ಶಿವಮೊಗ್ಗ: ಆಂಬುಲೆನ್ಸ್‌ ಮೂಲಕ ಹಾರ್ಟ್‌ ಪೇಸೆಂಟ್‌ ಮಣಿಪಾಲ ಆಸ್ಪತ್ರೆಗೆ ರವಾನೆ

KannadaprabhaNewsNetwork |  
Published : Jan 12, 2024, 01:45 AM ISTUpdated : Jan 12, 2024, 05:15 PM IST
ಪೊಟೋ: 11ಎಸ್ಎಂಜಿಕೆಪಿ08ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಏರ್‌ ಆಂಬುಲೆನ್ಸ್‌ ಮೂಲಕ ಎದೆ ನೋವಿನಿಂದ ಬಳಲುತ್ತಿದ್ದ  ವ್ಯಕ್ತಿಯನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  | Kannada Prabha

ಸಾರಾಂಶ

ಎದೆ ನೋವಿನಿಂದ ಬಳಲುತ್ತಿದ್ದ ಶಿವಮೊಗ್ಗದ ಗಾಂಧಿ ಬಜಾರ್‌ ನಿವಾಸಿಯೊಬ್ಬರನ್ನು ಏರ್‌ ಆಂಬುಲೆನ್ಸ್‌ ಮೂಲಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚೇತನ್‌ ಎಂಬುವವರು ಜ.8ರಂದು ನೆಹರು ಕ್ರೀಡಾಂಗಣದಲ್ಲಿ ಜಾಗಿಂಗ್‌ ವೇಳೆ ಕುಸಿದು ಬಿದ್ದಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎದೆ ನೋವಿನಿಂದ ಬಳಲುತ್ತಿದ್ದ ಶಿವಮೊಗ್ಗದ ಗಾಂಧಿ ಬಜಾರ್‌ ನಿವಾಸಿಯೊಬ್ಬರನ್ನು ಏರ್‌ ಆಂಬುಲೆನ್ಸ್‌ ಮೂಲಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚೇತನ್‌ ಎಂಬುವವರು ಜ.8ರಂದು ನೆಹರು ಕ್ರೀಡಾಂಗಣದಲ್ಲಿ ಜಾಗಿಂಗ್‌ ವೇಳೆ ಕುಸಿದು ಬಿದ್ದಿದ್ದರು. 

ತಕ್ಷಣ ಅವರನ್ನು ಪಕ್ಕದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ಹಿನ್ನೆಲೆ ಏರ್‌ ಆಂಬುಲೆನ್ಸ್‌ ಬಳಸಿಕೊಳ್ಳಲಾಗಿದೆ. 

ಇದೆ ಮೊದಲ ಬಾರಿ ಶಿವಮೊಗ್ಗ ವಿಮಾನ ನಿಲ್ದಾಣದವನ್ನು ಏರ್‌ ಆಂಬುಲೆನ್ಸ್‌ಗಾಗಿ ಬಳಸಿಕೊಳ್ಳಲಾಗಿದೆ. ಚೇತನ್‌ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲು ಚೆನ್ನೈನಲ್ಲಿರುವ ಏರ್‌ ಆಂಬುಲೆನ್ಸ್‌ಗೆ ಸಂಪರ್ಕಿಸಲಾಗಿತ್ತು. 

ಬುಧವಾರ ಸಂಜೆ ವೇಳಗೆ ಏರ್‌ ಆಂಬುಲೆನ್ಸ್‌ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಗುರುವಾರ ಬೆಳಗ್ಗೆ ವಿಸಿಬಲಿಟಿ ಸಮಸ್ಯೆಯಿಂದಾಗಿ ಏರ್‌ ಆಂಬುಲೆನ್ಸ್‌ ಟೇಕ್‌ ಆಫ್‌ ಆಗಲಿಲ್ಲ. 

ಮಧ್ಯಾಹ್ನ 1.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿದೆ. ಮಧ್ಯಾಹ್ನ 1.40ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ವಿಶೇಷ ಆಂಬುಲೆನ್ಸ್‌ ಮೂಲಕ ಚೇತನ್‌ ಅವರನ್ನು ಕರೆದೊಯ್ದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

PREV

Recommended Stories

ಶೂನ್ಯ ಸಂಪಾದನೆಯ ವರ್ಷದಲ್ಲಿ ಐದು ಐತಿಹಾಸಿಕ ಸಂಗತಿಗಳು
ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