುಶಲ ಉತ್ಪನ್ನಗಳನ್ನು ಆನ್‌ಲೈನ್‌ಗೆ ತಂದು ದೇಶದ ಗ್ರಾಹಕರೊಂದಿಗೆ ನೇರ ಸಂಪರ್ಕ ಕಲ್ಪಿಸಿದೆ.
ಎಂಎಸ್‌ಎಂಇಗಳು ತಾವೇ ಸ್ವತಃ ಬೃಹತ್ ಗೋದಾಮು ಅಥವಾ ಸಾಗಣೆ ಜಾಲ ನಿರ್ಮಿಸುವ ಅಗತ್ಯವಿಲ್ಲದಂತೆ ನಮ್ಮ ಪೂರೈಕೆ ಮೂಲಸೌಕರ್ಯ ಬೆನ್ನೆಲುಬಾಗಿ ನಿಂತಿದೆ. ದೇಶದ 16 ಪ್ರಮುಖ ರಾಜ್ಯಗಳಲ್ಲಿ 4.3 ಕೋಟಿ ಘನ ಅಡಿ ಶೇಖರಣಾ ಸಾಮರ್ಥ್ಯದ ಪೂರೈಕೆ ಕೇಂದ್ರಗಳು, 30 ಲಕ್ಷ ಚದರ ಅಡಿ ವಿಂಗಡಣಾ ಪ್ರದೇಶ, ಸುಮಾರು 2,000 ಕೊನೆಯ ಹಂತದ ವಿತರಣಾ ಕೇಂದ್ರಗಳು ಮತ್ತು 28,000ಕ್ಕೂ ಹೆಚ್ಚು ಐ ಹ್ಯಾವ್ ಸ್ಪೇಸ್ ಪಾಲುದಾರರಿದ್ದಾರೆ.
ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಮತ್ತು ಓಮ್ನಿಚಾನಲ್ ತಂತ್ರಗಳ ಮಹತ್ವವೇನು?
ಮುಂದಿನ 3 ರಿಂದ 5 ವರ್ಷಗಳಲ್ಲಿ ಭಾರತದ ಇ-ಕಾಮರ್ಸ್ ಪರಿಸರದ ಭವಿಷ್ಯವನ್ನು ಹೇಗೆ ನೋಡುತ್ತೀರಿ?
ಭಾರತದ ಡಿಜಿಟಲ್ ಕಾಮರ್ಸ್ ಪರಿಸರ ವ್ಯವಸ್ಥೆಯು 2030ರ ವೇಳೆಗೆ ಬರೋಬ್ಬರಿ 250 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ಮುಂದಿನ ಹಂತವು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿರದೆ, ಸಣ್ಣ ಪಟ್ಟಣಗಳ ಸಣ್ಣ ಉದ್ದಿಮೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಎಐ ತಂತ್ರಜ್ಞಾನದ ಸಮ್ಮಿಲನದಿಂದಲೇ ಸಾಧ್ಯವಾಗಲಿದೆ.2030ರ ವೇಳೆಗೆ ಭಾರತದ 1.5 ಕೋಟಿ ಸಣ್ಣ ವ್ಯಾಪಾರಗಳಿಗೆ ಎಐ ನೈಜ ಪ್ರಯೋಜನಗಳನ್ನು ತಲುಪಿಸುವ ಬದ್ಧತೆಯೊಂದಿಗೆ ಅಮೆಜಾನ್ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಎಂಎಸ್‌ಎಂಇಗಳು ಸ್ಥಳೀಯವಾಗಿ ಆರಂಭವಾಗಿ, ಡಿಜಿಟಲ್ ಸಾಮರ್ಥ್ಯಗಳನ್ನು ಬೆಳೆಸಿಕೊಂಡು, ಜಾಗತಿಕ ಸ್ಪರ್ಧಾತ್ಮಕ ಬ್ರ್ಯಾಂಡ್‌ಗಳಾಗಿ ರೂಪಾಂತರಗೊಳ್ಳಲು ಅಗತ್ಯವಿರುವ ತಂತ್ರಜ್ಞಾನ, ಮಾರುಕಟ್ಟೆ ಜಾಲ ಮತ್ತು ದೀರ್ಘಾವಧಿಯ ಬೆಂಬಲವನ್ನು ನೀಡುವುದೇ ನಮ್ಮ ಪ್ರಮುಖ ಗುರಿಯಾಗಿದೆ.