ಅಮಿತ್ ಪಾಠಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ನ ವೈಯಕ್ತಿಕ ಸಾಲ ವಿಭಾಗದ ಬಿಸಿನೆಸ್ ಹೆಡ್
ಹಿಂದಿನ ದಿನಗಳಲ್ಲಿ ತುರ್ತು ಸಂದರ್ಭಗಳಿಗಾಗಿ ಮಾತ್ರ ಸಾಲ ಪಡೆಯಲಾಗುತ್ತಿತ್ತು. ಆದರೆ ಈಗ ಹಳೆಯ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಈಗ ಗ್ರಾಹಕರು ಆಸ್ತಿ, ಶಿಕ್ಷಣ, ಪ್ರವಾಸ, ಆರೋಗ್ಯ ಮತ್ತು ಜೀವನಶೈಲಿಯಂತಹ ವಿವಿಧ ಅಗತ್ಯಗಳಿಗಾಗಿ ವೈಯಕ್ತಿಕ ಸಾಲಗಳನ್ನು ಪಡೆಯುತ್ತಿದ್ದಾರೆ.
ಭಾರತದಲ್ಲಿ ವೈಯಕ್ತಿಕ ಸಾಲಗಳು ಕೇವಲ ‘ಸಂಕಷ್ಟದ ಸಮಯದಲ್ಲಿ ಮಾತ್ರ’ ಪಡೆಯುವಂತಹವು ಎಂಬ ಹಳೆಯ ದೃಷ್ಟಿಕೋನವು ನಿರಂತರವಾಗಿ ಬದಲಾಗುತ್ತಿದೆ. ವಿಶೇಷವಾಗಿ ಸ್ಥಿರ ಉದ್ಯೋಗ ಮತ್ತು ಸುಸ್ಥಿರ ಸಂಬಳ ಹೊಂದಿರುವ ಗ್ರಾಹಕರಲ್ಲಿ ಹೆಚ್ಚಾಗಿ ಈ ಬದಲಾವಣೆ ಕಂಡುಬರುತ್ತಿದೆ. ಇವರು ವರ್ಷಗಳಿಂದ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿರುವವರು ಮತ್ತು ಸತತವಾಗಿ ದೀರ್ಘಕಾಲದ ಉಳಿತಾಯ ಹಾಗೂ ಹೂಡಿಕೆಗಳನ್ನು ಮಾಡುತ್ತಾ ಬಂದಿರುವವರಾಗಿದ್ದಾರೆ.ವಿಶೇಷವಾಗಿ ಕೋವಿಡ್ ನಂತರ ಬದಲಾಗಿದ್ದು ಅವರ ಹೂಡಿಕೆ ಮಾಡುವ ಸಾಮರ್ಥ್ಯ ಅಲ್ಲ, ಬದಲಾಗಿ ‘ಹೂಡಿಕೆ’ ಎನ್ನುವುದರ ನಿಜವಾದ ಅರ್ಥ. ಆರ್ಥಿಕವಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತಾವು ಸರಿಯಾದ ಹಾದಿಯಲ್ಲಿದ್ದರೂ, ಅರಿವಿಲ್ಲದೆಯೇ ತಮ್ಮ ಆರೋಗ್ಯ, ಮನಸ್ಸು ಮತ್ತು ದೇಹದ ಮೇಲಿನ ಹೂಡಿಕೆಯನ್ನು ಕಡೆಗಣಿಸಿರುವುದನ್ನು ಅನೇಕರು ಈ ಅವಧಿಯಲ್ಲಿ ಅರಿತುಕೊಂಡರು. ಪ್ರಸ್ತುತ ಕೆಲಸದ ಒತ್ತಡ ಮತ್ತು ವೇಗದ ಜೀವನಶೈಲಿಯಿಂದಾಗಿ ಯೋಗಕ್ಷೇಮ, ಸ್ವಯಂ-ಆರೈಕೆ ಮತ್ತು ಜೀವನಮಟ್ಟದ ಸುಧಾರಣೆಗಳು ಐಷಾರಾಮಿತನವಾಗಿ ಉಳಿದಿಲ್ಲ, ಬದಲಿಗೆ ದೈನಂದಿನ ಅಗತ್ಯಗಳಾಗಿ ಮಾರ್ಪಟ್ಟಿವೆ. ಆ ಅರಿವು ಕಳೆದ ಕೆಲವು ವರ್ಷಗಳಲ್ಲಿ ಮತ್ತಷ್ಟು ಗಾಢವಾಗಿದೆ.
