ಬೆಂಗಳೂರಿನಲ್ಲಿ ಹೊಸ ಗ್ಲೋಬಲ್ ಕೆಪಾಸಿಟಿ ಸೆಂಟರ್ ಉದ್ಘಾಟಿಸಿದ ಡೀಪ್‌ವಾಚ್

KannadaprabhaNewsNetwork |  
Published : Nov 20, 2025, 12:00 AM IST
ಜಿಸಿಸಿ | Kannada Prabha

ಸಾರಾಂಶ

ಬಹುರಾಷ್ಟ್ರೀಯ ಕಂಪನಿ ಆಗಿರುವ ಡೀಪ್‌ವಾಚ್‌ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಾಧುನಿಕ ಕಚೇರಿ ಉದ್ಘಾಟನೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆಎಐ ಮತ್ತು ಮಾನವ ಶಕ್ತಿಯಿಂದ ಕಾರ್ಯನಿರ್ವಹಿಸುವ ಪ್ರಿಸಿಷನ್ ಎಂಡಿಆರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೀಪ್‌ವಾಚ್ ಕಂಪನಿಯು ಇಂದು ಬೆಂಗಳೂರಿನಲ್ಲಿ ತನ್ನ ಹೊಚ್ಚ ಹೊಸ ಅತ್ಯಾಧುನಿಕ ಕಚೇರಿಯನ್ನು (ಗ್ಲೋಬಲ್‌ ಕೆಪಾಸಿಟಿ ಸೆಂಟರ್) ಉದ್ಘಾಟಿಸಿದೆ.ಕಂಪನಿಯ ಜಾಗತಿಕ ಮಟ್ಟದ ವಿಸ್ತರಣಾ ಯೋಜನೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಡೀಪ್‌ವಾಚ್‌ ಕಂಪನಿಯ ಈ ಅತ್ಯಾಧುನಿಕ ಕಚೇರಿಯು ಸಂಸ್ಥೆಯ ಪ್ರಧಾನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಇದರ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಮತ್ತು ತೀವ್ರಗೊಳಿಸಲಿದೆ.ಬೆಂಗಳೂರಿನಲ್ಲಿ ಈ ಹೊಸ ಜಿಸಿಸಿ ಸ್ಥಾಪಿಸಿರುವುದರಿಂದ ಡೀಪ್‌ವಾಚ್ ಸಂಸ್ಥೆಗೆ ಭಾರತದ ಅತ್ಯುತ್ತಮ ಸಾಫ್ಟ್‌ ವೇರ್, ಏಜೆಂಟಿಕ್ ಎಐ ಮತ್ತು ಸೈಬರ್ ಸೆಕ್ಯುರಿಟಿ ಎಂಜಿನಿಯರ್‌ಗಳ ಪ್ರತಿಭಾ ಸಮೂಹವನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ. ಈ ಕೇಂದ್ರದಿಂದ ಸಂಸ್ಥೆಯ ನಾವೀನ್ಯತೆ ಮತ್ತು ಅಭಿವೃದ್ಧಿ ವೇಗ ಹೆಚ್ಚುವುದರ ಜೊತೆಗೆ, ಗ್ರಾಹಕರು ವಿಶ್ವಾಸ ಇಟ್ಟಿರುವ ಸೇವಾ ಮಾದರಿ ಮತ್ತು ಬೆಂಬಲ ವ್ಯವಸ್ಥೆಯನ್ನು ಅದೇ ಗುಣಮಟ್ಟದಲ್ಲಿ ನಿರ್ವಹಿಸುವುದು ಸಾಧ್ಯವಾಗಲಿದೆ.ಈ ಸಂದರ್ಭದಲ್ಲಿ ಮಾತನಾಡಿದ ಡೀಪ್‌ವಾಚ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಡಿಲುಲ್ಲೊ ಅವರು, ‘ಬೆಂಗಳೂರಿನಲ್ಲಿರುವ ಈ ಹೊಸ ಕಚೇರಿಯು ಕೇವಲ ಕಚೇರಿ ಮಾತ್ರವೇ ಅಲ್ಲ, ಬದಲಿಗೆ ಸೈಬರ್ ಉದ್ಯಮಕ್ಕೆ ಅತ್ಯುತ್ತಮ ಎಐ ಆಧರಿತ ಪರಿಹಾರೋತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ. ಭಾರತದಲ್ಲಿನ ನಮ್ಮ ತಂಡವು ಸಾಮಾನ್ಯ ದಿನವಹಿ ಕೆಲಸಗಳನ್ನು ಅದ್ಭುತ ರೀತಿಯಲ್ಲಿ ಬದಲಾಯಿಸುವ ಕೆಲಸ ಮಾಡುತ್ತಿದೆ. ನಮ್ಮ ಏಜೆಂಟಿಕ್ ಉತ್ಪನ್ನಗಳು ಗ್ರಾಹಕರನ್ನು ಸೈಬರ್ ಅಪರಾಧಗಳ ದಾಳಿಯಿಂದ ರಕ್ಷಿಸುವುದರ ಜೊತೆಗೆ, ಜಾಗತಿಕ ಎಸ್ಓಸಿ ಕಾರ್ಯಾಚರಣೆಗಳ ದಕ್ಷತೆ ಹೆಚ್ಚಿಸಿ, ಅತಿಯಾಗಿ ದುಡಿಯುತ್ತಿರುವ ವಿಶ್ಲೇಷಕರ ಜೀವನವನ್ನು ನಿರಾಳಗೊಳಿಸುತ್ತಿವೆ. ಈ ಗುರಿ ಸಾಧೆಯ ಪಯಣವನ್ನು ಮತ್ತಷ್ಟು ತೀವ್ರಗೊಳಿಸಲು ನಮಗೆ ಭಾರತವೇ ಸರಿಯಾದ ಸ್ಥಳ ಎಂಬುದರ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ’ ಎಂದು ಹೇಳಿದರು.

