ಬೆಂಗಳೂರು : ‘ಮ್ಯಾಜಿಕ್ ಟಚ್’ ಆರ್ಟ್ಸ್ ಸ್ಕೂಲ್‌ನಿಂದ ಭಾನುವಾರ ಮತ್ತು ಸೋಮವಾರ ಆರ್.ವಿ.ರಸ್ತೆಯ ಅರಿಹಂತ್ ಗ್ರೂಪ್ ಆಫ್ ಇನ್‌ಸ್ಟಿಟಿಟ್ಯೂಷನ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಕಲಾ ಪ್ರದರ್ಶನಕ್ಕೆ ಕಲಾ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಮ್ಯಾಜಿಕ್ ಈಸ್ ಇನ್ ಮೈ ಹ್ಯಾಂಡ್ 4.0’ ಘೋಷವಾಕ್ಯದಡಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದು ಭಾನುವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಿಸಲಾಯಿತು. ಚಿತ್ರಕಲಾ ಪರಿಷತ್‌ನ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ಪ್ರಾಂಶುಪಾಲೆ ಗೋಮತಿ ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಣ್ಣು, ಹೃದಯ ಮತ್ತು ಮನಸ್ಸಿಗೆ ಚಿಕಿತ್ಸೆ ಪಡೆಯಲು ಭೇಟಿ ನೀಡಿ ಎಂಬ ಸುಂದರ ಕಲ್ಪನೆಯೊಂದಿಗೆ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಪ್ರಸಿದ್ಧ ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು, ಜನಜೀವನ, ವಿದ್ಯಾರ್ಥಿಗಳು ರಚಿಸಿದ್ದ ಕಲಾಕೃತಿಗಳು ಸುಂದರವಾಗಿ ಮೂಡಿಬಂದಿದ್ದು ಪ್ಷೇಕ್ಷಕರ ಮನಸೂರೆಗೊಂಡವು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಲಾಕೃತಿಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.