ಕನ್ನಡಪ್ರಭ ವಾರ್ತೆ ಬೆಂಗಳೂರು
22.14 ಕಿಮೀ ಎತ್ತರಿಸಿದ ಮಾರ್ಗ ಹಾಗೂ 14.45 ಕಿಮೀ ಸುರಂಗ ಮಾರ್ಗ ಸೇರಿ ಕೆಂಪು ಮಾರ್ಗವು ಒಟ್ಟು 36.55ಕಿಮೀ ಉದ್ದವಿರಲಿದೆ. ಪ್ರತಿ ಕಿಲೋಮೀಟರ್‌ಗೆ ₹ 776.3 ಕೋಟಿಯಂತೆ ಒಟ್ಟಾರೆ ₹ 28,405 ಅಂದಾಜು ವೆಚ್ಚದ ವಿಸ್ತ್ರತ ಯೋಜನಾ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿ ಯೋಜನೆ ಅನುಮೋದನೆಗೆ ಕೋರಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ವೆಚ್ಚ ನಿಗದಿತ ಮಾನದಂಡಕ್ಕಿಂತ ಹೆಚ್ಚಾಗಿದ್ದು, ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಸೂಚನೆ ಮೇರೆಗೆ ಸ್ವತಂತ್ರ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ಪಡೆದು ಕೇಂದ್ರಕ್ಕೆ ಸಲ್ಲಿಸಲಾಗುವುದು. ಯೋಜನಾ ವೆಚ್ಚಕ್ಕೆ ಕಾರಣವೇನು ಎಂಬುದರ ಬಗ್ಗೆ ವಿಸ್ತ್ರತವಾಗಿ ವರದಿ ರೂಪಿಸಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.ಕೇಂದ್ರ ಸರ್ಕಾರ ಮತ್ತು ಬಾಹ್ಯ ಮೂಲಗಳಿಂದ ಸಾಲ ಪಡೆಯಲು ಕೇಂದ್ರದಿಂದ ಒಪ್ಪಿಗೆ ದೊರೆತ ಬಳಿಕ ರಾಜ್ಯ ಸರ್ಕಾರ ಕಳೆದ ವರ್ಷ ಡಿಸೆಂಬರ್ 24ರಂದು ತನ್ನ ಒಪ್ಪಿಗೆ ನೀಡಿತ್ತು. ಬಳಿಕ ಕಾಳೇನಅಗ್ರಹಾರ-ನಾಗವಾರ ‘ಗುಲಾಬಿ’ ಮಾರ್ಗ ಯೋಜನೆಯ ಮಾದರಿಯಾಗಿ ಇಟ್ಟುಕೊಂಡು ಬಿಎಂಆರ್‌ಸಿಎಲ್ ಕೆಂಪು ಮಾರ್ಗದ ಯೋಜನೆಯ ವರದಿಯನ್ನು ತಯಾರಿಸಿತ್ತು.
ಕೆಂಪು ಮಾರ್ಗ: