)
ನವದೆಹಲಿ: ಆರೋಗ್ಯ ವಿಮೆ ಕ್ಲೇಮು ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ನಗದುರಹಿತ ವಿಮೆ ಪಾವತಿ ಬೇಡಿಕೆಯನ್ನು 1 ಗಂಟೆಯಲ್ಲಿ ಅನುಮೋದಿಸುವುದು ಮತ್ತು 3 ಗಂಟೆಗಳಲ್ಲಿ ಅಂತಿಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ನಿರ್ಧಾರದಿಂದಾಗಿ, ಜನರಲ್ಲಿ ವಿಮೆಯ ಪ್ರತಿ ವಿಶ್ವಾಸ ವೃದ್ಧಿಯಾಗಿ, ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ವೆಚ್ಚ ಅತಿಕಡಿಮೆ:ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತೀಯರು ಆರೋಗ್ಯದ ಮೇಲೆ ಅತಿ ಕಡಿಮೆ ಖರ್ಚು ಮಾಡುತ್ತಿದ್ದಾರೆ. 2013–14 ಅವಧಿಯಲ್ಲಿ ಶೇ.3.9ರಷ್ಟು ವಿಮೆದಾರರು ಇದ್ದರೆ, 2022–23ರ ಹೊತ್ತಿಗೆ ಇದು ಕೇವಲ ಶೇ.4ಕ್ಕೆ ಏರಿಕೆಯಾಗಿದೆ. ಇದು ಬ್ರೆಜಿಲ್, ಶ್ರೀಲಂಕಾ, ಥಾಯ್ಲೆಂಡ್‌ಗಿಂತಲೂ ಕಡಿಮೆ.