ಈ ಜಿಸಿಸಿ ರಾತ್ರಿ-ಹಗಲೆನ್ನದೆ ಅಭಿವೃದ್ಧಿ ಚಟುವಟಿಕೆಗಳು ಮತ್ತು ವಿವಿಧ ದೇಶಗಳ ತಂಡಗಳ ನಡುವೆ ಸಹಯೋಗದ ಕೆಲಸಗಳು ನಡೆಯಲು ಅನುವು ಮಾಡಿಕೊಡುತ್ತದೆ. ಇದರಿಂದ ಎಲ್ಲಾ ದೇಶಗಳ ಗ್ರಾಹಕರಿಗೂ ತ್ವರಿತವಾಗಿ ಹೊಸ ಅಪ್ ಗ್ರೇಡ್ ಗಳು ದೊರೆಯುವುದು ಸಾಧ್ಯವಾಗಲಿದೆ. ಹೊಸ ಕಚೇರಿಯಲ್ಲಿ ಆಧುನಿಕ ಸೌಲಭ್ಯಗಳು, ಸಹಯೋಗಕ್ಕೆ ಸೂಕ್ತವಾದ ಕೆಲಸದ ವಾತಾವರಣ ನಿರ್ಮಿಸಲಾಗಿದ್ದು, ಇದು ಡೀಪ್‌ವಾಚ್‌ನ ಭಾರತದ ಕಾರ್ಯಾಚರಣೆಗಳ ಪ್ರಾದೇಶಿಕ ಕೇಂದ್ರವಾಗಿ ಕೆಲಸ ಮಾಡಲಿದೆ. ಎಐ ಮತ್ತು ಮಾನವ ಶಕ್ತಿಯನ್ನು ಬಳಸಿಕೊಂಡು ಶ್ರೇಷ್ಠ ಸೈಬರ್ ಸೆಕ್ಯೂರಿಟಿ ಸೇವೆ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಮುಂದಿನ ಒಂದು ವರ್ಷದಲ್ಲಿ ಎಂಜಿನಿಯರಿಂಗ್, ಕ್ಲೌಡ್ ಕಾರ್ಯಾಚರಣೆ ಮತ್ತು ಪ್ರೊಡಕ್ಟ್ ವಿಭಾಗಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ನೇಮಕಾತಿ ನಡೆಸಲು ಕಂಪನಿ ಯೋಜನೆ ಹಾಕಿಕೊಂಡಿದೆ ಮತ್ತು ಬೆಂಗಳೂರು ಮೂಲದ ತಂಡವನ್ನು ಬೆಳೆಸುವ ಉದ್ದೇಶ ಹೊಂದಿದೆ.ಡೀಪ್‌ವಾಚ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸಾದ್ ಚನ್ನಬಸಪ್ಪ ಅವರು ಮಾತನಾಡಿ, ‘ಈ ಇಂಡಿಯಾ ಜಿಸಿಸಿಯು ನಮ್ಮ ಸೈಬರ್ ಸಾಮರ್ಥ್ಯವನ್ನು ದೊಡ್ಡ ಮಟ್ಟದಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯುವ ಬದ್ಧತೆಗೆ ಉತ್ತಮ ಪುರಾವೆಯಾಗಿದೆ. ಭಾರತದಲ್ಲಿ ಸಿಗುವ ಅಪಾರವಾದ ಸೈಬರ್ ಸೆಕ್ಯುರಿಟಿ ಪ್ರತಿಭೆಗಳಿಂದ ನಮಗೆ ವಿಶೇಷ ಲಾಭವಿದೆ. ಉತ್ಪನ್ನ ನಾವೀನ್ಯತೆಯನ್ನು ವೇಗಗೊಳಿಸುವುದು, ಥ್ರೆಟ್ ಇಂಟೆಲಿಜೆನ್ಸ್ ಸಾಮರ್ಥ್ಯವನ್ನು ಬಲಪಡಿಸುವುದು, ಜಾಗತಿಕ ಗ್ರಾಹಕರಿಗೆ ಮುಂದಿನ ತಲೆಮಾರಿನ ಮ್ಯಾನೇಜ್ಡ್ ಸೆಕ್ಯುರಿಟಿ ಸೇವೆಗಳನ್ನು ಒದಗಿಸುವುದು ಈ ಎಲ್ಲಾ ಕೆಲಸಗಳಿಗೂ ಈ ಕೇಂದ್ರ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಈ ಕಚೇರಿಯು ಕೇವಲ ಉಪಸ್ಥಿತಿ ವಿಸ್ತರಣೆ ಮಾತ್ರವೇ ಅಲ್ಲ, ಇಡೀ ಜಗತ್ತಿಗೆ ಭಾರತದಿಂದ ಬುದ್ಧಿವಂತ ಮತ್ತು ಶ್ರೇಷ್ಠ ಸೆಕ್ಯುರಿಟಿ ಒದಗಿಸುವ ಒಂದು ಭವಿಷ್ಯದ ವ್ಯವಸ್ಥೆಯನ್ನು ಕಟ್ಟುವ ಒಂದು ಮಹಾನ್ ಶಕ್ತಿಯಾಗಿದೆ’ ಎಂದು ಹೇಳಿದರು.

PREV

Recommended Stories

ಗಮನ ಸೆಳೆಯುತ್ತಿರುವ 14 ವರ್ಷದ ಕ್ರೀಡಾ ಪಾಡ್‌ಕಾಸ್ಟರ್‌ ಮನನ್‌ ಪೆರಿವಾಲ್‌
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು