ಕನ್ನಡಪ್ರಭ ವಾರ್ತೆ ಬೆಂಗಳೂರು
ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಮೆಟ್ರೋ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.
ಚಾಲಕ ರಹಿತ ರೈಲು 36 ಬಾರಿ ತಪಾಸಣೆ: ಹಳದಿ ಮಾರ್ಗಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಚೀನಾ ಶಾಂಘೈನಿಂದ ಚಾಲಕ ರಹಿತವಾಗಿ ಓಡಿಸಬಹುದಾದ ರೈಲುವೊಂದು ಚೆನ್ನೈ ಮೂಲಕ ಹೆಬ್ಬಗೋಡಿಗೆ ಕಳೆದ ಫೆಬ್ರವರಿಯಲ್ಲಿ ಬಂದಿತ್ತು. ವೇಗ, ಬ್ರೇಕ್, ಸಿಗ್ನಲಿಂಗ್, ನಿಲುಗಡೆ ಸೇರಿ 36ಕ್ಕೂ ಹೆಚ್ಚು ಬಗೆಯ ತಪಾಸಣೆಗಳು ನಡೆದಿವೆ. ಅದಾದ ನಂತರ ಸಿಎಂಆರ್‌ಎಸ್, ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ದೊರೆತು ಪ್ರಯಾಣಿಕ ಸೇವೆ ಆರಂಭವಾಗಲು ಕನಿಷ್ಠ ಮೂರು ತಿಂಗಳು ಹಿಡಿಯಲಿದೆ.ದರ ಹೆಚ್ಚಳ: ಸಿಂಗಪುರ್ ಮಾದರಿ ಪರಿಶೀಲನೆ
ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್.ಧರಣಿ, ರಾಜ್ಯದ ಗೃಹ, ನಗರ ವ್ಯವಹಾರ ಇಲಾಖೆ ಸತ್ಯೇಂದ್ರ ಪಾಲ್ ಸಿಂಗ್ ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರ ತಂಡವನ್ನು ದರ ಪರಿಷ್ಕರಣೆಗಾಗಿ ಬಿಎಂಆರ್‌ಸಿಎಲ್ ರಚಿಸಿತ್ತು. ಇವರು ಹಾಗೂ ಮೆಟ್ರೋ ಅಧಿಕಾರಿಗಳನ್ನು ಒಳಗೊಂಡ ತಂಡ ಸಿಂಗಾಪುರ, ಹಾಂಗ್‌ಕಾಂಗ್‌ಗೆ ತೆರಳಿ ಬಂದಿದೆ. ಅಲ್ಲಿ ಮೆಟ್ರೋ ಸರ್ಕಾರದ್ದೇ ಆದರೂ ಅದನ್ನು ಖಾಸಗೀಯವರು ನಿರ್ವಹಣೆ ಮಾಡುತ್ತಿದ್ದು, ಆಟೋಮೆಟಿಕ್ ವಾರ್ಷಿಕ ದರ ಪರಿಷ್ಕರಣೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಇದನ್ನು ನಮ್ಮಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟ. ದೆಹಲಿ ಮೆಟ್ರೋದಲ್ಲಿ ಅನಸರಿಸಲಾಗುತ್ತಿರುವ ದರ ಪರಿಷ್ಕರಣೆಯನ್ನು ನಾವು ಇಲ್ಲಿ ಜಾರಿಗೊಳಿಸಿಕೊಳ್ಳಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಶೇ.10-15ರಷ್ಟು ದರ ಹೆಚ್ಚಳ ಸಾಧ್ಯತೆ:ಸದ್ಯ 76.95 ಕಿಮೀ ಉದ್ದದ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ ₹10 ಹಾಗೂ ಗರಿಷ್ಠ ದರ ₹60 ಇದೆ. ಇ-ಟಿಕೆಟ್‌ಗೆ, ಕಾರ್ಡ್ ಮೇಲೆ ಶೇ.5ರಷ್ಟು ರಿಯಾಯಿತಿ ಇದೆ. ಪರಿಷ್ಕೃತ ದರ ಶೇ.10-15 ರಷ್ಟಾಗಬಹುದು ಎನ್ನಲಾಗಿದ್ದರೂ ಅಧಿಕಾರಿಗಳು ಈ ಬಗ್ಗೆ ತಿಳಿಸಿಲ್ಲ.
ದರ ಪರಿಷ್ಕರಣೆಗೆ ರಚಿಸಿದ ಸಮಿತಿ ಶೀಘ್ರ ವರದಿ ನೀಡಲಿದೆ. ಯಾವ ರೀತಿ ದರ ನಿಗದಿಯಾಗಲಿದೆ ಎಂಬುದು ವರದಿಯನ್ನು ಆಧರಿಸಿದೆ.- ಮಹೇಶ್ವರ್ ರಾವ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು