ಕನ್ನಡಪ್ರಭ ವಾರ್ತೆ ಹುಣಸೂರು
ನಿಲಕಂಠಚಾರಿಯವರ ಪುತ್ರ ರಘು ಅವರ ಪತ್ನಿ ಶ್ರುತಿ (28) ಹಾಗೂ ಕಲ್ಕುಣಿಕೆ ಗ್ರಾಮದ ಮಹದೇವನಾಯಕ ಅವರ ಪುತ್ರ ಮುರಳಿ (20) ಎಂಬವರೇ ನೇಣಿಗೆ ಶರಣಾದವರು.
ಅಕ್ರಮ ಸಂಬಂಧ ವಿಷಯ ಬಯಲಾದ ಹಿನ್ನೆಲೆಯಲ್ಲಿ ಶ್ರುತಿ ಮನನೊಂದು ಡಿ. 12ರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಬೆಡ್ ರೂಂನ ಪ್ಯಾನ್ ಕೊಂಡಿಗೆ ತನ್ನ ವೇಲ್ನಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದರೆ, ವಿಷಯ ತಿಳಿದ ಪ್ರಿಯಕರ ಹುಣಸೂರಿನಿಂದ ಕೆ.ಆರ್. ನಗರಕ್ಕೆ ಹೋಗಿ ಎರಡು ದಿನ ತಲೆ ಮರೆಸಿಕೊಂಡಿದ್ದು, ಡಿ. 13ರ ರಾತ್ರಿ ಕೆ.ಆರ್. ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಪಾಳು ಕಟ್ಟಡ ಮರದ ಜಂತಿಗೆ ವೇಲ್ ನಿಂದ ನೇಣು ಬಿಗುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆ ವಿವರ: ವಿವಾಹಿತ ಮಹಿಳೆ ಶ್ರುತಿ ಪಿರಿಯಪಟ್ಟಣ ತಾಲೂಕಿನ ಸೂಳೆಕೊಬೆ ಗ್ರಾಮದ ಎಸ್.ಪಿ .ಮೂರ್ತಿ ಅವರ ಪುತ್ರಿಯಾಗಿದ್ದು, ಏಳು ವರ್ಷಗಳ ಹಿಂದೆ ರಂಗನಾಥ ಬಡಾವಣೆಯ ರಘು ಅವರೊಂದಿಗೆ ವಿವಾಹವಾಗಿ 5 ವರ್ಷದ ಪುತ್ರ, 3 ವರ್ಷದ ಪುತ್ರಿ ಇಬ್ಬರು ಮಕ್ಕಳಿದ್ದು, ಪ್ರಿಯಕರ ಮುರಳಿಯೊಂದಿಗೆ ಜೊತೆಗಿರುವ ಪೋಟೊಗಳು ಪತಿಯ ಅಣ್ಣನ ಮಗ ಉಲ್ಲಾಶ್ ಮೊಬೈಲ್ ಸ್ಟೇಟಸ್ ನಲ್ಲಿ ಡಿ. 10 ರಂದು ಕಂಡು ಬಂದು ವಿಷಯ ಪತಿಗೆ ತಿಳಿದು ಎರಡು ದಿನಗಳಿಂದ ಮನೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ಜಿಗುಪ್ಸೆಗೊಂಡ ಶ್ರುತಿ ಮನನೊಂದು ಡಿ. 12ರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾರೆ.
ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರತಿ ದೂರು: ಈ ಘಟನೆ ಸಂಬಂದ ಮೃತ ಗೃಹಿಣಿ ಶ್ರುತಿ ಸಂಬಂಧಿಕರಾದ ಚಲುವಚಾರಿ, ರವಿ, ಮಹೇಂದ್ರ ಅವರು ಮುರಳಿ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದು, ಅಲ್ಲದೆ ಜಾತಿ ಮತ್ತು ಸಮುದಾಯಕ್ಕೆ ಹಿನಾಯವಾಗಿ ಬೈದು ಅವಮಾನ ಮಾಡಿದ್ದಾರೆಂದು ಇವರ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಬೇಕು ಎಂದು ರಾಮನಾಯಕ ಅವರ ಪುತ್ರ ಸುರೇಶ್ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.