ನನ್ನ ಜೀವನದ ಕೊನೇ ಕ್ಷಣದವರೆಗೂ ನಾನು ಅಸಂತೋಷದಿಂದನೇ ಇರ್ತೀನಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಂದರ್ಶನ

ಎಲ್ಲೋ ಒಂದು ಕಡೆ ನಮ್ಮ ಅಭ್ಯರ್ಥಿಗೆ ಡೆಪಾಸಿಟ್ ಕಟ್ಟಲು ಹಣ ಇರಲಿಲ್ಲ. ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳೆಲ್ಲಾ ಹಣ ಹೊಂದಿಸಿ ಕೊಟ್ಟಿದ್ದಾರೆ. ಒಬ್ಬ ಬಂಗಾಳದ ಹೆಣ್ಣು ಮಗಳು ಅಫ್ಘಾನಿಸ್ತಾನದಲ್ಲಿ ಕ್ರಿಶ್ಚಿಯನ್ನರ ಪರವಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಹೆಸರು ಜುಡಿತ್ ಡಿಸೋಜಾ ಅಂತಾ. ಅವರನ್ನು ಅಪಹರಣ ಮಾಡಿದ್ದರು. ನಮಗೆಲ್ಲಾ ಚಿಂತೆಯಾಗಿತ್ತು. ಅವರು ತಿಂಗಳುಗಳ ಕಾಲ ಭಯೋತ್ಪಾದಕರ ವಶದಲ್ಲಿದ್ದರು. ನಾವು ನಮ್ಮೆಲ್ಲಾ ಸಂಬಂಧಗಳನ್ನು ಬಳಸಿಕೊಂಡು ಆಕೆಯನ್ನ ಸುರಕ್ಷಿತವಾಗಿ ವಾಪಸ್ ಕರೆತಂದೆವು.ವಿದೇಶಿ ನೀತಿಯಿಂದ ನಮ್ಮ ಸಾಮಾನ್ಯ ಜನರಿಗೆ ಏನು ಉಪಯೋಗ ಆಗಲ್ಲ, ಅವರಿಗೆ ಏನು ಸಿಗುತ್ತೆ ಎನ್ನುವ ಯೋಚನೆಯಿತ್ತು. ಈಗ ಜನರಿಗೆ ಅರ್ಥವಾಗುತ್ತಿದೆ ಅಲ್ಲವೇ?

ನಾವು ಬೇರೆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡರೆ ಆಗುತ್ತೆ. ನಾವು ಆಸ್ಟ್ರೇಲಿಯಾ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಒಪ್ಪಂದ ಹೇಗಿದೆ ಅಂದರೆ ನಮ್ಮ ಭಾರತದ ಕ್ಷೌರಿಕ ಅಲ್ಲಿ ಹೋಗಿ ಕೆಲಸ ಮಾಡಬಹುದು. ನಮ್ಮ ಬಾಣಸಿಗರು ಬೇಕಾದರೆ ಅಲ್ಲಿ ಹೋಗಿ ಕೆಲಸ ಮಾಡಬಹುದು. ಅಧಿಕೃತವಾಗಿ. ಇದರಿಂದ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಅವಕಾಶ ಸಿಕ್ಕಿದೆಯಲ್ಲ. ಇದೆಲ್ಲಾ ಸಾಮಾನ್ಯ ಜನರಿಗಾಗಿಯೇ ಆಗಿರುವುದು.

ಆರೋಗ್ಯ ಕ್ಷೇತ್ರದ ವಿಚಾರದಲ್ಲಿನ ಕೆಲಸಗಳ ಬಗ್ಗೆ ತೃಪ್ತಿ ಇದೆಯೇ?

ಮೋದಿಗೆ ತೃಪ್ತಿಯಾಗಿದೆ ಎಂದರೆ ಆವತ್ತು ಅವನಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಅಂತಾ ಅರ್ಥ.. ಅಂದರೆ ಅವನು ಬದುಕಿಲ್ಲ ಅಂತ. ನನ್ನ ಜೀವನದ ಕೊನೇ ಕ್ಷಣದವರೆಗೂ ನಾನು ಅಸಂತೋಷದಿಂದನೇ ಇರ್ತೀನಿ. ನಾನು ಸಂತೋಷ ಪಡೋದಿಲ್ಲ ಯಾಕೆ ಗೊತ್ತಾ? ಸಂತೋಷ ಪಡದೇ ಹೋದರೆ ಹೊಸದು ಏನಾದರೂ ಮಾಡೋಕೆ ಪ್ರೇರಣೆ ಸಿಗುತ್ತೆ. ಸಂತೋಷ ಪಡೋದಿಲ್ಲ ಯಾಕೆಂದರೆ ನಾನು ಇನ್ನೂ ಮಾಡೋದು ತುಂಬಾ ಇದೆ. ಆರೋಗ್ಯದ ವಿಷಯಕ್ಕೆ ಬಂದ್ರೆ, ಬಡ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಇದು ಮಹತ್ವ ಪೂರ್ಣವಾದದ್ದು. ಭಾರತದಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಇದೆ. ಆಯುಷ್ಮಾನ್ ಭಾರತ್ ಯೋಜನೆ ಇದರಲ್ಲಿ 70 ಕೋಟಿಗೂ ಅಧಿಕ ಜನ ಒಳ್ಳೆಯ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಕೇರಳದ ವ್ಯಕ್ತಿ ಅಹಮದಾಬಾದ್‌ಗೆ ಹೋದಾಗ ಆರೋಗ್ಯ ಕೆಟ್ಟು ಹೋದರೆ ಮೋದಿಯ ಕಾರ್ಡ್ ತೋರಿಸಿದ್ರೆ ಅವರಿಗೆ ಅಲ್ಲಿ ಟ್ರೀಟ್‌ಮೆಂಟ್ ಸಿಗುತ್ತೆ. ಅವರ ಸಂಬಂಧಿಕರು ಬರಬೇಕು, ಹಣ ತರಬೇಕು, ಆಮೇಲೆ ಚಿಕಿತ್ಸೆ ಅನ್ನೋ ಹಾಗಿಲ್ಲ. ಮೊದಲು ಸಾಮಾನ್ಯ ನಾಗರಿಕರಿಗೆ ತುಂಬಾ ಖರ್ಚಾಗುತ್ತಿತ್ತು. 2014-15ರಲ್ಲಿ ಸರಾಸರಿ ಶೇ.62ರಷ್ಟು ಮಂದಿ ತಮ್ಮ ಜೇಬಿನಿಂದ ಹಣ ನೀಡಿ ಚಿಕಿತ್ಸೆ ಪಡೀತಿದ್ರು. ಈಗ ಈ ಸಂಖ್ಯೆ ಕಡಿಮೆಯಾಗಿ 47 ಪರ್ಸೆಂಟ್‌ ಬಂದು ತಲುಪಿದೆ. ವ್ಯವಸ್ಥೆ ಹೇಗೆ ಸುಧಾರಣೆಯಾಗಿದೆ ನೋಡಿ.

2014-15ರಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 1100 ರುಪಾಯಿ ಖರ್ಚು ಮಾಡುತ್ತಿತ್ತು. ಇಂದು ನಾವು ಅದೇ ಪ್ರತಿ ವ್ಯಕ್ತಿಯ ಖರ್ಚನ್ನು ಎರಡು ಪಟ್ಟು ಹೆಚ್ಚು ಮಾಡಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆ ದೇಶದ ಸಾಮಾನ್ಯ ನಾಗರಿಕರ ಲಕ್ಷ ಕೋಟಿ ಹಣವನ್ನು ಉಳಿಸಿದೆ. ಯಾಕೆಂದರೆ ಕೇಂದ್ರ ಸರ್ಕಾರ ಅವರ ಪರವಾಗಿ ಖರ್ಚು ಮಾಡಿದೆ. ಮೊದಲು ವಯಸ್ಸಾದವರು ಅನಾರೋಗ್ಯವಾದರೆ ಹೇಳಿಕೊಳ್ತಿರಲಿಲ್ಲ. ನನ್ನ ಮಗನಿಗೆ ಖರ್ಚಾಗುತ್ತೆ ಅಂತ. ಆದರೆ ಇಂದು ನಿಶ್ಚಿಂತೆಯಿಂದ ಚಿಕಿತ್ಸೆ ಪಡೆಯಬಹುದು. ನಾವು ಅವರ ಒಂದು ಲಕ್ಷ ಕೋಟಿ ರುಪಾಯಿ ಉಳಿಸಿದ್ದೇವೆ. 11 ಸಾವಿರ ಜನೌಷಧಿ ಕೇಂದ್ರಗಳಿವೆ. ಅಲ್ಲಿ ಶೇ.80ರವರೆಗೂ ಡಿಸ್ಕೌಂಟ್ ಸಿಗುತ್ತೆ. ನಾವು ಅದನ್ನು 25 ಸಾವಿರದವರೆಗೂ ಏರಿಸಬೇಕು ಅಂತಿದ್ದೇವೆ. 70 ವರ್ಷ ಮೇಲ್ಪಟ್ಟವರಿಗೆ ನಾವು ಈ ಬಾರಿ ಪ್ರಣಾಳಿಕೆಯಲ್ಲಿ ಹೇಳಿದಂತೆ ಯಾವುದೇ ವರ್ಗವಾಗಿರಲಿ, ಅವರಿಗೆ ಆಯುಷ್ಮಾನ್ ಕಾರ್ಡ್ ಸಿಗಲಿದೆ. ಅವರ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ. ಅವರ ಕುಟುಂಬಗಳಿಗೆ ಇದರಿಂದ ಲಾಭವಾಗಲಿದೆ. ಅವರ ತಂದೆ ತಾಯಿ ಅಜ್ಜ- ಅಜ್ಜಿಗೆ ಆರೋಗ್ಯ ಸಮಸ್ಯೆಯಾದರೆ ಮಕ್ಕಳು ಖರ್ಚು ಮಾಡಬೇಕಿತ್ತು. ನಾವು ಎಂಥಾ ದೊಡ್ಡ ಖರ್ಚನ್ನು ಕಡಿಮೆ ಮಾಡಿದ್ದೇವೆ. 10 ವರ್ಷದಲ್ಲಿ ಮಾನವ ಸಂಪನ್ಮೂಲದ ಜತೆಗೆ ಮೂಲಭೂತ ಸೌಕರ್ಯವನ್ನು ಹೆಚ್ಚಿಗೆ ಮಾಡಲಾಗಿದೆ.

2014ರಲ್ಲಿ 387 ಮೆಡಿಕಲ್ ಕಾಲೇಜುಗಳಿದ್ದವು. ಇಂದು 706 ಮೆಡಿಕಲ್ ಕಾಲೇಜ್ ಇವೆ. ಇಷ್ಟು ಕಡಿಮೆ ಸಮಯದಲ್ಲಿ ದ್ವಿಗುಣ ಮಾಡಲಾಗಿದೆ. ಮೊದಲು ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ 51 ಸಾವಿರ ಇತ್ತು. ಈಗ ಒಂದು ಲಕ್ಷಕ್ಕೂ ಹೆಚ್ಚು ಸೀಟ್‌ಗಳಿವೆ. ಹೆಚ್ಚು ವೈದ್ಯರು ಸಿಕ್ಕರೆ, ಹೆಚ್ಚು ಸೇವೆ ಸಿಗಲಿದೆ. ಡಾಕ್ಟರ್‌ಗಳ ಸಂಖ್ಯೆ ಹೆಚ್ಚಾದರೆ ಗ್ರಾಮಗಳಿಗೆ ವೈದ್ಯಕೀಯ ಸೇವೆ ನೀಡಬಹುದು. ಪಿಜಿ ಸೀಟ್‌ಗಳ ಸಂಖ್ಯೆ ಸಹ ದ್ವಿಗುಣ ಮಾಡಲಾಗಿದೆ. ಇದರಿಂದ ಮೆಡಿಕಲ್ ಕಾಲೇಜ್‌ಗಳಿಗೆ ಒಳ್ಳೆಯ ಅಧ್ಯಾಪಕರು ಸಹ ಸಿಗುತ್ತಾರೆ. ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ, ನೀತಿಗಳು, ಬಜೆಟ್, ಶಿಕ್ಷಣದ ವಿಚಾರವಿರಲಿ ಆರೋಗ್ಯ ಕ್ಷೇತ್ರದಲ್ಲಿ ಎಲ್ಲವನ್ನೂ ಒಟ್ಟಿಗೆ ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗ್ತಿದೆ. ಯುವಕರೊಂದಿಗೆ ನಿಮ್ಮ ಸಂಪರ್ಕ ಹೇಗಿದೆ. ಈಗ ಯಾರು 18 ವರ್ಷ ಯುವಕರಿದ್ದಾರೋ ಅವರು ನೀವು ಅಧಿಕಾರಕ್ಕೆ ಬಂದಾಗ 8 ವರ್ಷದಲ್ಲಿ ಇದ್ದರು

21 ಶತಮಾನ ಏನಿದೆ, ಅದು ತಂತ್ರಜ್ಞಾನ ಆಧಾರಿತ. ನೀವು ಅರ್ಥ ಮಾಡಿಕೊಂಡು ಹೋಗಬೇಕು.

ನನ್ನ ವಯಸ್ಸಿನವರು ಏನಿದ್ದಾರೆ, ಆ ಯುಗದಿಂದ ಅವರು ಬಂದಿದ್ದಾರೆ. ಆವಾಗ ತಂತ್ರಜ್ಞಾನ ಇರಲಿಲ್ಲ. ಆದರೆ ನಾನು ಸರ್ಕಾರ ನಡೆಸಬೇಕಾಗಿದೆ. ನನಗೆ ಪ್ರಾಥಮಿಕ ಅಂಶಗಳು ಗೊತ್ತಿರಬೇಕು. ಇದರ ಬಗ್ಗೆ ವೈಯಕ್ತಿಕ ಅನುಭವ ಆಗಬೇಕು. ನನಗೆ ಸಾಮಾನ್ಯವಾಗಿ ಯಾರಾದರೂ ಗೇಮಿಂಗ್ ಬಗ್ಗೆ ಕೇಳಿದ್ರೆ, ಸಮಯ ಹಾಳು ಮಾಡಬೇಡಿ ಅಂತಿದ್ದೆ. ನಾನೂ ಅದನ್ನು ವಿವರವಾಗಿ ನೋಡಿದೆ. ಅಧ್ಯಯನ ಮಾಡಿದೆ. ಆಗ ನನಗೆ ನನ್ನ ದೃಷ್ಟಿಕೋನ ಸರಿಯಿಲ್ಲ ಅನಿಸ್ತು. ನಾವು ಅದಕ್ಕೆ ನಿರ್ಬಂಧ ಹೇರುವ ಬದಲು ಸರಿಯಾಗಿ ಡೈವರ್ಟ್ ಮಾಡಬೇಕು. ಗೇಮಿಂಗ್ ಜಗತ್ತಿನಲ್ಲಿ ಹಿಂದೂಸ್ತಾನದ ಜನ ಬಹಳ ಇದ್ದಾರೆ. ಗೇಮಿಂಗ್ ಮಾರ್ಕೆಟ್ ಹೊರಗಿನ ಜನರ ಕಬ್ಜಾದಲ್ಲಿದೆ. ಮೇಡ್ ಇನ್ ಇಂಡಿಯಾ ಗೇಮಿಂಗ್ ಆಗಬೇಕಿದೆ. ಭಾರತದ ಹತ್ತಿರ ಇಷ್ಟು ಕಥೆ.. ವಿಷಯಗಳಿವೆ. ಮತ್ತೊಂದು ನಮ್ಮ ಹೊಸ ಪೀಳಿಗೆಗೆ ಗೇಮಿಂಗ್‌ನಿಂದ ಸಂಸ್ಕಾರ ಕೂಡ ಕಲಿಸಬಹುದು. ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ಒಂದು ಪ್ರಾಜೆಕ್ಟ್ ಕೊಡ್ತಾರೆ. ಇದು ನಿಮ್ಮ ಅಸೈನ್ಮೆಂಟ್ ಒಂದು ವಾರದಲ್ಲಿ ಮಾಡಿಕೊಂಡು ಬನ್ನಿ ಎದು ಹೇಳುತ್ತಾರೆ. ಮಕ್ಕಳು ಆಗ ಅಧ್ಯಯನ ಮಾಡ್ತಾರೆ. ಗೇಮಿಂಗ್‌ನಲ್ಲೂ ಇದೇ ತರಹ ಅಸೈನ್ಮೆಂಟ್ ಕೊಡಲಾಗುತ್ತದೆ. ಕರ್ನಾಟಕದ ಒಬ್ಬ ಗೇಮರ್, ನದಿಯ ಕೊಳಚೆ ಬಗ್ಗೆ ಗೇಮ್ ಮಾಡಿದ್ದ. ನದಿ ಸ್ವಚ್ಛಗೊಳಿಸುವ ಕುರಿತು, ಅದು ನನಗೆ ತುಂಬಾ ಒಳ್ಳೆಯದು ಅನಿಸ್ತು. ನಾನು ಗೇಮರ್ಸ್ ಅನ್ನ ಭೇಟಿಯಾದೆ. ನಾನೂ ವಿದ್ಯಾರ್ಥಿಯಂತೆ ಅರ್ಥ ಮಾಡಿಕೊಳ್ತೀನಿ ನನಗೆ ಹೇಳಿ ಎಂದು ಹೇಳಿದೆ.

ನನಗೆ ಇದರಲ್ಲಿ ಯಾವುದೇ ಸಂಕೋಚ ಇಲ್ಲ. ಅವರಿಗೆ ಸಾಮರ್ಥ್ಯವೂ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರ ಮಾಡ್ತೀನಿ. ಮತ್ತೊಂದು ನನಗೂ ಆಸಕ್ತಿಯೂ ಇದೆ. ನಾನೂ ಯಾವತ್ತೂ ಸಣ್ಣ ಯೋಚನೆ ಮಾಡುವ ವ್ಯಕ್ತಿ ಅಲ್ಲ. ನಾನೂ ಬಂಧನದಲ್ಲಿ ಜೀವನ ಮಾಡುವ ವ್ಯಕ್ತಿ ಅಲ್ಲ. ಹೊಸ ವಿಷಯ ಕಲಿಯುವುದು. ಹೊಸ ವಿಚಾರ ಪ್ರಯೋಗ ಮಾಡುವುದು ನನಗೂ ಆಸಕ್ತಿ. 2012ರ ರಾಜಕೀಯ ಜೀವನದಲ್ಲಿ ನಾನು ಗೂಗಲ್ ಹ್ಯಾಂಗ್‌ಔಟ್ಸ್‌ ಮಾಡಿದ್ದೆ. ಆ ಸಮಯದಲ್ಲಿ ಗೂಗಲ್ ಹ್ಯಾಂಗ್ಔಟ್ಸ್ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಅದಾದ ಮೇಲೆ ನಾನೂ 3ಡಿ ಹಾಲೋಗ್ರಾಮ್ ಮಾಡಿದ್ದೆ. 3ಡಿ ಹಾಲೋಗ್ರಾಮ್ ಬಗ್ಗೆ ಜಗತ್ತಿನ ಹಲವರು ಪ್ರಶ್ನೆ ಮಾಡಿದ್ದರು. 3ಡಿ ಹಾಲೋಗ್ರಾಮ್‌ ಏನ್ ಮಾಡುತ್ತೆ ಎಂದು ಕೇಳಿದ್ರು. ಆಗ ನಾನು ಹೇಳಿದೆ.

ಇದು ಡ್ಯಾನ್ಸ್ ಮಾಡುತ್ತೆ ಎಂದು ಹೇಳಿದ್ದೆ. ಇಷ್ಟು ದೊಡ್ಡ ನಮ್ಮ ದೇಶ ಇದೆ. ನೀವು ನೋಡಿ ನಮ್ಮ ನಮೋ ಇನ್ ಕನ್ನಡ, ನಮೋ ಇನ್ ಮಲಯಾಳಂ, ನಮೋ ಇನ್ ತಮಿಳು.. ನಾನೂ ಹಿಂದಿಯಲ್ಲಿ AI ಉಪಯೋಗ ಮಾಡ್ತಿದ್ದೇನೆ. ನನ್ನ ಆ್ಯಪ್ ಕೂಡ AI ಬಳಸುವಂತಹ ಆ್ಯಪ್. ನಿಮ್ಮ ಜತೆಗಿನ ನನ್ನ ಫೋಟೋ ಕಳೆದುಹೋಯ್ತು ಅಂದುಕೊಳ್ಳಿ. ನೀವು ನಮೋ ಅ್ಯಪ್ ಹೋಗಿ AI ಟೂಲ್ ಉಪಯೋಗ ಮಾಡಿ ಒಂದು ಫೋಟೋ ಹಾಕಿದ್ರೆ, ನನ್ನ ಜತೆಗೆ ನಿಮ್ಮ ಎಷ್ಟು ಫೋಟೋ ಇವೆ, 30-40 ವರ್ಷದ ಹಿಂದಿನ ಎಲ್ಲ ಫೋಟೋಗಳು ನಿಮಗೆ ಸಿಗ್ತವೆ. ನಾನು AI ಉಪಯೋಗ ಮಾಡ್ತೀನಿ. ನಾನು ಆ ಪ್ರಕಾರ ನೋಡಿದ್ರೆ, ಕಂಟೆಂಟ್ ಕ್ರಿಯೇಟರ್ಸ್ ದೇಶದ ದೊಡ್ಡ ಆಸ್ತಿ ಆಗ್ತಾರೆ. ಜಗತ್ತಿನಾದ್ಯಂತ ಅವರು ಪರಿಣಾಮ ಬೀರ್ತಾರೆ. ನಾನು ಅವರ ಸಾಮರ್ಥ್ಯ ತಿಳಿದುಕೊಳ್ಳಬೇಕಾಗಿದೆ. ಒಂದು ದೊಡ್ಡ ಆರ್ಥಿಕತೆಯೂ ಇದೆ. ದೇಶದ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ ಎಂದು ನನಗೆ ಅನಿಸುತ್ತೆ. ಸ್ವಾಭಾವಿಕವಾಗಿ ಯುವ ಪೀಳಿಗೆ ಜತೆಗೆ ಸೇರಿಕೊಂಡು, ನಾನೂ ಅವರ ವಯಸ್ಸಿಗೆ ತಕ್ಕಂತೆ ತಯಾರಾಗಬೇಕಾಗುತ್ತದೆ.

ದೇಶದಲ್ಲಿ ವಿಐಪಿ ಸಂಸ್ಕೃತಿಯ ದೊಡ್ಡ ಪರಂಪರೆ ಇದೆ. ಅದರ ಬಗ್ಗೆ ನೀವು ಏನ್ ಹೇಳ್ತೀರಿ?ಇದು ಚಿಂತಾಜನಕ ಮತ್ತು ದೌಭಾರ್ಗಪೂರ್ಣ ಮಾತು. ಯಾಕೆಂದರೆ ವಿಐಪಿ ಸಂಸ್ಕೃತಿಯ ಮೂಲ, ನನಗೆ ಅರ್ಥವಾದಂತೆ ಬ್ರಿಟಿಷರ ಕಾಲದಿಂದ ಇದೆ. ಒಬ್ಬರಿಗೆ ಒಂದು ಕಾನೂನು. ಸಾಮಾನ್ಯ ಜನರಿಗೆ ಬೇರೆ ಕಾನೂನು. ಅವರಿಗೊಂದು ರೀತಿ ಜೀವನ, ಇವರಿಗೊಂದು ರೀತಿ ಜೀವನ ಅವರಿಗೆ ಒಂದು ಜಾಗ.. ಇವರಿಗೆ ಒಂದು ಜಾಗ..

ಅವರ ವಾಹನ ಬಂದ್ರೆ ಬೇರೆ.. ಅವರ ಟಾಂಗಾ ಬಂತಂದ್ರೆ ಬೇರೆ. ಬ್ರಿಟಿಷರು ಹೋದ ಮೇಲೆ ಇದೆಲ್ಲಾ ಹೋಗಬೇಕಾಗಿತ್ತು. ಆದರೆ ಹೋಗಲಿಲ್ಲ. ನಮ್ಮ ನಾಯಕರು ಅದನ್ನ ಜಾರಿ ಇಟ್ಟಿದ್ದರು. ನಾನು ಬಂದ ಮೇಲೆ ಕೆಂಪುದೀಪ ಇಲ್ಲ ಎಂಬ ಕ್ಯಾಬಿನೆಟ್ ನಿರ್ಣಯ ಮಾಡಿದೆ. ಯಾರೂ ಗಾಡಿ ಮೇಲೆ ಕೆಂಪುದೀಪ ಬಳಸುವಂತಿಲ್ಲ. ನಾನು ಗುಜರಾತ್‌ನಲ್ಲಿದ್ದಾಗ ಎಲ್ಲ ಸಚಿವರಿಗೂ ಒಂದು ನಿಯಮ ಇತ್ತು. ಬಹಳ ಟ್ರಾಫಿಕ್ ಜಾಮ್ ಆದರೆ ಸ್ವಲ್ಪ ಸೈರನ್ ಬಂದ್ ಮಾಡಿ.. ಸೈರೆನ್ ಮಾಡುತ್ತಾ ಹೋಗಲು ನೀವು ಯಾವ ದೊಡ್ಡ ಬಾದ್‌ಶಾ ಅಲ್ಲ. ನಾನು ನಂಬುತ್ತೇನೆ, ನಾವ್ಯಾರೂ ವಿಐಪಿ ಅಲ್ಲ.. ಇಪಿಐ. ಎವರಿ ಪರ್ಸನ್ ಈಸ್ ಇಂಪಾರ್ಟೆಂಟ್.

ಕೆಂಪುದೀಪ ಹಿಡಿದು ಎಲ್ಲ ವಿಐಪಿ ಸಂಸ್ಕೃತಿ ಮುಗಿಸಲೂ ನನ್ನ ಪ್ರಯತ್ನ ಮಾಡ್ತಾ ಇದ್ದೀನಿ. ಕೆಲವು ಅವಶ್ಯಕತೆ ಬರುತ್ತೆ, ನನಗೂ ಅರ್ಥವಾಗುತ್ತೆ. ದೇಶದ ರಾಷ್ಟ್ರಪತಿ ಫುಟ್‌ಪಾತ್ ಮೇಲೆ ನಡೆದು ಹೋಗುವುದು ಅದು ಸಾಧ್ಯವಿಲ್ಲ. ಆ ವಿಚಾರ ಸರಿಯೂ ಅಲ್ಲ. ಹೇಗೆ ವ್ಯಾಕ್ಸಿನೇಷನ್ ಆಯ್ತು..? ಜೀವನ್ಮರಣ ಪ್ರಶ್ನೆಯೂ ಬರುತ್ತದೆ.. ನಾನೂ ವ್ಯಾಕ್ಸಿನ್ ತೆಗೆದುಕೊಳ್ಳಬಹುದಿತ್ತು. ನನ್ನ ನಂಬರ್ ಯಾವಾಗ ಬರುತ್ತೆ ಆಗ ನಾನೂ ವ್ಯಾಕ್ಸಿನ್ ತೆಗೆದುಕೊಳ್ಳೋಣ ಎಂದು ನಿರ್ಧರಿಸಿದೆ. ಅಲ್ಲಿಯವರೆಗೂ ನಾನು ವ್ಯಾಕ್ಸಿನ್ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ, ನನ್ನ ತಾಯಿಗೆ ನೂರು ವರ್ಷ. ನನ್ನ ತಾಯಿ ಸಾವು ಸರ್ಕಾರಿ ಆಸ್ಪತ್ರೆಯಲ್ಲಿ ಆಯ್ತು. ನನ್ನ ತಾಯಿ ಜೀವನದ ಕೊನೆವರೆಗೂ ಆಸ್ಪತ್ರೆಗೆ ಹೋಗಲಿಲ್ಲ. ಕೊನೆಯ ಅವಧಿಯಲ್ಲಿ ಆಸ್ಪತ್ರೆಗೆ ಹೋಗಬೇಕಾಯ್ತು. ಅಂದು ನಾನೂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ.ನನ್ನ ತಾಯಿ ಅಂತ್ಯಸಂಸ್ಕಾರವನ್ನು ಸಾಮಾನ್ಯ ಜನರ ರೀತಿಯಲ್ಲೇ ನಾವು ಮಾಡಿ ಮುಗಿಸಿದೆವು.

ವಿಐಪಿ ಸಂಸ್ಕೃತಿ ವಿರುದ್ಧ ನಾನು ಎಷ್ಟು ಮಾಡಬಹುದೋ ಮಾಡುತ್ತೇನೆ. ನಾನು ನಂಬ್ತೀನಿ. ರಿಪಬ್ಲಿಕ್ ಡೇ ದಿನ ನಾವು ಯಾರನ್ನು ಆಮಂತ್ರಣ ಮಾಡ್ತೀವಿ. ನಾವೂ ಸೆಂಟ್ರಲ್ ವಿಸ್ತಾ ನಿರ್ಮಾಣ ಮಾಡಿದ್ದೆವಲ್ಲ, ನಿರ್ಮಾಣ ಮಾಡಿದವರನ್ನೆಲ್ಲ ವಿಶೇಷ ಗಣ್ಯರನ್ನಾಗಿ ನಾವು ಮಾಡಿದ್ದೆವು. ನಾನು ಪದವಿ ಪ್ರದಾನ ಮಾಡಲು ವಿಶ್ವವಿದ್ಯಾಲಯಕ್ಕೆ ಹೋಗ್ತೀನಿ. ನಾನು ಆ ವಿಶ್ವವಿದ್ಯಾಲಯದವರಿಗೆ ಹೇಳ್ತೀನಿ. ಮೊದಲು 50 ಕುರ್ಚಿ ನನ್ನ ಅತಿಥಿಗಳಿಗೆ ಬೇಕು ಅಂತಾ ಕೇಳ್ತೀನಿ. ಅವರು ಹೇಳ್ತಾರೆ 50 ಕುರ್ಚಿ ಸಾರ್ ಅಂತ. ಆ ವಿಶ್ವವಿದ್ಯಾಲಯದ ಸುತ್ತಮುತ್ತ ಜೋಪಡಿ ಇರುತ್ತವೆ. ಅಲ್ಲಿ ಸ್ಕೂಲ್ ಇರುತ್ತೆ. ಆ ಮಕ್ಕಳನ್ನು ನಾನು ಪದವಿ ಪ್ರದಾನ ಕಾರ್ಯಕ್ರಮಕ್ಕೆ ಕರೆದು ತಂದು ಕೂರಿಸುತ್ತೇನೆ. ಅದನ್ನ ನೋಡಿದ ಮಕ್ಕಳ ಮನಸ್ಸಿನಲ್ಲಿ ಅನಿಸುತ್ತದೆ. ನಾನು ಪದವಿ ಪ್ರಮಾಣ ಪಡೀಬೇಕು, ನಾನೂ ಈ ರೀತಿಯಾಗಿ ಟೋಪಿ ಧರಿಸೋಣ. ಈ ರೀತಿಯಾಗಿ ಕುರ್ತಾ ಹಾಕೋಣ ಅನ್ನಿಸುತ್ತೆ. ಆ ಸಂಸ್ಕಾರ ಆ ಮಕ್ಕಳಲ್ಲಿ ಬೆಳೆಯುತ್ತದೆ. ಮೊದಲು ಶಾಲೆಗಳಲ್ಲಿ ಪ್ರವೇಶಕ್ಕಾಗಿ ಎಂಪಿ ಕೋಟಾ ಇರ್ತಿತ್ತು. ಅದನ್ನ ನಾನೂ ರದ್ದು ಮಾಡಿದೆ. ಹಜ್ ಯಾತ್ರೆಗೂ ಕೂಡ ಕೋಟಾ ಇರ್ತಿತ್ತು. ಅದನ್ನೂ ನಾನೂ ರದ್ದು ಮಾಡಿದೆ. ನಮ್ಮ ಸಂಸತ್‌ನ ಕ್ಯಾಂಟೀನ್ ಸಬ್ಸಿಡಿ ರದ್ದು ಮಾಡಿದೆ. ಈಗ ಎಲ್ಲ ಸಂಸದರು ಪೂರ್ತಿ ದುಡ್ಡು ಕೊಡುತ್ತಾರೆ.

ಈಗ ನೋಡಿ ಪದ್ಮಶ್ರೀ ಬಗ್ಗೆ ಮೆಚ್ಚುಗೆ ಆಗ್ತಿದೆ ಯಾಕೆ..?

ಎಂಥೆಂಥಾ ಜನರನ್ನೂ ನಾವು ಈಗ ಹುಡುಕುತ್ತೇವೆ. ಇದು ಜನರ ಪದ್ಮ ಆಗಬೇಕಾಗಿದೆ. ಮೊದಲು ಹೆಚ್ಚು ಪದ್ಮಶ್ರೀ ದೆಹಲಿಗೇ ಹೋಗುತ್ತಿದ್ದವು. ರಾಜಕೀಯ ನಾಯಕರಿಗೆ ಪರಿಚಯ ಇರುವವರಿಗೆ ಪದ್ಮಶ್ರೀ ಸಿಗ್ತಿತ್ತು. ಅದೆಲ್ಲವನ್ನೂ ನಾವು ಬದಲು ಮಾಡಿದೆವು. ಇದು ಬಹುದೊಡ್ಡ ಸುಧಾರಣೆ. ಸಾಮಾಜಿಕ ಜೀವನದ ದೊಡ್ಡ ತಾಕತ್. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಷ್ಟು ದೊಡ್ಡ ದೇಶ ಇದೆ. ನೀವು ಮನ್‌ ಕೀ ಬಾತ್ ಕೇಳ್ತೀರಿ. ಸಣ್ಣ ಸಣ್ಣ ವ್ಯಕ್ತಿಗಳ ಜೀವನದ ಬಗ್ಗೆ ನಾನೂ ತಿಳಿದುಕೊಳ್ತೀನಿ. ಅದನ್ನ ಜಗತ್ತಿನ ಎದುರು ನಾನು ಹೇಳ್ತೀನಿ. ಇಷ್ಟು ದೊಡ್ಡ ದೇಶ.. ಇದು ದೇಶದ ತಾಕತ್.

Share this article