ವಿಶೇಷ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕ ಆರಂಭಿಸಿದ ಅಪೋಲೋ ಹಾಸ್ಪಿಟಲ್

KannadaprabhaNewsNetwork |  
Published : Dec 08, 2025, 01:15 AM ISTUpdated : Dec 08, 2025, 07:33 AM IST
Appolo

ಸಾರಾಂಶ

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಹಾಸ್ಪಿಟಲ್ ವಿಶೇಷ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕ ಹಾಗೂ ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ (ಎಂಸಿಎಸ್) ಘಟಕ ಉದ್ಘಾಟಿಸಿದೆ. ಈ ಕುರಿತ ವಿವರ ಇಲ್ಲಿದೆ.

 ಬೆಂಗಳೂರು : ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಹಾಸ್ಪಿಟಲ್ ವಿಶೇಷವಾದ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕ ಹಾಗೂ ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ (ಎಂಸಿಎಸ್) ಘಟಕವನ್ನು ಆರಂಭಿಸಿದೆ. ಈ ವಿಶೇಷ ಘಟಕಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿಶಂಕರ್ ಜೆ. ಐಎಎಸ್ ಸಮ್ಮುಖದಲ್ಲಿ ಆರಂಭಿಸಲಾಯಿತು. 

ಅಂಗಾಂಶ ಕಸಿ ಕ್ಷೇತ್ರದಲ್ಲಿ ಅಪೋಲೋ ಆಸ್ಪತ್ರೆ ಮುಂಚೂಣಿಯಲ್ಲಿ

ಅಂಗಾಂಶ ಕಸಿ ಕ್ಷೇತ್ರದಲ್ಲಿ ಅಪೋಲೋ ಆಸ್ಪತ್ರೆಯು ಬಹಳಷ್ಟು ಸಮಯಗಳಿಂದ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಈಗ ಇದೇ ಮೊದಲ ಬಾರಿಗೆ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕವನ್ನು ಆರಂಭಿಸಿದೆ. ಇದರಿಂದ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ರೋಗಿಗಳಿಗೆ ಈ ಕೇಂದ್ರವು ಪ್ರಮುಖ ಕಸಿ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ.

 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ಐಎಎಸ್ ಅವರು, ‘ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಂತಹ ಸಂದರ್ಭದಲ್ಲಿ ನಗರ ಸಾರಿಗೆ ವ್ಯವಸ್ಥೆಯು ತುರ್ತು ಚಿಕಿತ್ಸೆಗೆ ಬಹಳ ಅತ್ಯಗತ್ಯವಾಗಿದೆ. ಅಪೋಲೋದ ಈ ಹೊಸ ಯೋಜನೆಯು ಬೆಂಗಳೂರಿನಲ್ಲಿ ರೋಗಿಗಳ ಜೀವ ಉಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮತ್ತು ರೋಗಿಗಳ ಜೀವ ಉಳಿಸಲು ಬಿಎಂಆರ್‌ಸಿಎಲ್ ಸಂಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ’ ಎಂದು ಹೇಳಿದರು. 

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿನ ಈ ಹೊಸ ಘಟಕದಲ್ಲಿ ವಿಶೇಷ ಆಪರೇಷನ್ ಥಿಯೇಟರ್‌ಗಳು, ಕಸಿ ಮಾಡಲು ಸಿದ್ಧವಾದ ಐಸಿಯುಗಳು, ಅತ್ಯಾಧುನಿಕ ಮಾನಿಟರಿಂಗ್ ವ್ಯವಸ್ಥೆಗಳು ಮತ್ತು ವಿಶೇಷ ಸೌಲಭ್ಯಗಳಿವೆ. 

ಈ ಕೇಂದ್ರವು ಈ ಕೆಳಗಿನ ಎಲ್ಲಾ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡಲಿದೆ: • ಹೃದಯ, ಶ್ವಾಸಕೋಶ ಹಾಗೂ ಹೃದಯ-ಶ್ವಾಸಕೋಶ ಕಸಿ ಸೌಲಭ್ಯ

 • ಹೃದಯ-ಯಕೃತ್ತು, ಹೃದಯ-ಮೂತ್ರಪಿಂಡ ಸೇರಿದಂತೆ ಆಯ್ದ ಬಹು ಅಂಗಾಂಗ ಕಸಿ ವ್ಯವಸ್ಥೆ

 • ತಾತ್ಕಾಲಿಕ ಮತ್ತು ಶಾಶ್ವತ ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ (ಎಂಸಿಎಸ್) ಮತ್ತು ಇಸಿಎಂಓ

 • ತುಂಬಾ ಅಪಾಯದಲ್ಲಿರುವ ರೋಗಿಗಳನ್ನು ಸುರಕ್ಷಿತವಾಗಿ ಕರೆತರಲು ಸಜ್ಜಾದ ವಿಶೇಷ ತಂಡ

 ಅಪೋಲೋ ಹಾಸ್ಪಿಟಲ್ ನ ಹಾರ್ಟ್ ಆಂಡ್ ಲಂಗ್ ಟ್ರಾನ್ಸ್ ಪ್ಲಾಂಟೇಷನ್ ಮತ್ತು ಎಂಸಿಎಸ್ ಘಟಕದ ನಿರ್ದೇಶಕ ಹಾಗೂ ಸರ್ಜಿಕಲ್ ಡೈರೆಕ್ಟರ್ ಡಾ. ಕುಮುದ್ ಕುಮಾರ್ ಧೀತಲ್ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಚೆನ್ನೈ ಮತ್ತು ಬೆಂಗಳೂರಿನ ನಮ್ಮ ತಂಡಗಳು ಗುಣಮಟ್ಟದ ಕಸಿ ಸೌಲಭ್ಯವನ್ನು ಒದಗಿಸುತ್ತಿವೆ. ಈ ಔಪಚಾರಿಕ ಘಟಕ ಉದ್ಘಾಟನೆಯ ಮೂಲಕ ನಾವು ಹೃದಯ ಮತ್ತು ಶ್ವಾಸಕೋಶ ರೋಗಗಳಿಗೆ ಸಂಪೂರ್ಣ ಸಮಗ್ರ ಚಿಕಿತ್ಸೆಯನ್ನು ನೀಡಬಲ್ಲೆವು’ ಎಂದರು.

 ಶ್ವಾಸಕೋಶ ವೈಫಲ್ಯ ಮತ್ತು ಕಸಿ ತಜ್ಞ ಡಾ. ಶ್ರೀನಿವಾಸ ರಾಜಗೋಪಾಲ ಅವರು, ‘ಯಶಸ್ವಿ ಶ್ವಾಸಕೋಶ ಕಸಿಗೆ ಕೇವಲ ಉತ್ತಮ ಶಸ್ತ್ರಚಿಕಿತ್ಸೆ ಮಾತ್ರವೇ ಸಾಲದು, ಕಸಿಗೆ ಮುಂಚೆ ಮತ್ತು ನಂತರ ಸೂಕ್ಷ್ಮ ಹಾಗೂ ನಿರಂತರ ಕಾಳಜಿ ಅತ್ಯಗತ್ಯ. ಅಂಥಾ ಸೌಲಭ್ಯವನ್ನು ಇಲ್ಲಿ ನೀಡಲಾಗುತ್ತದೆ’ ಎಂದರು. 

ಅಡ್ವಾನ್ಸ್ಡ್ ಹಾರ್ಟ್ ಫೇಲ್ಯೂರ್ ಮತ್ತು ಕಸಿ ಹೃದ್ರೋಗ ತಜ್ಞ ಡಾ. ರವಿ ಕುಮಾರ್ ಮಾತನಾಡಿ, ‘ಸಂಕೀರ್ಣ ಹೃದಯ-ಶ್ವಾಸಕೋಶ ಸಮಸ್ಯೆಗಳಿಗೆ ಬಹುವಿಭಾಗೀಯ ತಜ್ಞರ ಸಮನ್ವಯ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಘಟಕಗಳನ್ನು ಅದನ್ನು ಸಾಧ್ಯವಾಗಿಸಿ ವಿಶಿಷ್ಟ ಸೇವೆ ಒದಗಿಸಲಿದೆ’ ಎಂದರು. 

ಅಪೋಲೋ ಹಾಸ್ಪಿಟಲ್ ಶೇಷಾದ್ರಿಪುರಂನ ಉಪಾಧ್ಯಕ್ಷ ಶ್ರೀ ಉದಯ್ ದಾವ್ಡಾ ಅವರು ಮಾತನಾಡಿ, ‘ಈ ಹೊಸ ಸೌಲಭ್ಯದಿಂದ ಈ ಪ್ರದೇಶದ ಮಂದಿಗೆ ಮನೆಯ ಹತ್ತಿರವೇ ಅತ್ಯಾಧುನಿಕ ಹೃದಯ ಮತ್ತು ಶ್ವಾಸಕೋಶ ಕಸಿ ಸೌಲಭ್ಯ ಮತ್ತು ಮೆಕ್ಯಾನಿಕಲ್ ಸಪೋರ್ಟ್ ಸೇವೆಗಳು ದೊರೆಯಲಿವೆ’ ಎಂದರು. 

ಕರ್ನಾಟಕ ವಲಯದ ಅಪೋಲೋ ಹಾಸ್ಪಿಟಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಕ್ಷಯ್ ಓಲೇಟಿ ಅವರು, ‘ವಿಶೇಷ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕದೊಂದಿಗೆ ಕರ್ನಾಟಕದಲ್ಲಿ ಹೃದಯ ಮತ್ತು ಶ್ವಾಸಕೋಶ ಚಿಕಿತ್ಸಾ ವಿಭಾಗದಲ್ಲಿ ನಾವು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ’ ಎಂದರು.

ಬೆಂಗಳೂರಿನ ಶೇಷಾದ್ರಿಪುರನಲ್ಲಿರುವ ಅಪೋಲೋ ಹಾಸ್ಪಿಟಲ್ ವಿಶೇಷವಾದ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕ ಹಾಗೂ ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ (ಎಂಸಿಎಸ್) ಘಟಕವನ್ನು ಆರಂಭಿಸಿದೆ. ಈ ವಿಶೇಷ ಘಟಕಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿಶಂಕರ್ ಜೆ. ಐಎಎಸ್ ಸಮ್ಮುಖದಲ್ಲಿ ಆರಂಭಿಸಲಾಯಿತು. 

ಅಂಗಾಂಶ ಕಸಿ ಕ್ಷೇತ್ರದಲ್ಲಿ ಅಪೋಲೋ ಆಸ್ಪತ್ರೆಯು ಬಹಳಷ್ಟು ಸಮಯಗಳಿಂದ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಈಗ ಇದೇ ಮೊದಲ ಬಾರಿಗೆ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕವನ್ನು ಆರಂಭಿಸಿದೆ. ಇದರಿಂದ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ರೋಗಿಗಳಿಗೆ ಈ ಕೇಂದ್ರವು ಪ್ರಮುಖ ಕಸಿ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ಐಎಎಸ್ ಅವರು, ‘ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಂತಹ ಸಂದರ್ಭದಲ್ಲಿ ನಗರ ಸಾರಿಗೆ ವ್ಯವಸ್ಥೆಯು ತುರ್ತು ಚಿಕಿತ್ಸೆಗೆ ಬಹಳ ಅತ್ಯಗತ್ಯವಾಗಿದೆ. ಅಪೋಲೋದ ಈ ಹೊಸ ಯೋಜನೆಯು ಬೆಂಗಳೂರಿನಲ್ಲಿ ರೋಗಿಗಳ ಜೀವ ಉಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮತ್ತು ರೋಗಿಗಳ ಜೀವ ಉಳಿಸಲು ಬಿಎಂಆರ್‌ಸಿಎಲ್ ಸಂಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ’ ಎಂದು ಹೇಳಿದರು. 

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿನ ಈ ಹೊಸ ಘಟಕದಲ್ಲಿ ವಿಶೇಷ ಆಪರೇಷನ್ ಥಿಯೇಟರ್‌ಗಳು, ಕಸಿ ಮಾಡಲು ಸಿದ್ಧವಾದ ಐಸಿಯುಗಳು, ಅತ್ಯಾಧುನಿಕ ಮಾನಿಟರಿಂಗ್ ವ್ಯವಸ್ಥೆಗಳು ಮತ್ತು ವಿಶೇಷ ಸೌಲಭ್ಯಗಳಿವೆ. 

PREV
Read more Articles on

Recommended Stories

ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಗ್ಯಾಲಕ್ಸಿ ಎ17 5ಜಿ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?