ಅಂತರಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಕೃತಿಯಲ್ಲಿ ಹತ್ತು ಹಲವು ಲೇಖನಗಳಿವೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಗಣ್ಯರು ಮಾಡಿದ ಭಾಷಣಕ್ಕೆ ಅಕ್ಷರರೂಪ ನೀಡಿ ಪ್ರಕಟಿಸಲಾಗಿದೆ.
ಮೈಸೂರು : ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ಅವರ ನೆಪಿನಲ್ಲಿ ಕೃಷ್ಣ ಜನಮನ ಅವರು ಅಂತರಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಎಂಬ ಕೃತಿ ಸಂಪಾದಿಸಿದ್ದಾರೆ.
ಕೃಷ್ಣ ಜನಮನ ಅವರು ಕಳೆದ 16 ವರ್ಷಗಳಿಂದಲೂ ಪ್ರೊ.ಕೆ. ರಾಮದಾಸ್ ನೆನಪಿನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಒಂದೊಂದು ವಿಷಯದ ಬಗ್ಗೆ ರಾಜ್ಯ ಮಟ್ಟದ ಲೇಖನ ಸ್ಪರ್ಧೆ ಏರ್ಪಡಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.
ಈ ಬಾರಿ ಜೂ.16 ಬೆಳಗ್ಗೆ 10.30 ರಿಂದ ಸಂಜೆಯವರೆಗೆ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ, ರಾಜಕಾರಣ ಮತ್ತು ನೈತಿಕ ನೆಲೆಗಟ್ಟು ಮತ್ತು ಪ್ರಸ್ತುತ ರಾಜಕಾರಣ ಕುರಿತ ವಿಚಾರಗೋಷ್ಠಿ, ಸಮಾರೋಪ ಸಮಾರಂಭ ಏರ್ಪಡಿಸಿದ್ದು, ಕೃಷ್ಣಪ್ರಸಾದ್, ಪ್ರೊ.ಮುಜಾಫರ ಅಸ್ಸಾದಿ, ಸವಿತಾ ನಾಗಭೂಷಣ, ರವೀಂದ್ರ ಭಟ್, ಸಂಸ್ಕೃತಿ ಸುಬ್ರಹ್ಮಣ್ಯ, ಅಂಶಿ ಪ್ರಸನ್ನಕುಮಾರ್, ಶಿವಸುಂದರ್, ಬಿ.ಎಂ. ಹನೀಫ್, ಕೆ.ವಿ. ಮಲ್ಲೇಶ್, ಬಿ.ಎಸ್. ದಿನಮಣಿ, ಕೃಪಾಕರ ಸೇನಾನಿ, ಎಂ.ಕೆ. ಸೋಮಶೇಖರ್, ಎಚ್.ಆರ್. ಸ್ವಾಮಿ ಮೊದಲಾದವರು ಭಾಗವಹಿಸುತ್ತಿದ್ದಾರೆ.
ಅಂತರಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಕೃತಿಯಲ್ಲಿ ಹತ್ತು ಹಲವು ಲೇಖನಗಳಿವೆ.
ಕಳೆದ ವರ್ಷ ಕಾರ್ಯಕ್ರಮದಲ್ಲಿ ಗಣ್ಯರು ಮಾಡಿದ ಭಾಷಣಕ್ಕೆ ಅಕ್ಷರರೂಪ ನೀಡಿ ಪ್ರಕಟಿಸಲಾಗಿದೆ.
ರಾಮದಾಸ್ ಎಂಬ ಉರಿವ ಪಂಜು- ದಿನೇಶ್ ಅಮೀನ್ ಮಟ್ಟು,
ನಮ್ಮದು ಚಳವಳಿಗಳ ಕಾಲ- ಡಾ.ಬಂಜಗೆರೆ ಜಯಪ್ರಕಾಶ್,
ಅಂತರಜಾತಿ ವಿವಾಹ ಒಂದು ಸಮಸ್ಯೆಯೇ ಇಲ್ಲ- ರುದ್ರಪ್ಪ ಹನಗವಾಡಿ,
ನನ್ನದೂ ಅಂತರಜಾತಿ ವಿವಾಹ- ಡಾ.ಪುರುಷೋತ್ತಮ ಬಿಳಿಮಲೆ ಅವರ ಲೇಖನಗಳಿವೆ.
ಸಂವಾದ- ಹಿರಿಯ ಜೀವಗಳ ಸ್ವಅನುಭವ ಕಥನದಲ್ಲಿ ಅಂತರಜಾತಿ ವಿವಾಹಿತರಿಗೇಕೆ ದಂಡ- ಡಾ. ರತಿರಾವ್,
ಜಾತಿ ಮುಖ್ಯವಲ್ಲ ಪ್ರೀತಿ ಮುಖ್ಯ- ಮೈಮ್ ರಮೇಶ್, ನನ್ನದು ಅಂತರಧರ್ಮೀಯ ವಿವಾಹ- ಬಿ.ಎಂ. ಮಹದೇವಮೂರ್ತಿ,
ನನ್ನದು ಚಳವಳಿಯೊಟ್ಟಿಗಿನ ವಿವಾಹ- ಎಂ.ಜಿ. ರಾಮಚಂದ್ರ ಅವರ ಅನಿಸಿಕೆಗಳು ದಾಖಲಾಗಿವೆ.
ನಂತರ ಸ್ಪರ್ಧೆಗೆ ಬಂದಿದ್ದ ಲೇಖನಗಳಲ್ಲಿ ಆಯ್ದವುಗಳನ್ನು ಪ್ರಕಟಿಸಲಾಗಿದೆ.
ಅಂತರಜಾತಿ ವಿವಾಹಗಳು ಮತ್ತ ಸಾಮಾಜಿಕ ಪರಿವರ್ತನೆ- ನಾ. ದಿವಾಕರ,
ಅಂತರಜಾತಿ ವಿವಾಹ ಜಾತಿ ವಿನಾಶದಲ್ಲಿ ದೊಡ್ಡ ಅಸ್ತ್ರ- ಡಾ.ಎಂ. ಕುಮಾರ,
ಅಂತರಜಾತಿ ವಿವಾಹಗಳು ಸಾಮಾಜಿಕ ಬದಲಾವಣೆಯ ಪ್ರಮುಖ ಹೆಜ್ಜೆ- ಡಾ.ಸಿ. ಮರಯ್ಯ,
ಅಂತರಜಾತಿ ವಿವಾಹಕ್ಕೆ ಜಾತಿ ಕಟ್ಟುಪಾಡುಗಳೇ ಅಡ್ಡಿ- ರೋಹಿಣಿ ಪೂಜಾರಿ ಕೋಣಾಲು ಪಂಚಮಕ್ಕಿ,
ಅಂತರಜಾತಿ ವಿವಾಹಗಳಿಂದ ಅಸ್ಪೃಶ್ಯತೆ ನಾಶ- ವಿ. ಪವಿತ್ರಾ, ಅಂತರಜಾತಿ ವಿವಾಹಗಳು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ- ಅನಂತನಾಗ, ಅಂತರಜಾತಿ ವಿವಾಹಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ- ಎಚ್.ಬಿ. ನವೀನ,
ಅಂತರಜಾತಿ ವಿವಾಹಗಳು ಬಹಳ ಸರಳ- ಎಚ್.ಎಂ. ರಕ್ಷಿತಾ, ಅಂತರಜಾತಿ ವಿವಾಹಗಳಿಂದ ಸಾಮಾಜಿಕ ಸಮಾನತೆ ಸಾಧ್ಯ- ಎಚ್.ಸಿ. ಹರ್ಷಿತಾ,
ಜಾತಿ ನಿರ್ಮೂಲನೆಗೆ ಅನ್ಯಜಾತಿ ವಿವಾಹ ಬಹಳ ಮುಖ್ಯ- ರಜತಾ ಪೂಜಾರಿ ಕೋಣಾಲು ಪಂಚಮಕ್ಕಿ,
ಅಂತರಜಾತಿ ವಿವಾಹಗಳಿಂದ ಸಮಾತನೆ ಸಾಧ್ಯ- ಆರತಿ ರಘುವೀರ್,
ಭಾರತದಲ್ಲಿ ಆರೇಂಜ್ಡ್ ಮ್ಯಾರೇಜ್ ಪ್ರಸಿದ್ಧಿ- ಹರ್ಷಿತಾ ನಂದಕುಮಾರ್,
ಅಂತರಜಾತಿ ವಿವಾಹಗಳು ಸೌಹಾರ್ದತೆಗೆ ಮೂಲ- ಕುಮಾರಸ್ವಾಮಿ,
ಅಂತರಜಾತಿ ವಿವಾಹದಿಂದ ಸಮಾಜದಲ್ಲಿ ಬದಲಾವಣೆ ಹೇಗೆ ಸಾಧ್ಯಃ- ಟಿ.ಡಿ. ರಾಧಿಕಾ,
ಪ್ರೇಮದ ಸೆಳೆತವೇ ಅಂತರಜಾತಿ ವಿವಾಹ- ಎಂ. ಮೋಹನ್,
ಅಂತರಜಾತಿ ವಿವಾಹ ಸಮಾಜಕ್ಕೆ ತುಂಬಾ ಸಹಕಾರಿ- ಸುಬ್ರಹ್ಮಣ್ಯ ಭಟ್ ಅವರ ಲೇಖನಗಳಿವೆ.
ಸಂಸ್ಕೃತಿ ಬುಕ್ ಪ್ಯಾರಡೈಸ್ ಈ ಕೃತಿಯನ್ನು ಪ್ರಕಟಿಸಿದ್ದು, ಆಸಕ್ತರು ಸಂಸ್ಕೃತಿ ಸುಬ್ರಹ್ಮಣ್ಯ, ಮೊ. 94480 37762 ಸಂಪರ್ಕಿಸಬಹುದು.