ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಬಿಡುಗಡೆ ಮಾಡಿದ ಸ್ಯಾಮ್ ಸಂಗ್

KannadaprabhaNewsNetwork |  
Published : Dec 04, 2025, 01:05 AM IST
Samsung

ಸಾರಾಂಶ

ಸ್ಯಾಮ್‌ಸಂಗ್ ಮೂರು ಬಾರಿ ಮಡಚಬಹುದಾದ ವಿನೂತನ ಸ್ಮಾರ್ಟ್ ಫೋನ್ ಆದ ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಅನ್ನು ಬಿಡುಗಡೆ ಮಾಡಿದೆ. ಡಿ.12ರಂದು ಮೊದಲು ಕೊರಿಯಾದಲ್ಲಿ ಲಭ್ಯವಾಗಲಿದ್ದು, ನಂತರ ಇತರ ಮಾರುಕಟ್ಟೆಗಳಲ್ಲಿ ದೊರೆಯಲಿದೆ.

  ಬೆಂಗಳೂರು :  ಸ್ಯಾಮ್‌ಸಂಗ್ ಮೂರು ಬಾರಿ ಮಡಚಬಹುದಾದ ವಿನೂತನ ಸ್ಮಾರ್ಟ್ ಫೋನ್ ಆದ ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಅನ್ನು ಬಿಡುಗಡೆ ಮಾಡಿದೆ. ಡಿ.12ರಂದು ಮೊದಲು ಕೊರಿಯಾದಲ್ಲಿ ಲಭ್ಯವಾಗಲಿದ್ದು, ನಂತರ ಇತರ ಮಾರುಕಟ್ಟೆಗಳಲ್ಲಿ ದೊರೆಯಲಿದೆ.ಅತ್ಯಾಧುನಿಕ ಫೋಲ್ಡೆಬಲ್ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ ತೆಳುವಾದ ವಿನ್ಯಾಸ ಹೊಂದಿದ್ದು, ಪ್ರೀಮಿಯಂ ಫೋನ್‌ ನಂತೆ ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾಗಿದೆ. 

ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ ಮತ್ತು ಎರಡು ಬಾರಿ ತೆರೆದಾಗ 10 ಇಂಚಿನ ದೊಡ್ಡ ಡಿಸ್‌ ಪ್ಲೇ ದೊರೆಯುತ್ತದೆ. ಇದು ಕೆಲಸ ಮಾಡುವುದಕ್ಕೂ, ಸಿನಿಮಾ ನೋಡುವುದಕ್ಕೂ ಅದ್ಭುತ ಅನುಭವ ನೀಡುತ್ತದೆ ಮತ್ತು ಇದುವರೆಗೆ ಯಾವ ಫೋನ್‌ನಲ್ಲೂ ಸಿಗದಂತಹ ಅತ್ಯುತ್ತಮ ಮೊಬೈಲ್ ಅನುಭವ ಒದಗಿಸುತ್ತದೆ!ಈ ಸಂದರ್ಭದಲ್ಲಿ ಮಾತನಾಡಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಧ್ಯಕ್ಷ ಮತ್ತು ಡಿವೈಸ್ ಎಕ್ಸ್‌ ಪೀರಿಯನ್ಸ್ (ಡಿಎಕ್ಸ್) ವಿಭಾಗದ ಮುಖ್ಯಸ್ಥ ಟಿಎಂ ರೋಹ್ ಅವರು, ‘ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಸ್ಯಾಮ್‌ಸಂಗ್ ಎಂದೂ ಹಿಂದೆ ಬೀಳುವುದಿಲ್ಲ. ಸ್ಯಾಮ್ ಸಂಗ್ ಸದಾ ಮೊಬೈಲ್ ಅನುಭವದ ಭವಿಷ್ಯವನ್ನು ರೂಪಿಸುತ್ತಲೇ ಇದೆ.  

ಫೋಲ್ಡೆಬಲ್ ವಿಭಾಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಕಂಪನಿಯು ಇದೀಗ ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಬಿಡುಗಡೆ ಮಾಡುವ ಮೂಲಕ ಮೊಬೈಲ್ ಉದ್ಯಮದ ದೀರ್ಘಕಾಲದ ಸವಾಲನ್ನು ಪರಿಹರಿಸಿದೆ. ಕೈಯಲ್ಲಿ ಸುಲಭವಾಗಿ ಹಿಡಿಯುವ ಸೌಲಭ್ಯ ಒದಗಿಸುವ ಈ ಸಾಧನವು ಪ್ರೀಮಿಯಂ ಕಾರ್ಯಕ್ಷಮತೆ ಮತ್ತು ಉತ್ಪಾದಕ ಸಾಮರ್ಥ್ಯವನ್ನು ಹೊಂದಿದೆ’ ಎಂದು ಹೇಳಿದರು.ಕೇವಲ 3.9 ಎಂಎಂ ದಪ್ಪವಿರುವ ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಅತ್ಯಂತ ತೆಳುವಾದ ರೂಪದಲ್ಲಿದೆ. ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗೆ ವಿಶೇಷವಾಗಿ ರಚಿಸಲಾದ ಸ್ನಾಪ್‌ಡ್ರಾಗನ್® 8 ಎಲೈಟ್ ಪ್ರೊಸೆಸರ್, 200 ಎಂಪಿ ಕ್ಯಾಮೆರಾ ಮತ್ತು ಇದುವರೆಗೆ ಯಾವುದೇ ಫೋಲ್ಡೆಬಲ್ ಫೋನ್‌ನಲ್ಲಿ ಸ್ಯಾಮ್‌ಸಂಗ್ ಒದಗಿಸಿರದ ಅತಿ ದೊಡ್ಡ ಬ್ಯಾಟರಿಯನ್ನು ಈ ಫೋನ್ ಹೊಂದಿದೆ.  

5,600 ಎಂಎಎಚ್ ಸಾಮರ್ಥ್ಯದ ತ್ರೀ-ಸೆಲ್ ಬ್ಯಾಟರಿ ವ್ಯವಸ್ಥೆಯನ್ನು ಮೂರು ಪ್ಯಾನಲ್‌ ಗಳಲ್ಲಿ ಹಂಚಲಾಗಿದ್ದು, ಸಮತೋಲಿತವಾಗಿ ವಿದ್ಯುತ್ ವಿತರಣೆ ನಡೆಯುವಂತೆ ಮತ್ತು ದಿನವಿಡೀ ಬ್ಯಾಟರಿ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತದೆ. 45 ವಾರ್ಪ್ ಸೂಪರ್ ಫಾಸ್ಟ್ ಚಾರ್ಜಿಂಗ್‌ ವ್ಯವಸ್ಥೆ ಇದ್ದು, ನೀವು ಎಷ್ಟೇ ಸ್ಟ್ರೀಮ್ ಮಾಡಿದರೂ, ಕಂಟೆಂಟ್ ರಚಿಸಿದರೂ, ಕೆಲಸ ಮಾಡಿದರೂ ಏನೂ ತೊಂದರೆ ಇರುವುದಿಲ್ಲ.ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ತೆರೆದಾಗ 10 ಇಂಚಿನ ಸ್ಕ್ರೀನ್ ನ ಮೇಲೆ ಮೂರು 6.5 ಇಂಚಿನ ಸ್ಮಾರ್ಟ್‌ಫೋನ್‌ ಗಳಷ್ಟು ಜಾಗವಿರುತ್ತದೆ. ದಿನವಿಡೀ ಮಲ್ಟಿಟಾಸ್ಕಿಂಗ್‌ ಗೆ ಅನುವು ಮಾಡಿ ಕೊಡುತ್ತದೆ.

