ಬಿಗ್‌ ಬಾಸ್‌ ಸಿಂಹಿಣಿ ಸಂಗೀತಾ ಶೃಂಗೇರಿಯ ಹೊಸ ಸಾಹಸ

Published : Nov 03, 2025, 01:13 PM IST
Sangeetha Sringeri

ಸಾರಾಂಶ

ಬಿಗ್‌ ಬಾಸ್‌ ಸಿಂಹಿಣಿಯ ಹೊಸ ಸಾಹಸ - 777 ಚಾರ್ಲಿ ಚಿತ್ರದ ಸಕ್ಸಲ್‌ಫುಲ್‌ ನಟಿ, ಬಿಗ್‌ಬಾಸ್‌ ಶೋನಲ್ಲಿ ಸಿಂಹಿಣಿ ಎಂದೇ ಜನಪ್ರಿಯರಾದ ಸಂಗೀತಾ ಶೃಂಗೇರಿ ಈಗೇನು ಮಾಡುತ್ತಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

 - ಆರ್‌. ಕೇಶವಮೂರ್ತಿ

ಬಿಗ್‌ ಬಾಸ್‌ ನಂತರ ಕಾಣೆಯಾದಂತಿದ್ದೀರಲ್ಲ?

ಬಿಗ್‌ಬಾಸ್‌ ನಂತರ ನನ್ನ ನಟನೆಯ ‘ಮಾರಿಗೋಲ್ಡ್‌’ ಚಿತ್ರ ಬಿಡುಗಡೆ ಆಗಿದೆ. ನನ್ನದೇ ಒಂದಿಷ್ಟು ಕೆಲಸಗಳಲ್ಲಿ ಬ್ಯುಸಿ ಆಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಗ್‌ ಬಾಸ್‌ನಿಂದ ಆಚೆ ಬಂದ ಮೇಲೆ ಎರಡು ವರ್ಷ ಕಾಶಿ ಸೇರಿದಂತೆ ನನ್ನ ಇಷ್ಟದ ತಾಣಗಳಿಗೆ ಪ್ರವಾಸ ಮಾಡಿದೆ, ಸ್ನೇಹಿತರ ಮನೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ನನ್ನ ಸ್ನೇಹಿತೆಯ ಮದುವೆ ಸಂಭ್ರಮವನ್ನು ಕಂಡ. ನನ್ನ ಜೊತೆಗೆ ನಾನು ಎರಡು ವರ್ಷ ಟೈಮ್‌ ಸ್ಪೆಂಡ್‌ ಮಾಡಿದೆ. ಕಾಣೆಯಾದೆ ಅಂತ ಯಾಕೆ ಅಂದ್ಕೊಬೇಕು!?

ಅಲ್ಲ, ಹೊಸ ಸಿನಿಮಾಗಳು ಯಾವು ಬಂದಿಲ್ವಾಲ್ಲ?

ದಿನ ಬೆಳಗಾಗೋದ್ರೊಳರಗೆ ಸಿನಿಮಾ ಘೋಷಣೆ ಮಾಡಬೇಕು, ಥಿಯೇಟರ್‌ಗೆ ಬಂದ್ಬಿಡ್ಬೇಕು ಅಂದರೆ ಹೇಗೆ!? ಅಂದು ಸಿನಿಮಾ. ಅಷ್ಟು ಸುಲಭ ಅಲ್ಲ. ನಾನು ಸಿನಿಮಾವನ್ನು ಸುಲಭಕ್ಕೆ ಪರಿಗಣಿಸಿಲ್ಲ. ಬಂದಿದ್ದೆಲ್ಲ ಒಪ್ಪಿಕೊಳ್ಳುತ್ತಾ ಹೋಗೋ ಜಾಯಮಾನ ಅಲ್ಲ ನನ್ನದು.

ಹಾಗಾದರೆ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ?

ಒಪ್ಪಿಕೊಂಡಿದ್ದೇನೆ. ಶೂಟಿಂಗ್‌ ಮುಗಿದಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್‌ ನಂ 3 ಹೆಸರಿನಲ್ಲಿ ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ಶುರುವಾಗಿದೆ. ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಶೂಟಿಂಗ್‌ ಮಾಡಿದ್ದೇವೆ. ಕನ್ನಡಕ್ಕೆ ನಿಶ್ಚಿತ್‌ ಕರೋಡಿ ನಾಯಕ, ತಮಿಳಿಗೆ ಗಣೇಶ್‌ ಎಂಬವರು ಹೀರೋ. ಎರಡೂ ಭಾಷೆಗೆ ನಾನೇ ನಾಯಕಿ. ‘ರಂಗನಾಯಕಿ’ ಚಿತ್ರ ನಿರ್ಮಿಸಿದ್ದ ನಾರಾಯಣ್‌ ಅವರೇ ಈ ಚಿತ್ರಕ್ಕೂ ನಿರ್ಮಾಪಕರು. ಜಗನ್‌ ನಿರ್ದೇಶಕರು.

ಯಾವ ರೀತಿಯ ಸಿನಿಮಾ ಇದು?

ಪಕ್ಕಾ ಹಾರರ್‌ ಸಿನಿಮಾ. ಫೀಮೇಲ್‌ ಸೆಂಟ್ರಿಕ್‌ ಎಂಬುದು ಚಿತ್ರದ ವಿಶೇಷತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಕತೆ ತುಂಬಾ ಚೆನ್ನಾಗಿದೆ. ಪಾತ್ರಗಳು ಕೂಡ ವಿಶೇಷವಾಗಿ ಮೂಡಿ ಬಂದಿವೆ.

ನಿಮಗೆ ಈ ಸಿನಿಮಾ ಹೇಗೆ ವಿಶೇಷತೆ?

ನಾನು ಇದುವರೆಗೂ ಹಾರರ್‌ ಚಿತ್ರದಲ್ಲಿ ನಟಿಸಿಲ್ಲ. ಈ ಚಿತ್ರವೇ ಮೊದಲು. ನನ್ನ ಪಾತ್ರದ ಹೆಸರು ಗಾಯತ್ರಿ. ಮಾಡ್ರನ್‌ ಲೈಫ್‌ ಸ್ಟೈಲ್‌ ಹುಡುಗಿ. ಹಳ್ಳಿಯಿಂದ ನರಗಕ್ಕೆ ಬಂದಿರುವ ಹುಡುಗಿ ನಾನು. ರೋಮ್ಯಾಂಟಿಕ್‌ ಸೀನ್ಸ್‌ ಈ ಚಿತ್ರದಲ್ಲಿವೆ. ನಾನು ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಚಿತ್ರದಲ್ಲಿ ಮಾಡುತ್ತಿದ್ದೇನೆ.

ಆದರೂ ತುಂಬಾ ಸಿನಿಮಾಗಳು ಒಪ್ಪಿಕೊಂಡಿಲ್ಲ ಅನಿಸುತ್ತದೆ ಯಾಕೆ?

ಕ್ವಾಟಿಂಟಿಗಿಂತ ಕ್ವಾಲಿಟಿಗೆ ಮಹತ್ವ ಕೊಟ್ಟೆ. ಸಿನಿಮಾಗಳು ಮಾತ್ರವಲ್ಲ, ‘ಮಹಾನಟಿ’ ಸೇರಿದಂತೆ ಒಂದಿಷ್ಟು ರಿಯಾಲಿಟಿ ಶೋಗಳ ನಿರೂಪಣೆ, ಜಾಹೀರಾತು, ಈವೆಂಟ್‌ಗಳು ತುಂಬಾ ಬಂದವು. ಯಾವುದನ್ನೂ ನಾನು ಒಪ್ಪಿಕೊಂಡಿಲ್ಲ. ಒಂದು ಶೋನಿಂದ ಸಿಕ್ಕ ಜನಪ್ರಿಯತೆಯನ್ನು ಬಳಸಿಕೊಂಡು ಸಂಖ್ಯೆಗಾಗಿ ಸಿನಿಮಾಗಳನ್ನು ಮಾಡುವ ಅಗತ್ಯ ನನಗಿ ಇರಲಿಲ್ಲ. ಸಿನಿಮಾ ಒಪ್ಪಿಕೊಳ್ಳುವುದು ಎಂದರೆ ಅದು ಬರೀ ಸಿನಿಮಾ ಆಗಿರಲ್ಲ. 50 ದಿನಗಳ ಕಾಲ ಒಟ್ಟಿಗೆ ಕೆಲಸ ಮಾಡುವ ತಂಡ. ಪ್ಯಾಷನ್‌ಗಾಗಿ ಸಿನಿಮಾ ಮಾಡುವವರಾ, ನನ್ನ ಪಾತ್ರ, ಕತೆ ಏನು, ಇಲ್ಲಿ ಸಂಭಾವನೆ ವಿಚಾರ, ಅಂದುಕೊಂಡಂತೆ ಸಿನಿಮಾ ಬಿಡುಗಡೆ ಮಾಡುತ್ತಾರೆಯೇ... ಇವೆಲ್ಲ ನೋಡಬೇಕಿರುತ್ತದೆ.

‘777 ಚಾರ್ಲಿ’, ಬಿಗ್‌ಬಾಸ್‌ ನಂತರ ನಿಮ್ಮ ಲೈಫ್‌ ಹೇಗಿದೆ?

ಈ ಚಿತ್ರದ ನಂತರ ನಾನು ವಾರಕ್ಕೆ ನಾಲ್ಕೈದು ಕತೆಗಳನ್ನು ಕೇಳುತ್ತಿದ್ದೆ. ಕತೆ ಚೆನ್ನಾಗಿದ್ದರೆ ನಿರ್ಮಾಪಕರು ಇರುತ್ತಿರಲಿಲ್ಲ. ಕೆಲವರು ನೀವೇ ನಿರ್ಮಾಪಕರನ್ನು ಕೊಡಿಸಿ ಅಂತಿದ್ದರು. ನಿರ್ಮಾಪಕರು ಇದ್ದರೆ ಕತೆ ಚೆನ್ನಾಗಿರುತ್ತಿರಲಿಲ್ಲ. ಬಿಗ್‌ ಬಾಸ್‌ ನಂತರ ಫೇಮ್‌ ಬಂತು, ‘777 ಚಾರ್ಲಿ’ ನಂತರ ಫಿಲಮ್ಸ್‌ ಬಂದವು.

ನಿಮ್ಮ ಇಷ್ಟದ ಬ್ಯುಸಿನೆಸ್‌ ಅಂತೇಳಿದ್ರಿ, ಯಾವುದು?

ಕ್ರಿಸ್ಟಲ್‌ ಬ್ಯುಸಿನೆಸ್‌. ‘ಸಿಂಹಿಣಿ ಬೈ ಸಂಗೀತಾ ಶೃಂಗೇರಿ’ ಅಂತಲೇ ಹೆಸರು. ಎಲ್ಲಾ ರೀತಿಯ ಕ್ರಿಸ್ಟಲ್‌ ಮೆಟಿರಿಯಲ್‌ ಇಲ್ಲಿ ಸಿಗುತ್ತವೆ.

PREV
Read more Articles on

Recommended Stories

ಭಾರತದ ಹುಡ್ಗೀರ್‌ಗೆ ವಿಶ್ವ ಕಿರೀಟ : ಭಾರತಕ್ಕೆ ಚೊಚ್ಚಲ ವಿಶ್ವಕಪ್‌
ರಾಷ್ಟ್ರ ನಿರ್ಮಾಣಕ್ಕೆ ಎಂಎಸ್ಎಂಇ, ಸ್ಟಾರ್ಟ್ಅಪ್ ಕೊಡುಗೆ