ಕನ್ನಡಪ್ರಭ ವಾರ್ತೆ, ಬೆಂಗಳೂರು
ಪ್ರಸ್ತುತ ಈ 55 ಅಡಿಗೆಮನೆಗಳು ಕೌಜಿನಾದ ಫ್ರಾಂಚೈಸಿ ಜಾಲದ ಮೂಲಕ ಆನ್ಲೈನ್ ಡೆಲಿವರಿಗೆ ಆದ್ಯತೆ ನೀಡಿ ಕಾರ್ಯಾಚರಿಸುತ್ತಿವೆ. ವಾಸುದೇವ ಅಡಿಗಾಸ್ ಸದ್ಯ ಪ್ರತಿ ತಿಂಗಳು 50 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಡಿಸೆಂಬರ್ 2026ರ ವೇಳೆಗೆ ಈ ಪ್ರಮಾಣವನ್ನು 3 ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ.ಸ್ಥಳೀಯ ರೆಸ್ಟೋರೆಂಟ್ಗಳಿಗೆ ಪಾಲುದಾರಿಕೆಯ ಆಹ್ವಾನ
ತನ್ನ ಮುಂದಿನ ಹಂತದ ಬೆಳವಣಿಗೆಯ ಭಾಗವಾಗಿ, ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್ಗಳು ಹಾಗೂ ವಾಣಿಜ್ಯ ಕಿಚನ್ ನಿರ್ವಾಹಕರನ್ನು ಕೌಜಿನಾ ಮುಕ್ತವಾಗಿ ಆಹ್ವಾನಿಸಿದೆ. ಈ ಮಾದರಿಯಲ್ಲಿ, ಈಗಾಗಲೇ ಚಾಲ್ತಿಯಲ್ಲಿರುವ ಪರವಾನಗಿ ಪಡೆದ ಅಡುಗೆಮನೆಗಳನ್ನು ಬಳಸಿಕೊಂಡೇ ರೆಸ್ಟೋರೆಂಟ್ ಮಾಲೀಕರು ಪ್ರತ್ಯೇಕ ಔಟ್ಲೆಟ್ ತೆರೆಯುವ ದೊಡ್ಡ ಹೂಡಿಕೆಯಿಲ್ಲದೆ ‘ವಾಸುದೇವ ಅಡಿಗಾಸ್’ ಮೆನುವನ್ನು ಸೇರಿಸಿಕೊಳ್ಳಬಹುದು. ಇದರಿಂದಾಗಿ ಸ್ಥಳೀಯ ಹೊಟೇಲ್ ಮಾಲೀಕರಿಗೆ ಹೆಚ್ಚುವರಿ ಡೆಲಿವರಿ ಆರ್ಡರ್ಗಳು ಹಾಗೂ ಆದಾಯದ ಹೊಸ ಮೂಲ ದೊರೆಯಲಿದೆ.ಉನ್ನತ ಗುಣಮಟ್ಟ ಹಾಗೂ ಸ್ವಚ್ಛತೆಯ ಮಾನದಂಡಗಳನ್ನು ಪಾಲಿಸುವ ಕಿಚನ್ಗಳಿಗೆ ಕೌಜಿನಾ ಸಂಸ್ಥೆಯು ಪಾಕವಿಧಾನಗಳ ಗುಣಮಟ್ಟ, ಕಚ್ಚಾವಸ್ತು ಪೂರೈಕೆ, ಪ್ಯಾಕೇಜಿಂಗ್, ಆನ್ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಸಂಪರ್ಕ, ತರಬೇತಿ ಮತ್ತು ಅಗತ್ಯ ತಂತ್ರಜ್ಞಾನದ ಬೆಂಬಲವನ್ನು ಸಂಪೂರ್ಣವಾಗಿ ನೀಡಲಿದೆ.ತಂತ್ರಜ್ಞಾನ ಮತ್ತು ರುಚಿಯ ಸಂಗಮಬೆಳವಣಿಗೆಯ ಕುರಿತು ಮಾತನಾಡಿದ ಕೌಜಿನಾ ಫುಡ್ ಟೆಕ್ನ ಬಿಸಿನೆಸ್ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥ ಶ್ರೀಕಾಂತ್, ‘ಒಂದು ವರ್ಷದಲ್ಲಿ 55 ವರ್ಚುವಲ್ ಕಿಚನ್ಗಳನ್ನು ತೆರೆದಿರುವುದು, ಸಾಂಪ್ರದಾಯಿಕ ಅಡುಗೆ ಬ್ರ್ಯಾಂಡ್ಗೆ ತಂತ್ರಜ್ಞಾನ, ಶಿಸ್ತುಬದ್ಧ ಕಾರ್ಯಾಚರಣೆ ಮತ್ತು ಸೂಕ್ತ ಪಾಲುದಾರರ ಸಾಥ್ ಸಿಕ್ಕಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ. ಬೆಂಗಳೂರು ನಮ್ಮ ಕಾರ್ಯತಂತ್ರದ ಪ್ರಮುಖ ಕೇಂದ್ರವಾಗಿದ್ದು, ನಗರದ ಮತ್ತಷ್ಟು ಸಮರ್ಥ ಹೊಟೇಲ್ ನಿರ್ವಾಹಕರು ನಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ’ ಎಂದರು.ಕೌಜಿನಾ ಫುಡ್ ಟೆಕ್ನ ಗ್ರೂಪ್ ಚೀಫ್ ಮಾರ್ಕೆಟಿಂಗ್ ಆಫೀಸರ್ ಗೀತಿಕಾ ಆನಂದ್ ಗುಪ್ತಾ ಮಾತನಾಡಿ, ‘ಗ್ರಾಹಕರು ವಾಸುದೇವ ಅಡಿಗಾಸ್ ಮೇಲಿಟ್ಟಿರುವ ಅಪಾರ ಪ್ರೀತಿಯೇ ಈ ಪ್ರಗತಿಗೆ ಬಲ. ಗ್ರಾಹಕರ ತೃಪ್ತಿ ಮತ್ತು ವಿಶ್ವಾಸಾರ್ಹ ರುಚಿಯನ್ನು ಕಾಪಾಡಿಕೊಳ್ಳುವುದೇ ನಮ್ಮ ಆದ್ಯತೆ. ಗ್ರಾಹಕರಿಂದ ಬರುತ್ತಿರುವ ನಿರಂತರ ಬೇಡಿಕೆ ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ತಿಳಿಸಿದರು.ಆಸಕ್ತ ರೆಸ್ಟೋರೆಂಟ್ ಮಾಲೀಕರು ಹಾಗೂ ಕಿಚನ್ ಆಪರೇಟರ್ಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.