ಹಾಗಾಗಿ ಅವರಿಗೆ ವೈಯಕ್ತಿಕ ಸಾಲಗಳು ಒಂದು ಪ್ರಾಯೋಗಿಕ ಆಯ್ಕೆಯಾಗಿವೆ. ಎಷ್ಟು ಇಎಂಐ ಕಟ್ಟಬೇಕು ಎಂದು ಮೊದಲೇ ಗೊತ್ತಿದ್ದರೆ ಇಂದಿನ ಖರ್ಚುಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ ಮತ್ತು ದೀರ್ಘಕಾಲದ ಹೂಡಿಕೆಯನ್ನು ಮುಂದುವರಿಸುವುದಕ್ಕೂ ನೆರವಾಗುತ್ತದೆ. ವಾಸ್ತವವಾಗಿ, ‘ಕನಸುಗಳನ್ನು ನನಸಾಗಿಸಲು’ ಸಾಲ ಪಡೆಯುವ ಹಳೆಯ ಪರಿಕಲ್ಪನೆಯು ಈಗ ಬದಲಾಗಿದೆ. ಈ ಕಾಲದ ಅನೇಕ ಸಾಲಗಾರರು ಈಗಾಗಲೇ ಹೂಡಿಕೆದಾರರಾಗಿದ್ದಾರೆ ಮತ್ತು ಅವರು ತಮ್ಮ ಸಂಪತ್ತು ವೃದ್ಧಿಯ ಪಯಣಕ್ಕೆ ವಿರಾಮ ನೀಡದೆ ತಮ್ಮ ಗುರಿಗಳನ್ನು ಮುಟ್ಟಲು ಸಾಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ.
ಇಂದಿನ ಗ್ರಾಹಕರು ವೈಯಕ್ತಿಕ ಸಾಲಗಳನ್ನು ಹೇಗೆ ಬಳಸುತ್ತಿದ್ದಾರೆ?
ಸಾಲದಲ್ಲಿ ವಿಶ್ವಾಸ ಹೆಚ್ಚುತ್ತಿರುವುದು ಏಕೆ?
• ಸಾಲದ ನಿಯಮಗಳು ಮತ್ತು ವೆಚ್ಚಗಳು ಈಗ ಹೆಚ್ಚು ಸ್ಪಷ್ಟ ಹಾಗೂ ಪಾರದರ್ಶಕವಾಗಿವೆ.
• ಬಜೆಟ್ ರೂಪಿಸಲು ಇಎಂಐ ರಚನೆಗಳು ಸರಳವಾಗಿವೆ.
ಈ ಕುರಿತು ವಿವರವಾಗಿ ಮಾತನಾಡುವ ಕೋಟಕ್ ಮಹೀಂದ್ರಾ ಬ್ಯಾಂಕ್ ನ ವೈಯಕ್ತಿಕ ಸಾಲ ವಿಭಾಗದ ಬಿಸಿನೆಸ್ ಹೆಡ್ ಅಮಿತ್ ಪಾಠಕ್ ಅವರು , ‘ನಾವಿಲ್ಲಿ ಒಂದು ಆತ್ಮವಿಶ್ವಾಸದ ಬದಲಾವಣೆಯನ್ನು ಕಾಣುತ್ತಿದ್ದೇವೆ. ಉತ್ತಮ ಆದಾಯ ಮತ್ತು ಶಿಸ್ತುಬದ್ಧ ಹೂಡಿಕೆಯ ಅಭ್ಯಾಸವಿರುವ ಗ್ರಾಹಕರು, ತಮ್ಮ ದೀರ್ಘಕಾಲದ ಹೂಡಿಕೆಗಳನ್ನು ಹಿಂಪಡೆಯದೆಯೇ ಯೋಗಕ್ಷೇಮ ಪಾಲನೆ, ವಿಶಿಷ್ಟ ಅನುಭವಗಳು ಮತ್ತು ದೀರ್ಘಕಾಲದ ಆಸೆಗಳಂತಹ ಅರ್ಥಪೂರ್ಣ ಆಸೆಗಳನ್ನು ಪೂರೈಸಲು ವೈಯಕ್ತಿಕ ಸಾಲಗಳನ್ನು ಬಳಸುತ್ತಿದ್ದಾರೆ. ಕೋವಿಡ್ ನಂತರದಲ್ಲಿ, ಅನೇಕ ಗ್ರಾಹಕರು ಸ್ವಯಂ-ಆರೈಕೆ ಮತ್ತು ದೀರ್ಘಕಾಲದ ಕನಸುಗಳನ್ನು ಕೇವಲ ಐಷಾರಾಮಿ ಎಂದು ಭಾವಿಸದೆ ಆದ್ಯತೆಗಳೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅಂತಹವರಿಗೆ ಕೋಟಕ್ ಸಂಸ್ಥೆಯ ವೈಯಕ್ತಿಕ ಸಾಲಗಳು ಸಹಜವಾದ ಆಯ್ಕೆಯಾಗಿವೆ. ತಾವು ಶಿಸ್ತಿನಿಂದ ನಿರ್ಮಿಸಿದ ದೀರ್ಘಕಾಲೀನ ಹೂಡಿಕೆಗಳಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಅವರು ಸಾಲವನ್ನು ಆಯ್ದುಕೊಳ್ಳುತ್ತಿದ್ದಾರೆ. ವೈಯಕ್ತಿಕ ಸಾಲವು ಅವರ ಭವಿಷ್ಯದ ಯೋಜನೆಗಳನ್ನು ಭದ್ರವಾಗಿರಿಸುವ ಜೊತೆಗೆ, ಇಂದಿನ ಜೀವನವನ್ನು ಸಂಪೂರ್ಣವಾಗಿ ಸವಿಯಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.