ಅರಸು ಚುಟುಕು ಚಿತ್ತಾರಗಳು: 18 ಲೇಖಕಿಯರ ವಿಮರ್ಶೆಗಳ ಸಂಕಲನ

KannadaprabhaNewsNetwork |  
Published : Jan 25, 2026, 01:15 AM IST
30 | Kannada Prabha

ಸಾರಾಂಶ

ಮೂಲತಃ ಆಯುರ್ವೇದ ವೈದ್ಯರಾದ ಡಾ.ಎಂಜಿಆರ್‌ ಅರಸು ಅವರು ಚುಟುಕು ಕಾವ್ಯ ಪ್ರಕಾರದಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಮುಖವಾದ ಹೆಸರು. ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಪರಿಷತ್‌ ರಚಿಸಿಕೊಂಡು ಈ ಇಳಿ ವಯಸ್ಸಿನಲ್ಲಿಯೂ ಎಲ್ಲೆಡೆ ಪಾದರಸದಂತೆ ಸಂಚರಿಸುತ್ತಾ, ಚುಟುಕು ಕವಿಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಅರಸು ಚುಟುಕು ಚಿತ್ತಾರಗಳು- ಡಾ.ಎಂಜಿಆರ್‌ ಅರಸ್‌ ಅವರ ಚುಟುಕುಗಳಿಗೆ 18 ಲೇಖಕಿಯರ ಬರೆದಿರುವ ಚುಟುಕು ವಿಮರ್ಶೆಗಳ ಸಂಕಲನ. ಇದನ್ನು ವಿ. ಸೀತಾಲಕ್ಷ್ಮೀ ವರ್ಮ ಸಂಪಾದಿಸಿದ್ದಾರೆ.

ಮೂಲತಃ ಆಯುರ್ವೇದ ವೈದ್ಯರಾದ ಡಾ.ಎಂಜಿಆರ್‌ ಅರಸು ಅವರು ಚುಟುಕು ಕಾವ್ಯ ಪ್ರಕಾರದಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಮುಖವಾದ ಹೆಸರು. ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಪರಿಷತ್‌ ರಚಿಸಿಕೊಂಡು ಈ ಇಳಿ ವಯಸ್ಸಿನಲ್ಲಿಯೂ ಎಲ್ಲೆಡೆ ಪಾದರಸದಂತೆ ಸಂಚರಿಸುತ್ತಾ, ಚುಟುಕು ಕವಿಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ಅಲ್ಲದೇ ನೂರಾರು ಚುಟುಕು ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಡಾ.ಧರಣಿದೇವಿ ಮಾಲಗತ್ತಿ, ಡಾ.ವಸುಂಧರಾ ಭೂಪತಿ, ಶಾರದಾ ಎ. ಅಂಚನ್‌ ಕೊಡವೂರು, ಭಾಗ್ಯಾ ಕೃಷ್ಣಮೂರ್ತಿ, ಡಾ.ಕೆ. ಲೀಲಾ ಪ್ರಕಾಶ್‌, ಕಾವ್ಯಶ್ರೀ ಮಹಾಗಾವಂಕರ, ಬಿ.ಎಂ. ಸಿಹಾನ, ಭವಾನಿ ಲೋಕೇಶ್‌, ಶೈಲಾ ಶ್ರೀನಿವಾಸ್‌, ಡಾ.ಎಂ.ಎಸ್. ಅನಿತಾ, ಪದ್ಮಾ ಮೂರ್ತಿ, ಎಚ್,.ಎಸ್. ಪ್ರತಿಮಾ ಹಾಸನ್‌, ಡಾ.ಟಿ.. ಗಾಯಿತ್ರಿ, ಸಂಧ್ಯಾ ಸುರೇಶ್‌, ಯಂ.ಬಿ. ರಮೀಝ, ಎ.ಪಿ. ಸೌಮ್ಯಶ್ರೀ, ಬಿ.ಕೆ. ಮೀನಾಕ್ಷಿ, ವಿ. ಸೀತಾಲಕ್ಷ್ಮೀ ವರ್ಮ ಅವರು ತಮ್ಮದೇ ಆದ ದೃಷ್ಟಿಕೋನದಲ್ಲಿ ಅರಸರ ಚುಟುಕುಗಳು ಹಾಗೂ ಚುಟುಕು ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ವಿಮರ್ಶಿಸಿದ್ದಾರೆ.

ಚುಟುಕು ಚಿಕಿತ್ಸೆ, ಚುಟುಕು ಜಗತ್ತಿನ ಅರಸ, ಚುಟುಕು ಸಾಮ್ರಾಜ್ಯದ ಅರಸ, ಕನ್ನಡ ಸಾಹಿತ್ಯ ಲೋಕದ ವಾಮನ ಮೂರ್ತಿ, ಔದರ್ಯವಂತ, ಚುಟುಕು ಸಾಮ್ರಾಜ್ಯದ ದಿಗ್ಗಜ, ಎಂದು ಕೆಲವರು ವಿಮರ್ಶಿಸಿದ್ದರೆ ಮತ್ತೆ ಕೆಲವರು ಅರಸು ಚುಟುಕಿನಲ್ಲೇ ಒಂದು ಬರೆ, ಚುಟುಕೆಂಬ ಚಾಟಿ ಬೀಸುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ಅರಸರ ಚುಟುಕುಗಳು ಸಮಸಮಾಜದ ಸಾಕಾರಾದ ಹಾದಿಯಲ್ಲಿವೆ ಎನ್ನುತ್ತಾರೆ. ಅರಸರ ಚುಟುಕುಗಳಲ್ಲಿ ಸಾಮಾಜಿಕ ವೈದಿಷ್ಟ್ಯಗಳ ಚಿತ್ರಣವಿದೆ. ಹಲವು ಚುರುಕಿನ ಚುಟುಕುಗಳಿವೆ ಮುದ ನೀಡುತ್ತವೆ. ಹನಿ ಬಿಂದುವಿನೊಳಗೂ ವೈರುಧ್ಯಗಳ ಮುಖಾಮುಖಿಯಾಗುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.ಮೊದಲ ಮಗಳು ಅಮೃತಾ

ಎರಡನೇ ಮಗಳು ಅಂಜನ

ಮೂರನೇ ಮಗಳು

ಅಮೃತಾಂಜನ

-

ಪೊಲೀಸರು

ಹೊಡೆದು ಒಳಗೆ ಹಾಕುತ್ತಾರೆ

ಅಧ್ಯಾಪಕರು

ಹೊಡೆದು ಹೊರಗೆ ಹಾಕುತ್ತಾರೆ.

-

ಮದುವೆಗೆ ಮುಂಚೆ

ನಾನೇ ವೀಣೆ- ಅವರೇ ತಂತಿ

ಮದುವೆಯ ನಂತರ

ನಾನೇ ಡೋಲು- ಅವಳೇ ಕೋಲು

ಈ ರೀತಿಯ ಕಚುಗುಳಿ ಇಡುವ ಹಲವಾರು ಚುಟುಕುಗಳಿವೆ.

ವೈದ್ಯವಾರ್ತಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್‌ ಮುನ್ನುಡಿ ಬರೆದಿದ್ದಾರೆ. ಸಂಪಾದಕಿ ವಿ. ಸೀತಾಲಕ್ಷ್ಮಿ ವರ್ಮ ಅವರ ಮಾತಿನ ಜೊತೆಗೆ ಡಾ.ಲತಾ ರಾಜಶೇಖರ್‌, ಕಮಲಾ ಹೆಮ್ಮಿಗೆ, ರತ್ನಾ ಹಾಲಪ್ಪಗೌಡ, ಲೀಲಾದೇವಿ ಆರ್. ಪ್ರಸಾದ್‌, ರಾಣಿ ಸತೀಶ್‌, ಡಾ.ಸಿಪಿಕೆ, ಡಾ.ಎಂ. ಅಕಬರ ಅಲಿ ಅವರು ಅರಸು ಅವರ ಬಗ್ಗೆ ವ್ಯಕ್ತಪಡಿಸಿರುವ ಅನಿಸಿಕೆಗಳನ್ನು ಕೂಡ ದಾಖಲಿಸಲಾಗಿದೆ. ಆಸಕ್ತರು ಮೊ. 94484 02092 ಸಂಪರ್ಕಿಸಬಹುದು.

PREV

Recommended Stories

ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣೆಕ್‌ ಷಾ ಮೈದಾನ ಸಜ್ಜು
ಬನ್ನೇರುಘಟ್ಟ ಮೆಟ್ರೋ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