ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಿಲನ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಂ.ಕೆ.ಕವಟಗಿಮಠ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸತತ 2 ಪ್ರಥಮ ಹಾಗೂ ಕಳೆದ 17 ವರ್ಷಗಳಿಂದ ಉತ್ತಮ ಫಲಿತಾಂಶದೊಂದಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೂತನ ತಂತ್ರಜ್ಞಾನ ಬಳಸಿ ಪೆನಾಲ್ ಬೋರ್ಡ್‌ಗಳಿಂದ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಶಿಕ್ಷಕ ಶಿವಾನಂದ ಗುಂಡಾಳಿ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೇ ಮಾತ್ರ ಉತ್ತಮ ದಾರಿಯಲ್ಲಿ ಸಾಗಬಹುದು. ಮೊಬೈಲ್‌ದಿಂದ ವಿದಾರ್ಥಿಗಳ ಶಿಕ್ಷಣದ ಮೇಲೆ ಪೆಟ್ಟು ಬಿಳುತ್ತಿದೆ. ಮಕ್ಕಳಿಗೆ ಪುಸ್ತಕ ಕೊಡಿಸಿ ಮೊಬೈಲ್ ಬಳಕೆ ಬಿಡಿಸಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಬಿ.ಡಿ.ರುಕಡೆ ವಾರ್ಷಿಕ ವರದಿ ಮಂಡಿಸಿದರು. ಎಸ್.ಐ.ಬಿಸ್ಕೋಪ, ಡಿ.ಎಸ್.ಕೋಳಿ ಉಪಸ್ಥಿತರಿದ್ದರು. ಪ್ರೀತಿ ಕಾಂಬಳೆ ಸ್ವಾಗತಿಸಿದಳು. ಸಂದ್ಯಾ ಮೇತ್ರಿ ನಿರೂಪಿಸಿದಳು. ಪ್ರಜ್ವಲ ಕೂಟಬಾಗಿ ವಂದಿಸಿದನು.