ಸರ್ಜಾಪುರದಲ್ಲಿ ಕುಡಿವ ನೀರು ಕೇಳಿದರೆ ಕೇಸು ಗ್ಯಾರಂಟಿ!

KannadaprabhaNewsNetwork |  
Published : Apr 08, 2026, 01:30 AM IST
07ಕೆಪಿಎಲ್ಎನ್ಜಿ01 : | Kannada Prabha

ಸಾರಾಂಶ

ಜನರಿಗೆ ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳ ಒದಗಿಸಲು ವಿಫಲರಾದ ಪಿಡಿಒ ರವರ ಮೇಲೆ ಕ್ರಮ ಜರುಗಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿ ಕೂಡಲೇ ಕೇಸು ರದ್ದುಪಡಿಸಬೇಕೆಂದು ಸರ್ಜಾಪುರ ಗ್ರಾಮಸ್ಥರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರುಬಿಸಿಲಿನಿಂದ ಬಾಯಾರಿದ ಜನರು ಬಡ ಜನರ ಮೇಲೆ ಸರ್ಕಾರ ಬಡ ಜನರ ಮೇಲೆ ಕೇಸು ಮಾಡುತ್ತದೆ. ಇದು ಸರ್ಕಾರ ಗ್ಯಾರಂಟಿಯಾಗಿದೆ ಎಂದು ಆರೋಪಿಸಿ ಕೂಡಲೇ ಕೇಸು ವಾಪಸ್ಸು ಪಡೆದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡ ಬೇಕೆಂದು ತಾಲೂಕಿನ ಸರ್ಜಾಪುರ ಗ್ರಾಮಸ್ಥರು ಮಂಗಳವಾರ ಸಹಾಯಕ ಆಯುಕ್ತರಿಗೆ ಆಗ್ರಹಿಸಿದರು. ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ರಾಜೀವ್ ಗಾಂಧಿ ಟೆಕ್ನಾಲಜಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿರಲಿಲ್ಲ. ಪಿಡಿಒ ಶೋಭಾರಾಣಿಯವರಿಗೆ ಹಲವು ಸಲ ಮನವಿ ಮಾಡಿದ್ದು ಸಮಸ್ಯೆ ಇತ್ಯರ್ಥ ಮಾಡಲಿಲ್ಲ, ಇದರಿಂದ ಸಮಸ್ಯೆ ಉಲ್ಬಣಗೊಂಡಿತು. ತೆರಿಗೆ ಪಾವತಿಸಿದರೆ ಕುಡಿಯುವ ನೀರು ಕೊಡುವುದಾಗಿ ಹೇಳಿದರು ಅದರಂತೆ ಗ್ರಾಮಸ್ಥರು ತೆರಿಗೆ ಪಾವತಿ ಮಾಡಿದರು. ತೆರಿಗೆ ಪಾವತಿಸಿ ಏ.02ರಂದು ಕಾರ್ಯದರ್ಶಿಗೆ ನೀರು ಪೂರೈಕೆ ಮಾಡಲು ಕೇಳಿದಾಗ ಸಾಯಂಕಾಲ ನೀರು ಒದಗಿಸುವು ದಾಗಿ ಹೇಳಿದರು. ನೀರು ಬರಲಿಲ್ಲ ಏ.03ರಂದು ಮತ್ತೆ ಗ್ರಾಮ ಪಂಚಾಯ್ತಿಗೆ ಎಡತಾಕಿದರು ಗುಡ್‌ಫ್ರೈಡೆ ಅಧಿಕಾರಿಗಳು ಸಿಗಲಿಲ್ಲ. ಏ.4ರಂದು ಪಿಡಿಒ ರವರು ಗ್ರಾಮದ ಕಾರ್ಯದರ್ಶಿ ಮೂಲಕ ಕರೆ ಮಾಡಿಸಿ ಪಂಚಾಯ್ತಿಗೆ ಕರೆದಾಗ ಗ್ರಾಮಸ್ಥರು ಪಂಚಾಯ್ತಿಗೆ ಹೋಗಿ ಪಿಡಿಓಯವರೊಂದಿಗೆ ಮಾತನಾಡಿ, ಮೇಡಂ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಖುದ್ದಾಗಿ ಭೇಟಿ ನೀಡಿ ಪರಸ್ಥಿತಿ ಅರ್ಥ ಆಗುತ್ತೆ ಎಂದಾಗ, ಪಿಡಿಓ ರವರು ನೀವು ಏನು ಹೋರಾಟ ಮಾಡುತ್ತಿರೋ ಮಾಡಿ ನಂದು ಇದೇ ಊರು, ಊರಲ್ಲಿ ಯಾವ ಮಗ ಬಂದು ಕೇಳುತ್ತಾನೆ ಕೇಳಲಿ, ನಾನು ನೋಡಿಕೊಳ್ಳುತ್ತೇನೆ. ನನಗೂ ಅಧಿಕಾರ ಇದೆ. ನನ್ನ ಗಂಡನು ಸರ್ಕಾರಿ ನೌಕರಿ ಮಾಡುತ್ತಾನೆ ಎಂಥೆಂತವರಿಗೆ ಹೆದರದ ನಾನು ನಿಮ್ಮಂತಹ ಬಡಪಾಯಿಗಳಿಗೆ ಹೆದರುವೇನಾ? ಎಂದು ನಿಂದಿಸಿದರು. ನೀರು ಕೊಡದಿದ್ದರೆ ಪಂಚಾಯ್ತಿ ಬೀಗ ಹಾಕುತ್ತೇವೆ ಎಂದಾಗ ಪಿಡಿಒ ರವರು ಗ್ರಾಮಸ್ಥರಿಗೆ ಅವಾಚ್ಯ ವಾಗಿ ನಿಂದಿಸಿ ಪ್ರತಿಭಟಿಸುತ್ತಿದ್ದ ಜನರ ಮೇಲೆ ಕಾರು ಹತ್ತಿಸಲು ತಮ್ಮ ಕಾರು ಚಾಲಕನಿಗೆ ಹೇಳಿದಾಗ ಜನರು ಜೀವ ಭಯದಿಂದ ಚದುರಿ ಜೀವ ಉಳಿಸಿಕೊಂಡರು. ಏ.5ರಂದು ಗ್ರಾಮಸ್ಥರು ಗ್ರಾಪಂ ಮುಂದೆ ಧರಣಿ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇಓ ಗಮನಕ್ಕೆ ತಂದರೂ ಅವರೂ ನಿರ್ಲಕ್ಷಿಸಿದ್ದಾರೆ. ಏಪ್ರಿಲ್ 09ಕ್ಕೆ ಲಿಂಗಸುಗೂರು-ರಾಯಚೂರು ರಸ್ತೆ ಬಂದ್ ಹೋರಾಟ ಮಾಡುತ್ತೇವೆ ಎಂದು ಸಿಪಿಐ ರವರಿಗೆ ತಿಳಿಸಿದಾಗ ರಸ್ತೆ ತಡೆ ಬೇಡ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿ, ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಪಿಐ ಹೊಸಕೇರಪ್ಪ ಹೇಳಿದ್ದರಿಂದ ಗ್ರಾಮಕ್ಕೆ ಬಂದಿದ್ದೇವೆ ಎಂದು ಅಳಲು ತಿಳಿಸಿದರು. ಈ ಮಧ್ಯೆ ಪಿಡಿಒ ಶೋಭಾರಾಣಿ ಯವರ ದೂರು ಆಧರಿಸಿ ಏ.06ರಂದು ಸರ್ಜಾಪುರ ಗ್ರಾಮದ 70 ರಿಂದ 80 ಜನರ ಮೇಲೆ ಬಿಎನ್ಎಸ್ ಕಾಯ್ದೆ 2023ರ ಕಲಂ 189(2), 191(2), 115(2), 121(1), 127(2), 132, 74, 352, 351(2), 190 ಪ್ರಕರಣ ದಾಖಲಾಗಿದೆ. ಕೂಡಲೇ ಜನರಿಗೆ ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳ ಒದಗಿಸಲು ವಿಫಲರಾದ ಪಿಡಿಒ ರವರ ಮೇಲೆ ಕ್ರಮ ಜರುಗಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿ ಕೂಡಲೇ ಕೇಸು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಲಿಂಗಸುಗೂರು ಸಹಾಯಕ ಆಯುಕ್ತರು ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಂಪನ್ಮೂಲ ಇದೆ. ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಕೂಡಲೇ ಕುಡಿಯುವ ನೀರು ಪೂರೈಕೆಗೆ ತಕ್ಷಣ ಕ್ರಮ ವಹಿಸಲಾಗುವುದು, ಗ್ರಾಮಸ್ಥರ ಮೇಲೆ ದಾಖಲಾದ ಕೇಸ್ ವಾಪಸ್ಸು ಪಡೆಯುವುದು ಪೊಲೀಸ್ ಇಲಾಖೆ ತನಿಖೆಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

PREV

Recommended Stories

ಆಟಿಸಂ ರೋಗ : ಯಾಕಾಗಿ ಬರುತ್ತದೆ? ರೊಗದ ಲಕ್ಷಣ ಲಕ್ಷಣಗಳು ?
₹1,000ವರೆಗಿನ ಉತ್ಪನ್ನಗಳ ಮಾರಾಟಕ್ಕೆ ಅಮೆಜಾನ್‌ನಿಂದ ಶೂನ್ಯ ರೆಫರಲ್ ಶುಲ್ಕ