ಭಾರತವು ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪೂಜ್ಯ ಭಗವಾನ್ ಬಿರ್ಸಾ ಮುಂಡಾ ಅವರ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ಜನ ಜಾತಿಯ ಗೌರವ ದಿನವನ್ನು ನ.15ರಂದು ಪ್ರತಿ ವರ್ಷ ಆಚರಿಸುತ್ತದೆ.
ಭಾರತವು ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪೂಜ್ಯ ಭಗವಾನ್ ಬಿರ್ಸಾ ಮುಂಡಾ ಅವರ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ಜನ ಜಾತಿಯ ಗೌರವ ದಿನವನ್ನು ನ.15ರಂದು ಪ್ರತಿ ವರ್ಷ ಆಚರಿಸುತ್ತದೆ. ಈ ದಿನವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಮಹತ್ವವನ್ನು ಹೊಂದಿದ್ದು, ಅವರಿಗೆ ನೀಡುವ ಗೌರವದ ಸಂಕೇತವಾಗಿದೆ. ಈ ಹಿಂದೆ ಹೆಚ್ಚಾಗಿ ಕಡೆಗಣಿಸಲಾಗಿದ್ದ ಭಾರತದಾದ್ಯಂತ ಬುಡಕಟ್ಟು ಸಮುದಾಯಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಕೊಡುಗೆಗಳನ್ನು ತೋರಿಸಿಕೊಡುವ ವಿಶೇಷ ಉತ್ಸವಕಾಲವಾಗಿ ಕೂಡಾ ಇಂದು ಮಾರ್ಪಟ್ಟಿದೆ.
ಭಾರತದ ಬುಡಕಟ್ಟು ಸಮುದಾಯಗಳೊಂದಿಗೆ ಪ್ರಧಾನಿ ಮೋದಿ ಆವರ ಸಂಪರ್ಕವು ನೀತಿ-ನಿಯಮಗಳನ್ನು ಮೀರಿದೆ, ಹಾಗೂ ಇದು ಬಹಳಷ್ಟು ವೈಯಕ್ತಿಕವಾಗಿದೆ. ಬುಡಕಟ್ಟು ಜನಾಂಗದವರ ಮನೆಯಲ್ಲಿ ಚಹಾ ಸೇವನೆಯಾಗಲಿ, ಅವರ ಜೊತೆಗೆ ಹಬ್ಬಗಳನ್ನು ಆಚರಿಸುತ್ತಿರಲಿ, ಅವರ ಸಾಂಪ್ರದಾಯಿಕ ಉಡುಪನ್ನು ಹೆಮ್ಮೆಯಿಂದ ಧರಿಸುತ್ತಿರಲಿ, ಎಲ್ಲದರಲ್ಲೂ ಅವುಗಳನ್ನು ಸಹಜವಾಗಿ ಅನುಭವಿಸಿ ಆತ್ಮೀಯತೆಯಿಂದ ಸಂತಸ ಹಂಚಿಕೊಳ್ಳುವ ಅವಿನಾಭಾವ ಸಂಬಂಧವು ಸ್ಪಷ್ಟವಾಗಿ ಕಂಡುಬರುತ್ತದೆ.
ಬುಡಕಟ್ಟು ಜೊತೆ ಮೋದಿ ಅವಿನಾಭಾವ ಸಂಬಂಧ
ಹಿಂದಿನ ಸರ್ಕಾರಿ ವಿಧಿ-ವಿಧಾನಗಳಿಗಿಂತ ಭಿನ್ನವಾಗಿ, ಬುಡಕಟ್ಟು ಸಮುದಾಯಗಳೊಂದಿಗಿನ ಮೋದಿ ಅವರ ಸಂಪರ್ಕವು ಆಳವಾಗಿದೆ ಹಾಗೂ ನೈಜವಾಗಿದೆ. ಬುಡಕಟ್ಟು ಸಮುದಾಯಗಳ ಕಥೆಗಳು, ಕಲೆಗಳು, ವೀರರ ಮಹಿಮೆಗಳನ್ನು ಮುಂಚೂಣಿಗೆ ತರುವಲ್ಲಿ ಹಾಗೂ ಕೊಡುಗೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಂತಗಳಿಗೆ ಕೊಂಡೊಯ್ದು ಘನತೆ-ಗೌರವಗಳನ್ನು ಏರಿಸುವಲ್ಲಿ ಮೋದಿ ಅವರ ಆಸಕ್ತಿ ಅನನ್ಯವಾಗಿದೆ. ಮೋದಿ ಅವರು, ಅನೇಕ ವಿಧಗಳಲ್ಲಿ ಭಾರತದ ಬುಡಕಟ್ಟು ಸಮುದಾಯಗಳೊಂದಿಗೆ ಅಂತಹ ನಿಕಟ, ಗೌರವಾನ್ವಿತ, ಹಾಗೂ ಅವಿನಾಭಾವ ಸಂಬಂಧವನ್ನು ಬೆಳೆಸಿದ ಮೊದಲ ಪ್ರಧಾನಿಯಾಗಿದ್ದಾರೆ.
ಗುರುತಿಸುವಿಕೆ, ಗೌರವಿಸುವಿಕೆ ಮತ್ತು ಉತ್ಸವ ರೂಪದಲ್ಲಿ ಆಚರಿಸುವಿಕೆ. ಹೀಗೆ ಕಳೆದ ದಶಕದಲ್ಲಿ ಭಾರತೀಯ ಬುಡಕಟ್ಟು ಸಂಸ್ಕೃತಿಯು ಗಮನಾರ್ಹ ರೂಪಾಂತರವನ್ನು ಕಂಡಿದೆ. ಪ್ರಧಾನಮಂತ್ರಿ ಮೋದಿ ಅವರು ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಬುಡಕಟ್ಟು ಸಮುದಾಯಗಳ ಧ್ವನಿಯನ್ನು ವ್ಯಾಪಿಸಿ, ವರ್ಧಿಸಿದ ಹತ್ತಾರು ವಿಧಾನಗಳು ಇಲ್ಲಿವೆ. ವಿಶ್ವ ನಾಯಕರಿಗೆ ಬುಡಕಟ್ಟು ಸಂಪತ್ತನ್ನು ಉಡುಗೊರೆಯಾಗಿ ನೀಡುವುದು, ಬುಡಕಟ್ಟು ಕಲಾಕೃತಿಗಳನ್ನು ಗೌರವದ ಸಂಕೇತವಾಗಿ ಕಲಾ ಕಾಣಿಕೆ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ, ಪ್ರಧಾನಮಂತ್ರಿ ಮೋದಿ ಭಾರತದ ಬುಡಕಟ್ಟು ಸಂಸ್ಕೃತಿಗಳಿಗೆ ಜಾಗತಿಕ ಮೆಚ್ಚುಗೆಯನ್ನು ಗಳಿಸಿ ಕೊಡುತ್ತಿದ್ದಾರೆ.
ವಿಶ್ವನಾಯಕರಿಗೆ ಬುಡಕಟ್ಟು ಜನಾಂಗದ ಉಡುಗೊರೆ
ಈ ನಿಟ್ಟಿನಲ್ಲಿ ವೈವಿಧ್ಯಮಯ ಸಂವಾದ ಮತ್ತು ಮನ್ನಣೆಯನ್ನು ಪ್ರೋತ್ಸಾಹಿಸುತ್ತಾರೆ. ಈ ಉಡುಗೊರೆಗಳಲ್ಲಿ, ಬುಡಕಟ್ಟು ಸಮುದಾಯಗಳ ಸಂಕೀರ್ಣವಾದ ಲೋಹದ ಕರಕುಶಲ ಕೆಲಸ ಮತ್ತು ಆಳವಾದ ಐತಿಹಾಸಿಕ ಹಿನ್ನಲೆಗಳಿಗೆ ಹೆಸರುವಾಸಿಯಾದ ವಿಶೇಷ ಡೋಕ್ರಾ ಕಲೆಯ ಕಾಣಿಕೆಗಳನ್ನು ಆಸ್ಟ್ರೇಲಿಯಾ, ಬ್ರೆಜಿಲ್, ಕುಕ್ ದ್ವೀಪಗಳು ಮತ್ತು ಟೊಂಗಾದ ನಾಯಕರಿಗೆ ಉಡುಗೋರೆಯಾಗಿ ನೀಡಲಾಗಿದೆ.
ಜಾರ್ಖಂಡ್‌ನ ಸೊಹ್ರಾಯ್ ವರ್ಣಚಿತ್ರಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮತ್ತು ಮಧ್ಯಪ್ರದೇಶದಿಂದ ಸಂಗ್ರಹಿಸಲಾದ ಬುಡಕಟ್ಟು ಸಮುದಾಯಗಳ ಕಲಾರೂಪಗೊಂಡ ಪೇಂಟಿಂಗ್ ಅನ್ನು ಬ್ರೆಜಿಲ್ ಅಧ್ಯಕ್ಷ \Bಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ\B ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ರೋಮಾಂಚಕ ಬಣ್ಣಗಳು ಮತ್ತು ಸಂಕೀರ್ಣ ಮಾದರಿಗಳಿಗಾಗಿ ಈ ಕಲಾರೂಪಗಳು ವಿಶೇಷ ಮನ್ನಣೆ ಗಳಿಸಿವೆ. ಉಜ್ಬೇಕಿಸ್ತಾನ್ ಮತ್ತು ಕೊಮೊರೊಸ್‌ನ ನಾಯಕರಿಗೆ ಮಹಾರಾಷ್ಟ್ರದ ಬುಡಕಟ್ಟು ಸಮುದಾಯಗಳ ಅತ್ಯದ್ಭುತ ವಾರ್ಲಿ ವರ್ಣಚಿತ್ರಗಳನ್ನು ನೀಡಿ ಗೌರವಿಸಲಾಯಿತು.
ಜಿಐ ಟ್ಯಾಗ್‌ಗಳ ಮೂಲಕ ಬುಡಕಟ್ಟು ಉತ್ಪನ್ನಕ್ಕೆ ಗೌರವ
ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ಗಳ ಮೂಲಕ ಬುಡಕಟ್ಟು ಉತ್ಪನ್ನಗಳ ಗುರುತಿಸುವಿಕೆ ಕಾರ್ಯಚಟುವಟಿಕೆಯ ವೇಗದಲ್ಲಿ ತೀವ್ರತೆ ಬೆಳೆದಿದೆ. 75 ಕ್ಕೂ ಹೆಚ್ಚು ಬುಡಕಟ್ಟು ಉತ್ಪನ್ನಗಳನ್ನು ಈಗ ಅಧಿಕೃತವಾಗಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಮಾಡಲಾಗಿದೆ. ಬುಡಕಟ್ಟು ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಈ ಪ್ರಯತ್ನವು ಕೇಂದ್ರ ಸರ್ಕಾರದ ‘ಸ್ಥಳೀಯತೆಗೆ ಧ್ವನಿ( ವೋಕಲ್ ಫಾರ್ ಲೋಕಲ್)’ ಉಪಕ್ರಮದೊಂದಿಗೆ ಪೂರಕವಾಗಿ ಹಾಗೂ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ, ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕೌಶಲ್ಯತೆಯ ಕರಕುಶಲಗಳು ಮಾನ್ಯತೆ ಪಡೆದ ಬ್ರ್ಯಾಂಡ್‌ಗಳಾಗಿ ಪರಿವರ್ತಿಸುತ್ತದೆ.
2024ರಲ್ಲಿ, ಅಸ್ಸಾಂನ ಜಾಪಿ ಎಂಬ ಬಿದಿರಿನ ಟೋಪಿ, ಒಡಿಶಾದ ಡೋಂಗ್ರಿಯಾ ಕೊಂಡ್ ಶಾಲು, ಅರುಣಾಚಲ ಯಾಕ್ ಹಾಲಿನಿಂದ ಹುದುಗಿಸಿದ ಉತ್ಪನ್ನ- ಯಾಕ್ ಚುರ್ಪಿ, ಒಡಿಶಾದಲ್ಲಿ ನೇಕಾರರ ಕೆಂಪು ಇರುವೆಗಳಿಂದ ತಯಾರಿಸಲಾಗುವ ಸಿಮಿಲಿಪಾಲ್ ಕಾಯಿ ಚಟ್ನಿ, ಬೋಡೋ ಸಮುದಾಯದ ಸಾಂಪ್ರದಾಯಿಕ ನೇಯ್ದ ಬಟ್ಟೆ-ಬೋಡೋ ಅರೋನೈ ಸೇರಿದಂತೆ ಹಲವಾರು ವಸ್ತುಗಳು ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ಗಳನ್ನು ಈಗಾಗಲೇ ಪಡೆದಿವೆ. ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ಭಾಷೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ದಾಖಲಿಸಲು ಮತ್ತು ಉತ್ತೇಜಿಸಲು 300ಕ್ಕೂ ಹೆಚ್ಚು ಬುಡಕಟ್ಟು ಪರಂಪರೆ ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬಿರ್ಸಾ ಮುಂಡಾ ಪರಂಪರೆಯನ್ನು ಗೌರವಿಸುವುದು
ನ.15ಅನ್ನು ಜನಜಾತಿಯ ಗೌರವ ದಿವಸ ಎಂದು ಘೋಷಿಸುವ ಮೂಲಕ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರನ್ನು ಗೌರವಿಸಿದ್ದಾರೆ. ಜಾರ್ಖಂಡ್‌ನ ಉಲಿಹಾತುನಲ್ಲಿರುವ ಮುಂಡಾ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. ರಾಂಚಿಯಲ್ಲಿರುವ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ, ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯವು 25ಅಡಿ ಬಿರ್ಸಾ ಮುಂಡಾ ಅವರ ಪ್ರತಿಮೆಯನ್ನು ಹೊಂದಿದೆ. ಇವುಗಳು ಈ ಬುಡಕಟ್ಟು ಸಮುದಾಯಗಳಿಗೆ ಶ್ರೀ ಮೋದಿ ಅವರು ನೀಡುವ ಗೌರವ, ಮಹತ್ವ ಹಾಗೂ ಮಾನ್ಯತೆಯನ್ನು ಒತ್ತಿಹೇಳುತ್ತವೆ.
ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ, ಶ್ರೀ ವಿಜಯಪುರಂನಲ್ಲಿರುವ ವನವಾಸಿ ಕಲ್ಯಾಣ ಆಶ್ರಮದಲ್ಲಿ ಬಿರ್ಸಾ ಮುಂಡಾ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಪ್ರತಿಮೆಯ ಅಂತಿಮ ಪ್ರತಿಷ್ಠಾಪನೆಯ ಮೊದಲು ಈ ಪ್ರತಿಮೆಯನ್ನು ವಿವಿಧ ಸ್ಥಳಗಳಲ್ಲಿ ಸಾಗಿಸುವ ಗೌರವ ಯಾತ್ರೆಯೊಂದಿಗೆ ಗೌರವ ಸನ್ಮಾನ ಹಾಗೂ ಪ್ರಚಾರ ಕೂಡಾ ನೀಡಲಾಗುವುದು.
2017ರಲ್ಲಿ ಪ್ರಾರಂಭವಾದಾಗಿನಿಂದ, ಆದಿ ಮಹೋತ್ಸವವು ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಬುಡಕಟ್ಟು ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಿದೆ. ಇಲ್ಲಿಯವರೆಗೆ 37 ಆವೃತ್ತಿಗಳು ನಡೆದಿವೆ. ಬುಡಕಟ್ಟು ಕೇಂದ್ರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಫೆಡರೇಶನ್ (ಟ್ರೈಫೆಡ್) ಆಯೋಜಿಸುತ್ತಿರುವ ಈ ಉತ್ಸವವು ಈಗಾಗಲೇ 1,000ಕ್ಕೂ ಹೆಚ್ಚು ಬುಡಕಟ್ಟು ಕುಶಲಕರ್ಮಿಗಳನ್ನು ಒಳಗೊಂಡಿದೆ ಮತ್ತು 300ಕ್ಕೂ ಹೆಚ್ಚು ಮಳಿಗೆಗಳಲ್ಲಿ ಶ್ರೀಮಂತ ವೈವಿಧ್ಯಮಯ ಬುಡಕಟ್ಟು ಕಲೆ, ಕಲಾಕೃತಿಗಳು, ಕರಕುಶಲ ವಸ್ತುಗಳು ಮತ್ತು ಪಾಕಪದ್ಧತಿಯನ್ನು ಪ್ರದರ್ಶಿಸಿದೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವುದು
ಮೋದಿ ಸರ್ಕಾರವು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ಬಿರ್ಸಾ ಮುಂಡಾ, ರಾಣಿ ಕಮಲಾಪತಿ ಮತ್ತು ಗೊಂಡ ಮಹಾರಾಣಿ ವೀರ ದುರ್ಗಾವತಿ ಅವರನ್ನು ಗೌರವಿಸಿದೆ. ಭಾರತದ ಇತಿಹಾಸವನ್ನು ರೂಪಿಸಿದ ಖಾಸಿ-ಗಾರೋ, ಮಿಜೋ ಮತ್ತು ಕೋಲ್ ದಂಗೆಗಳಂತಹ ಚಳುವಳಿಗಳು ಸಹ ಗುರುತಿಸಿ ಮಹತ್ವ ನೀಡಿದೆ. ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಕೈಮೈ ರೈಲು ನಿಲ್ದಾಣವನ್ನು ಮಣಿಪುರದ ರಾಣಿ ಗೈಡಿನ್ಲಿಯು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಜೊತೆಗೆ ಭಾರತದಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಂಚಿಯಲ್ಲಿನ ಭಗವಾನ್ ಬಿರ್ಸಾ ಮುಂಡಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯ, ಜಬಲ್ಪುರದ ರಾಜಾ ಶಂಕರ್ ಶಾ, ರಘುನಾಥ್ ಷಾ ವಸ್ತುಸಂಗ್ರಹಾಲಯ, ಛಿಂದ್ವಾರದಲ್ಲಿರುವ ಬಾದಲ್ ಭೋಯ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯ ಈಗಾಗಲೇ ಪೂರ್ಣಗೊಂಡಿದೆ.
ಬುಡಕಟ್ಟು ಉತ್ಪನ್ನಗಳ ಜನಪ್ರೀಯತೆ
ಭಾರತದ ಬುಡಕಟ್ಟು ಉತ್ಪನ್ನಗಳು ಇತ್ತೀಚೆಗೆ ಅಂತರಾಷ್ಟ್ರೀಯ ಜನಪ್ರಿಯತೆಯನ್ನು ಗಳಿಸುತ್ತಿವೆ. ಅರಕು ಕಾಫಿ ತನ್ನ ಮೊದಲ ಸಾವಯವ ಕಾಫಿ ಅಂಗಡಿಯನ್ನು 2017ರಲ್ಲಿ ಪ್ಯಾರಿಸ್‌ನಲ್ಲಿ ತೆರೆಯಿತು. ಅದೇ ರೀತಿ, ಛತ್ತೀಸ್‌ಗಢದಿಂದ ನಿರ್ಜಲೀಕರಣಗೊಂಡ ಮೊಹುವಾ ಹೂವುಗಳು ಫ್ರಾನ್ಸ್ ಸೇರಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕಾಲಿಟ್ಟಿವೆ. ಶಾಲುಗಳು, ವರ್ಣಚಿತ್ರಗಳು, ಮರದ ವಸ್ತುಗಳು, ಆಭರಣಗಳು ಮತ್ತು ಬುಟ್ಟಿಗಳಂತಹ ಬುಡಕಟ್ಟು ಉತ್ಪನ್ನಗಳು ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೆಚ್ಚು ಜನಪ್ರಿಯವಾಗಿವೆ. ಟ್ರೈಫೆಡ್ ಮಳಿಗೆ (ಔಟ್‌ಲೆಟ್)ಗಳು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪಾಲುದಾರಿಕೆಯ ಮೂಲಕ ಭಾರತದ ಸಾಂಪ್ರದಾಯಿಕ ಬುಡಕಟ್ಟು ಉತ್ಪನ್ನಗಳ ಜಾಗತಿಕ ವೇದಿಕೆಗೆ ತಲಪಿಸಿಕೊಡುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರವು ಬೆಂಬಲಿಸುತ್ತಿದೆ. ಟ್ರೈಫೆಡ್ ಮೂಲಕ ಬುಡಕಟ್ಟು ಸಮುದಾಯಗಳ ಜೀವನೋಪಾಯವನ್ನು ಸಬಲೀಕರಣಗೊಳಿಸುವುದು.
ಬುಡಕಟ್ಟು ಸಮುದಾಯಕ್ಕೆ ಮೋದಿ ಕೊಡುಗೆ ಅಪಾರ
ನ.2024ರ ವೇಳೆಗೆ, ಟ್ರೈಫೆಡ್ ಸುಮಾರು 218,500 ಕುಶಲಕರ್ಮಿ ಬುಡಕಟ್ಟು ಕುಟುಂಬಗಳನ್ನು ಸಬಲಗೊಳಿಸಿದೆ. ಅದರ ಟ್ರೈಫೆಡ್ ಸಂಸ್ಥೆಯ ಚಿಲ್ಲರೆ ಮಳಿಗೆಗಳ ಜಾಲವಾದ ಟ್ರೈಬ್ಸ್ ಇಂಡಿಯಾ ಮೂಲಕ 100,000 ಕ್ಕೂ ಹೆಚ್ಚು ಬುಡಕಟ್ಟು ಉತ್ಪನ್ನಗಳ ಮಾರಾಟವನ್ನು ಸುಗಮಗೊಳಿಸಿದೆ. ಈ ರೀತಿಯ ಉಪಕ್ರಮವು ಕುಶಲಕರ್ಮಿಗಳನ್ನು ಭಾರತ ಹಾಗೂ ಜಾಗತಿಕ ನೆಲೆ ಹೊಂದಿರುವ ವಿಶಾಲ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಮೂಲಕ ಅವರ ಜೀವನೋಪಾಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಭಾರತದ ಬುಡಕಟ್ಟು ಸಮುದಾಯಗಳ ಕುರಿತಾಗಿ ಮೋದಿ ಅವರ ಬದ್ಧತೆಯು ಅಪಾರ. ಮೋದಿ ಅವರು ಮಾಡುತ್ತಿರುವ ಪ್ರತಿಯೊಂದೂ ಪ್ರಯತ್ನಗಳಲ್ಲಿಯೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ಉನ್ನತೀಕರಿಸಲು, ಅವರುಗಳ ಸಾಂಪ್ರದಾಯಿಕ ಪರಂಪರೆಯನ್ನು ಕಾಪಾಡಲು ಮತ್ತು ರಾಷ್ಟ್ರೀಯ ಚೌಕಟ್ಟಿನ ನಿರೂಪಣೆಯಲ್ಲಿ ಅವರುಗಳ ಕೊಡುಗೆಗಳನ್ನು ಸಂಯೋಜಿಸಲು ಸಾಧ್ಯವಾಗಿರುವುದು ಅತ್ಯಂತ ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ.