ಕನ್ನಡಪ್ರಭವಾರ್ತೆ
ಮಧ್ಯಮವರ್ಗದ ಕುಟುಂಬಗಳಿಗೆ ನೆರವಾಗುವಂತಹ ಅನೇಕ ಬಜೆಟ್ ಫ್ರೆಂಡ್ಲಿ ಉತ್ಪನ್ನಗಳನ್ನು ನೀಡಿರುವ ಟಿಟಿಕೆ ಪ್ರೆಸ್ಟೀಜ್ ಕಂಪನಿ ಇದೀಗ ಪ್ರೆಸ್ಟೀಜ್ ಏರ್ ಫ್ಲಿಪ್ 4.5ಲೀ ಆಲ್-ಇನ್-ವನ್ ಏರ್ ಫ್ರೈಯರ್ ಆಂಡ್ ಗ್ರಿಲ್ ಉತ್ಪನ್ನ ಬಿಡುಗಡೆ ಮಾಡಿದೆ. ಇದು ಸಣ್ಣ ಕುಟುಂಬಗಳಿಗೆ ನಿಜವಾಗಿಯೂ ಆಕರ್ಷಕ ಉತ್ಪನ್ನವಾಗಿ ರೂಪುಗೊಂಡಿದೆ.ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಆರೋಗ್ಯ ಕಾಳಜಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಎಣ್ಣೆ ಬಳಸಿದ ಖಾದ್ಯಗಳನ್ನು ತಿನ್ನುವುದು ಇಷ್ಟವಿಲ್ಲ. ಆದರೆ ಸಮೋಸಾ, ಟಿಕ್ಕಿ, ಕಬಾಬ್, ಫಿಶ್ ಫ್ರೈ ತಿನ್ನಲು ಆಸೆಯಾಗುತ್ತಿರುತ್ತದೆ. ಅದಕ್ಕೆ ಏನು ಪರಿಹಾರ ಎಂದು ಹುಡುಕುತ್ತಿದ್ದ ಈ ಉತ್ಪನ್ನ ಬೆಸ್ಟು. ಯಾಕೆಂದರೆ ಪ್ರೆಸ್ಟೀಜ್ ಏರ್ ಫ್ಲಿಪ್ 4.5ಲೀ ಆಲ್-ಇನ್-ವನ್ ಏರ್ ಫ್ರೈಯರ್ ಆಂಡ್ ಗ್ರಿಲ್ ಉತ್ಪನ್ನದಲ್ಲಿ ಶೇ.80ರಷ್ಟು ಕಡಿಮೆ ಎಣ್ಣೆ ಬಳಸಿ ರುಚಿಕರವಾದ ಫ್ರೈ ಮತ್ತು ಗ್ರಿಲ್ ಮಾಡಬಹುದು. ಏನು ವಿಶೇಷ?ಬಹಳ ಸೊಗಸಾಗಿ ಪ್ರೆಸ್ಟೀಜ್ ಕಂಪನಿ ಈ ಉತ್ಪನ್ನ ವಿನ್ಯಾಸ ಮಾಡಿದೆ. ಆರಂಭದಲ್ಲಿ ಫ್ರೈಯರ್ ರೂಪದಲ್ಲಿರುವ ಈ ಉತ್ಪನ್ನವನ್ನು ತಿರುಗಿಸಿದರೆ ಸಾಕು, ಗ್ರಿಲ್ ಆಗಿ ಬದಲಾಗುತ್ತದೆ. ಡಬಲ್ ಆಕ್ಟಿಂಗ್ ಇದ್ದಂತೆ. ರೂಪ ಒಂದೇ. ಪಾತ್ರ ಬೇರೆ. ನೇರವಾಗಿಟ್ಟರೆ 4.5 ಲೀಟರ್ ಗಾಜಿನ ಬ್ಯಾಸ್ಕೆಟ್‌ನಲ್ಲಿ ಏರ್ ಫ್ರೈ ಮಾಡಬಹುದು. ಸೊಗಸಾದ ಫ್ರೆಂಚ್ ಫ್ರೈ ಸಿದ್ಧಪಡಿಸಬಹುದು. ಜಾಸ್ತಿ ಟೈಮೇ ಬೇಡ. ಅದೇ ಸ್ವಲ್ಪ ತಿರುಗಿಸಿದರೆ 27 ಸೆಂ.ಮೀನ ಫ್ಲಾಟ್ ಗ್ರಿಲ್ ಪ್ಯಾನ್ ಆಗಿ ಬದಲಾಗುತ್ತದೆ. ರುಚಿಕರ ಫಿಶ್ ಫ್ರೈ ಸಿದ್ಧಪಡಿಸಬಹುದು. ಇದರ ವಿಶೇಷತೆಯೆಂದರೆ 360° ಗಾಜು. ಹಾಗಾಗಿ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೇರವಾಗಿ ನೋಡಬಹುದು. ಇನ್ನಿತರ ಬ್ರಾಂಡ್ ಗಳ ಫ್ರೈಯರ್ ಗಳಂತೆ ಮತ್ತೆ ಮತ್ತೆ ತೆಗೆದುನೋಡುವ ಅಗತ್ಯ ಇರುವುದಿಲ್ಲ.ಬಳಕೆ ಎಷ್ಟು ಸುಲಭ?1500ವ್ಯಾಟ್ ಪವರ್‌ನ ಈ ಉತ್ಪನ್ನ 2 ನಿಮಿಷದಲ್ಲೇ ಬಿಸಿಯಾಗುತ್ತದೆ. ಇದರಲ್ಲಿ 5 ಪ್ರೀ-ಸೆಟ್ ಮೋಡ್‌ಗಳಿವೆ. ಫ್ರೈಸ್, ತರಕಾರಿ, ಮಾಂಸ, ಮೀನು, ಬೇಕಿಂಗ್ ಹೀಗೆ ಸಾಮಾಗ್ರಿಗೆ ತಕ್ಕಂತೆ ಮೋಡ್ ಗಳನ್ನು ಬಳಸಿಕೊಳ್ಳಬಹುದು. 1 ಚಮಚ ಎಣ್ಣೆ ಹಾಕಿ 15 ನಿಮಿಷದಲ್ಲಿ ಕ್ರಿಸ್ಪಿ ಆಲೂ ಟಿಕ್ಕಿ ರೆಡಿ ಮಾಡಬಹುದು. ಚಿಕನ್ ಟಿಕ್ಕಾ ಗ್ರಿಲ್ ಮಾಡಿದ್ರೆ ಆಹಾ ಎಂಥಾ ರುಚಿ. ಬಿಸಿ ಆರಿದ ಪರೋಟಾ, ತಣ್ಣಗಾದ ಪಿಜ್ಜಾವನ್ನು ಮತ್ತೆ ಬಿಸಿ ಮಾಡುವ ಇದರ ಸಾಮರ್ಥ್ಯ ನಿಜವಾಗಿಯೂ ನೆರವಾಗುತ್ತದೆ. ಮಧ್ಯಾಹ್ನ ಒಂದು ದೊಡ್ಡ ಪಿಜ್ಜಾ ತಂದರೆ ಸಂಜೆಯನ್ನೂ ಸುಧಾರಿಸಬಹುದು. ಮತ್ತೊಂದು ವಿಶೇಷವೆಂದರೆ ಹೊಗೆ ಇಲ್ಲದೆ ಅಡುಗೆ ಮಾಡಬಹುದು. ಹೊಗೆ ಬಂದು ಕೆಮ್ಮುವುದಕ್ಕಿಂತ ಈ ಉತ್ಪನ್ನ ಹಿತಕರ. ಇದು 4.5 ಲೀಟರ್ ಸಾಮರ್ಥ್ಯ ಹೊಂದಿರುವುದರಿಂದ 3-4 ಜನರಿಗೆ ಧಾರಾಳವಾಗಿ ಸಾಕಾಗುತ್ತದೆ. ಗ್ರಿಲ್ ಮೋಡ್‌ನಲ್ಲಿ ಪನೀರ್ ಟಿಕ್ಕಾ, ಮೀನು ಫ್ರೈ, ತರಕಾರಿ ಕಬಾಬ್ ಸೊಗಸಾಗಿ ತಯಾರಿಸಬಹುದು.ಗ್ಲಾಸ್ ಬಿಸಿಯಾದೀತು ಹುಷಾರುಗಾಜಿನ ಒಳಗೆ ನೋಡುತ್ತಾ ಕೈಯನ್ನು ಗಾಜಿಗೆ ತಾಗಿಸುವ ಕೆಲಸ ಮಾಡದಿರಿ. ಯಾಕೆಂದರೆ ಥಟ್ ಅಂತ ಬಿಸಿ ತಾಕಬಹುದು. ಹಾಗಾಗಿ ನಿಮ್ಮ ಹುಷಾರಲ್ಲಿ ನೀವು ಇರುವುದು ಒಳ್ಳೆಯದು. ಅದರ ಹೊರತಾಗಿ ಕೊಂಚ ಸೌಂಡ್ ಇದೆ. ಅದೇನೂ ಅಂಥಾ ವ್ಯತ್ಯಾಸ ಮಾಡುವುದಿಲ್ಲ. ಮತ್ತೊಂದು ಪ್ಲಸ್ ಏನೆಂದರೆ ಅಡುಗೆ ಮಾಡಿದ ಮೇಲೆ ಇದರ ಗಾಜಿನ ಬ್ಯಾಸ್ಕೆಟ್ ಅನ್ನು ಸುಲಭವಾಗಿ ಒಮ್ಮೆ ನೀರು ಹಾಕಿ ಒರೆಸಿದರೂ ಸಾಕಾಗುತ್ತದೆ. ಅನುಕೂಲತೆ ಮತ್ತು ಲಭ್ಯತೆಒಂದೇ ಸಾಧನದಲ್ಲಿ ಫ್ರೈ ಮತ್ತು ಗ್ರಿಲ್ ಸಾಮರ್ಥ್ಯ ಎರಡೂ ಬೇಕು ಅಂದುಕೊಳ್ಳುವ ನಾಲ್ಕೈದು ಜನರಿರುವ ಸಣ್ಣ ಕುಟುಂಬದ ಮಂದಿ ಇದನ್ನು ಧಾರಾಳವಾಗಿ ಪರಿಗಣಿಸಬಹುದು. ಎಣ್ಣೆ ಕಡಿಮೆ ಬಳಸಿ ಈ ಮೂಲಕ ರುಚಿಕರ ಖಾದ್ಯ ಸವಿಯಬಹುದು. ಕಂಪನಿ ₹12,595 ಬೆಲೆ ನಿಗದಿಪಡಿಸಿದೆ. ಒಂದು ವರ್ಷದ ವಾರಂಟಿ ಕೂಡ ಲಭ್ಯವಿದೆ. ಹಾಗಾಗಿ ಆರೋಗ್ಯಕರ, ರುಚಿಕರ ಖಾದ್ಯವನ್ನು ಸುಲಭವಾಗಿ ತಯಾರಿಸುವ ಆಸೆ ಇರುವವರು ಈ ಉತ್ಪನ್ನವನ್ನು ಗಮನಿಸಬಹುದು.