ಆಯುರ್ವೇದ ಐಡ್ರಾಪ್ಸ್‌ ಐಸೋಟೀನ್ ಪ್ಲಸ್ ಐ

KannadaprabhaNewsNetwork |  
Published : Jun 02, 2026, 01:15 AM ISTUpdated : Jun 03, 2026, 08:12 PM IST
isotine plus

ಸಾರಾಂಶ

ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಹಾಗೂ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಇಂದಿನ ದಿನಗಳಲ್ಲಿ ಕಣ್ಣಿನ ಆಯಾಸ ಮತ್ತು ದೃಷ್ಟಿ ದೋಷಗಳು ಪ್ರತಿಯೊಬ್ಬರ ದೈನಂದಿನ ಸಮಸ್ಯೆಯಾಗಿ ಮಾರ್ಪಟ್ಟಿವೆ.

 ಬೆಂಗಳೂರು :  ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಹಾಗೂ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಇಂದಿನ ದಿನಗಳಲ್ಲಿ ಕಣ್ಣಿನ ಆಯಾಸ ಮತ್ತು ದೃಷ್ಟಿ ದೋಷಗಳು ಪ್ರತಿಯೊಬ್ಬರ ದೈನಂದಿನ ಸಮಸ್ಯೆಯಾಗಿ ಮಾರ್ಪಟ್ಟಿವೆ. ಇಂತಹ ಸಂದರ್ಭದಲ್ಲಿ ರಾಸಾಯನಿಕಯುಕ್ತ ತಾತ್ಕಾಲಿಕ ಪರಿಹಾರಗಳಿಗಿಂತ ಸುರಕ್ಷಿತ ಮತ್ತು ನೈಸರ್ಗಿಕ ಮಾರ್ಗಗಳತ್ತ ಜನರು ಮುಖ ಮಾಡುತ್ತಿದ್ದಾರೆ. 

45 ವರ್ಷಗಳಿಗೂ ಹೆಚ್ಚಿನ ಆಯುರ್ವೇದ ಪರಂಪರೆ ಹೊಂದಿರುವ ಜಗತ್ ಫಾರ್ಮಾ ಸಂಸ್ಥೆ

ಇದಕ್ಕೆ ಪೂರಕವಾಗಿ, 45 ವರ್ಷಗಳಿಗೂ ಹೆಚ್ಚಿನ ಆಯುರ್ವೇದ ಪರಂಪರೆ ಹೊಂದಿರುವ ಜಗತ್ ಫಾರ್ಮಾ ಸಂಸ್ಥೆಯು ಪ್ರಾಚೀನ ಜ್ಞಾನ ಮತ್ತು ಆಧುನಿಕ ಸಂಶೋಧನೆಗಳ ಸಮನ್ವಯದೊಂದಿಗೆ ಕಣ್ಣಿನ ಆರೋಗ್ಯಕ್ಕೆ ಸಮಗ್ರ ಪರಿಹಾರವನ್ನು ಒದಗಿಸುತ್ತಾ ಬಂದಿದೆ.

ಈ ಯಶೋಗಾಥೆಯ ಕೇಂದ್ರಬಿಂದುವೇ ಸಂಸ್ಥೆಯ ಸಂಸ್ಥಾಪಕರಾದ ಡಾ. ಮಹೇಂದರ್ ಸಿಂಗ್ ಬಾಸು ಅವರು. ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳಿಲ್ಲದೆ, ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಕಣ್ಣಿನ ಔಷಧವನ್ನು ರೂಪಿಸಲು ಅವರು ತಮ್ಮ ಜೀವನದ ಸುಮಾರು 20 ವರ್ಷಗಳನ್ನು ಐಸೋಟೀನ್ ಸರಣಿಯ ಐ ಡ್ರಾಪ್ಸ್ ಸಂಶೋಧನೆಗಾಗಿ ಮುಡುಪಾಗಿಟ್ಟಿದ್ದರು. 

ಐಸೋಟೀನ್ ಪ್ಲಸ್ ಐ ಡ್ರಾಪ್ಸ್ ಬಿಡುಗಡೆ

ಇಂದು ಅದೇ ಬದ್ಧತೆ ಮತ್ತು ಪರಂಪರೆಯನ್ನು ಜಗತ್ ಫಾರ್ಮಾ ಸಂಸ್ಥೆಯ ನಿರ್ದೇಶಕರಾದ ಡಾ. ಮಂದೀಪ್ ಸಿಂಗ್ ಬಾಸು ಅವರು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಕಾಲಕ್ಕೆ ಪೂರಕವಾಗಿ ಅವರು ಆಯುರ್ವೇದ ಐಡ್ರಾಪ್ಸ್‌ ಐಸೋಟೀನ್ ಪ್ಲಸ್ ಐ ಡ್ರಾಪ್ಸ್ ಬಿಡುಗಡೆ ಮಾಡಿದ್ದಾರೆ. 

ನೈಸರ್ಗಿಕ ಗಿಡಮೂಲಿಕೆಗಳಿಂದ ಸಿದ್ಧಗೊಂಡಿರುವ ಈ ಉತ್ಪನ್ನವು ಪ್ರಯೋಗಾಲಯದ ಕಠಿಣ ಗುಣಮಟ್ಟದ ಪರೀಕ್ಷೆಗಳಿಗೆ ಒಳಪಟ್ಟಿದೆ ಎಂದು ಸಂಸ್ಥೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ WHO-GMP ಪ್ರಮಾಣೀಕರಣ ಹಾಗೂ ಆಯುಷ್ ಇಲಾಖೆಯ ಅಂಗೀಕಾರ ಕೂಡ ಹೊಂದಿದೆ ಎಂದು ಸಂಸ್ಥೆ ಹೇಳಿದೆ.ಐಸೋಟೀನ್ ಪ್ಲಸ್ ಐ ಡ್ರಾಪ್ಸ್‌ನ ಯಶಸ್ಸಿನ ಹಿಂದೆ ವೈಜ್ಞಾನಿಕವಾಗಿ ಆಯ್ದುಕೊಂಡ ಗಿಡಮೂಲಿಕೆಗಳ ಶಕ್ತಿಯಿದೆ.

 ಅದರಲ್ಲಿಪಲಾಶ (ಮುತ್ತುಗ) ಅಂಶವಿದ್ದು, ಇದು ಕಣ್ಣಿಗೆ ತಂಪು ನೀಡುವ ಗುಣ ಹೊಂದಿದೆ ಮತ್ತು ಕಣ್ಣು ಬೇನೆ (ಮದ್ರಾಸ್ ಐ) ಮತ್ತು ಅಲರ್ಜಿಯಿಂದ ಕಣ್ಣು ಕೆಂಪಾಗುವುದನ್ನು ತಡೆಯುತ್ತದೆ ಎಂದಿದೆ. ಇದರಲ್ಲಿರುವ ಅಪಾಮಾರ್ಗ, ಕಣ್ಣಿನ ಅಂಗಾಂಶಗಳನ್ನು ಒಳಗಿನಿಂದ ಬಲಪಡಿಸಿ, ಕಾರಣವಿಲ್ಲದೆ ಕಣ್ಣುಗಳಿಂದ ನೀರು ಸುರಿಯುವ ಸಮಸ್ಯೆಯನ್ನು ನಿಯಂತ್ರಿಸುತ್ತದೆ ಎಂದೂ ಸಂಸ್ಥೆ ಹೇಳಿದೆ. ಪುನರ್ನವ ಮೂಲಿಕೆಯು ಡಿಜಿಟಲ್ ಸ್ಕ್ರೀನ್ ಬಳಕೆಯಿಂದ ಬರುವ ಕಣ್ಣಿನ ಬಾತುಕೊಳ್ಳುವಿಕೆ ಮತ್ತು ದಣಿವನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ ಎಂದು ಹೇಳಲಾಗಿದೆ. ಯಾವುದೇ ವೈದ್ಯಕೀಯ ಉತ್ಪನ್ನವನ್ನು ವೈದ್ಯರ ಸಲಹೆಯ ಮೇರೆಗೆ ಬಳಸುವುದು ಸರಿಯಾದ ಕ್ರಮವಾಗಿದೆ.

PREV
Read more Articles on

Recommended Stories

ರೈಲೊಂದರ ರಿಯಲ್‌ ಸ್ಟೋರಿ
ಭಾರತಕ್ಕೂ ಬಂತು ಗ್ಯಾಸ್‌ ಕುಡಿದು ನೀರು ಬಿಡುವ ರೈಲು