ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಂಘಟಣೆಯ ಜಿಲ್ಲಾಧ್ಯಕ್ಷ ಮಾರುತಿ ಕೊಂಡೂರ ಮಾತನಾಡಿ, ಸುಮಾರು 20 ವರ್ಷಗಳಿಂದ 20ಕ್ಕೂ ಹೆಚ್ಚು ಕುಟುಂಬಗಳು ಪ್ಲಾಸ್ಟಿಕ್ ಹೋದಿಕೆಯ ಗುಡಿಸಲು ಹಾಕಿಕೊಂಡು ನಿತ್ಯ ಉಪಜೀವನ ಸಾಗಿಸುತ್ತಿದ್ದು, ಮಳೆ, ಚಳಿ, ಬೇಸಿಗೆಗಾಲದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮೂಲಭೂತ ಸೌಕರ್ಯಗಳಿಂದ ತುಂಬಾ ವಂಚಿತವಾಗಿದೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ನಮ್ಮ ಮನವಿಗೆ ಯಾವುದೇ ರೀತಿ ಸ್ಪಂದನೆ ಸಿಗುತ್ತಿಲ್ಲವೆಂದು ಅಪಾದಿಸಿದರು. ಇನ್ನಾದರೂ ಎಚ್ಚೆತ್ತುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ದುರ್ಗಪ್ಪ ಕುಂದ್ರೋಲ, ಹುಸೇನಿ ದೇವರಶಟ್ಟಿ, ಯಲ್ಲಪ್ಪ ಮೋಗಸಲಿ, ನಾಗರಾಜ ಸಿದ್ನಲ, ಪಕ್ಕಿರವ್ವ ದೇವರಶೆಟ್ಟಿ, ಅಶ್ವಿನಿ ಕುಂದ್ರೋಲ, ಯಮನಕ್ಕ ದೇವರಶಟ್ಟಿ, ಮಂಜುಳಾ ಸಿದ್ನಲ, ಅಕ್ಕವ ಸಮಟಿ, ಭೀಮಕ್ಕ ದೇವರಶಟ್ಟಿ, ಯಲ್ಲವ್ವ ದುರ್ಗಮರ್ಗಿ, ಸೋಣವ್ವ ದುರ್ಗಮರ್ಗಿ, ಮಂಜಾವ್ವ ಕೊನಪೊಲಾ ಮುಂತಾದವರು ಇದ್ದರು.