 ಮೂರು ವಿಭಿನ್ನ ಪೋರ್ಟ್ರೇಟ್ ಗಾತ್ರದ ಆಪ್‌ ಗಳನ್ನು ಒಟ್ಟಿಗೆ ತೆರೆದು ಯಾವುದೇ ಅಡಚಣೆ ಇಲ್ಲದೆ ಕೆಲಸ ಮಾಡಬಹುದು, ಮಲ್ಟಿ-ವಿಂಡೋದಲ್ಲಿ ಆಪ್‌ ಗಳ ಗಾತ್ರ ಬದಲಾಯಿಸಿ ಮುಖ್ಯ ಮಾಹಿತಿಯನ್ನು ಸ್ಪಷ್ಟವಾಗಿ ನೋಡಬಹುದು. ಡಾಕ್ಯುಮೆಂಟ್ ಓದುವಾಗ ಫೋನ್ ಲಂಬವಾಗಿ ಹಿಡಿದು ಹೆಚ್ಚಿನ ಗಮನ ನೀಡಬಹುದು. ಉದಾಹರಣೆಗೆ, ಹೊಸ ಮನೆಯ ಡಿಸೈನ್ ಪ್ಲಾನ್ ತಯಾರಿಸುತ್ತಿರುವ ವಾಸ್ತುಶಿಲ್ಪಿಯೊಬ್ಬರು ಒಂದೇ ಮಲ್ಟಿ-ವಿಂಡೋ ಕೆಲಸದ ಜಾಗದಲ್ಲಿ ಮೂರು ಆಪ್‌ ಗಳನ್ನು ಒಟ್ಟಿಗೆ ತೆರೆದು ಮನೆಯ ಬ್ಲೂಪ್ರಿಂಟ್ ಪರಿಶೀಲಿಸಬಹುದು, ಪ್ರಪೋಸಲ್ ಬರೆಯಬಹುದು, ಅಳತೆಗಳನ್ನು ಲೆಕ್ಕ ಹಾಕಬಹುದು. ಆಗ ಯಾರದಾದರೂ ಕಾಲ್ ಬಂದರೆ ಲೇಔಟ್ ಗೆ ತೊಂದರೆಯಾಗದೆ ಕಾಲ್ ಎತ್ತಬಹುದು.

ಒಂದೇ ಟ್ಯಾಪ್‌ ಮಾಡಿದರೆ ಮೊದಲು ತೆರೆದಿದ್ದ ಆಪ್‌ ಗಳೆಲ್ಲಾ ಮತ್ತೆ ತೆರೆದುಕೊಳ್ಳುತ್ತವೆ

 ಮತ್ತೆ ಕೆಲಸ ಆರಂಭಿಸುವಾಗ ತೆರೆಯ ಕೆಳಗೊಮ್ಮೆಯ ಬಲಭಾಗದ ಟಾಸ್ಕ್‌ ಬಾರ್‌ ನಲ್ಲಿ ಒಂದೇ ಟ್ಯಾಪ್‌ ಮಾಡಿದರೆ ಮೊದಲು ತೆರೆದಿದ್ದ ಆಪ್‌ ಗಳೆಲ್ಲಾ ಮತ್ತೆ ತೆರೆದುಕೊಳ್ಳುತ್ತವೆ. ಜನರೇಟಿವ್ ಎಡಿಟ್, ಸ್ಕೆಚ್ ಟು ಇಮೇಜ್ ಸೇರಿದಂತೆ ಫೋಟೋ ಅಸಿಸ್ಟ್ ಫೀಚರ್ ದೊಡ್ಡ ಸ್ಕ್ರೀನ್ ನಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತವೆ. ಎಡಿಟ್ ಮಾಡಿದ ಮೊದಲು- ನಂತರದ ಫೋಟೋಗಳನ್ನು ಪಕ್ಕಪಕ್ಕವೇ ಸುಲಭವಾಗಿ ಹೋಲಿಸಬಹುದು. ಬ್ರೌಸಿಂಗ್ ಅಸಿಸ್ಟ್ ಫೀಚರ್ ಸ್ಯಾಮ್‌ಸಂಗ್ ಇಂಟರ್ನೆಟ್ ಬಳಸುವುದನ್ನು ಸರಳಗೊಳಿಸುತ್ತದೆ ಮತ್ತು ತಕ್ಷಣ ಸಾರಾಂಶ ಅಥವಾ ಅಗತ್ಯ ಬಿದ್ದರೆ ಭಾಷಾಂತರ ಒದಗಿಸುತ್ತದೆ. 

ಹೆಚ್ಚು ಪೋರ್ಟೆಬಲ್

ಹೆಚ್ಚು ಪೋರ್ಟೆಬಲ್ ಆದರೂ ಅತ್ಯುತ್ತಮ ವೀಕ್ಷಣೆಗಾಗಿ ರಚಿತವಾದ 10 ಇಂಚಿನ ಪ್ರಧಾನ ಸ್ಕ್ರೀನ್ ನಲ್ಲಿ ಸಿನಿಮಾ ಮತ್ತು ಇತರ ಶೋಗಳನ್ನು ನೋಡಬಹುದು. ಯೂಟ್ಯೂಬ್‌ ನಲ್ಲಿ ವೀಡಿಯೋ ನೋಡುತ್ತಾ ಕಾಮೆಂಟ್‌ ಗಳನ್ನು ಪಕ್ಕದಲ್ಲಿ ಓದಬಹುದು. ಸ್ಯಾಮ್‌ಸಂಗ್‌ನ ವಿಷುವಲ್ ಡಿಸ್‌ಪ್ಲೇ ಪರಿಣತಿಯಿಂದ 2ಎಕ್ಸ್ ಅಮೋಲ್ಡ್ ಕವರ್ ಸ್ಕ್ರೀನ್ ಸಿದ್ಧಪಡಿಸಲಾಗಿದ್ದು, ಇದು 120 ಹರ್ಟ್ಜ್ ವರೆಗಿನ ರಿಫ್ರೆಶ್ ರೇಟ್‌ ಹೊಂದಿದೆ ಮತ್ತು ಸೊಗಸಾದ ದೃಶ್ಯಗಳನ್ನು ಕಾಣಿಸುತ್ತದೆ. ತೆರೆದಾಗಲೂ ಮಡಚಿದಾಗಲೂ ಹೆಚ್ಚಿನ ಬ್ರೈಟ್‌ನೆಸ್ ಒದಗಿಸುತ್ತಿದ್ದು, ಕವರ್ ಡಿಸ್‌ಪ್ಲೇ 2600 ನಿಟ್ಸ್, ಮುಖ್ಯ ಸ್ಕ್ರೀನ್ 1600 ನಿಟ್ಸ್ ಹೊಂದಿದೆ.

ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಖರೀದಿಸುವ ಗ್ರಾಹಕರಿಗೆ 6 ತಿಂಗಳ ಉಚಿತ ಗೂಗಲ್ ಎಐ ಪ್ರೊ ಟ್ರಯಲ್ ಸಿಗುತ್ತದೆ. ಜೊತೆಗೆ ಜೆಮಿನಿ ಆಪ್‌ ನಲ್ಲಿ ವಿಯೋ3 ಆಧಾರಿತ ವೀಡಿಯೊ ಜನರೇಷನ್ ಸೇರಿದಂತೆ ಶಕ್ತಿಶಾಲಿ ಫೀಚರ್‌ಗಳು + 2ಟಿಬಿ ಸುರಕ್ಷಿತ ಕ್ಲೌಡ್ ಸ್ಟೋರೇಜ್ ಲಭ್ಯವಿದೆ. ನಮ್ಮ ಗ್ಯಾಲಕ್ಸಿ ಝಡ್ ಟ್ರೈಫೋಲ್ಡ್ ಗ್ರಾಹಕರಿಗೆ ವಿಶೇಷ ಮೌಲ್ಯ ನೀಡಲು ಸ್ಯಾಮ್‌ಸಂಗ್ ಎಕ್ಸ್‌ ಕ್ಲೂಸಿವ್ ಡಿಸ್‌ಪ್ಲೇ ರಿಪೇರ್ ಲಾಭವನ್ನು ಪರಿಚಯಿಸುತ್ತಿದ್ದು, ಈ ಯೋಜನೆಯಡಿ ಪ್ರತಿ ಖರೀದಿದಾರರಿಗೂ ಒಮ್ಮೆ ಡಿಸ್‌ಪ್ಲೇ ರಿಪೇರ್ ವೆಚ್ಚದಲ್ಲಿ ಶೇ.50 ರಿಯಾಯಿತಿ ಸಿಗುತ್ತದೆ.

PREV
Read more Articles on

Recommended Stories

ಡಿಜಿಟಲ್ ವ್ಯವಸ್ಥೆ ಬಲಪಡಿಸಲು ಐಬಿಎಂ ಜೊತೆ ಸಹಯೋಗ ಮಾಡಿಕೊಂಡ ಕರ್ನಾಟಕ ಬ್ಯಾಂಕ್
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 13 ವಾರ್ಡ್‌ಗಳ ಹೆಸರು, 6 ವಾರ್ಡ್‌ ಗಡಿಗಳ ಬದಲಾವಣೆ