ಕನ್ನಡಪ್ರಭವಾರ್ತೆ ಬೆಂಗಳೂರು
ಈ ಕಾರ್ಯಕ್ರಮದಲ್ಲಿ ‘ಪ್ರೊಡಕ್ಟಿವಿಟಿ ಅನ್‌ಲೀಷ್ಡ್’ ಎಂಬ ಥೀಮ್ ಅಡಿಯಲ್ಲಿ ಕಂಪನಿಯು ಕಾರ್ಯಾಚರಣೆ ದಕ್ಷತೆ ಮತ್ತು ಲಾಭವನ್ನು ಹೆಚ್ಚಿಸುವ, ಕಠಿಣ ಕೆಲಸಕ್ಕೆ ಸಿದ್ಧವಾದ ಭವಿಷ್ಯದ ವಾಹನಗಳನ್ನು ಪರಿಚಯಿಸಿದೆ. ಅದರಲ್ಲೂ ಪ್ರಮುಖವಾಗಿ ಅತ್ಯಂತ ಶಕ್ತಿಶಾಲಿ ಟಿಪ್ಪರ್ ಆಗಿರುವ ಪ್ರೈಮಾ 3540.ಕೆ ಆಟೋಶಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಗಣಿಗಾರಿಕೆ ವಿಭಾಗಕ್ಕಾಗಿಯೇ ಈ ಟಿಪ್ಪರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ಪ್ರೈಮಾ ಇ.28ಕೆ ಮತ್ತು ಭಾರತದ ಮೊದಲ ಫ್ಯಾಕ್ಟರಿ-ಫಿಟ್ಟೆಡ್ ಸಿಎನ್‌ಜಿ ಟಿಪ್ಪರ್ ಸಿಗ್ನಾ 2820.ಟಿಕೆ ಸಿಎನ್‌ಜಿ ವಾಹನಗಳು ಬಿಡುಗಡೆಯಾಗಿದೆ. ಇದರ ಜೊತೆಗೆ ಕೈಗಾರಿಕಾ ಎಂಜಿನ್‌ಗಳು, ಆಕ್ಸಲ್‌ಗಳು, ಜೆನ್‌ಸೆಟ್ ಗಳಂತಹ ವಿವಿಧ ರೀತಿಯ ಸಮಗ್ರ ಘಟಕಗಳನ್ನು ಪ್ರದರ್ಶನ ಮಾಡಲಾಗಿದೆ.
ಎಕ್ಸ್ ಕಾನ್ 2025ರಲ್ಲಿ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್ ನ ಉಪಾಧ್ಯಕ್ಷರು ಮತ್ತು ಟ್ರಕ್ ವಿಭಾಗದ ವ್ಯವಹಾರ ಮುಖ್ಯಸ್ಥರಾದ ಶ್ರೀ ರಾಜೇಶ್ ಕೌಲ್ ಅವರು, ‘ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರವು ಭಾರಿ ಬೆಳವಣಿಗೆ ಹೊಂದುತ್ತಿರುವ ಈ ವೇಳೆಯಲ್ಲಿ ಗ್ರಾಹಕರು ಕಾರ್ಯದಕ್ಷತೆ ಮತ್ತು ಲಾಭವನ್ನು ಹೆಚ್ಚಿಸುವ ಅತ್ಯಂತ ವಿಶ್ವಾಸಾರ್ಹ, ಹೆಚ್ಚು ಉತ್ಪಾದಕತೆಗೆ ಅನುವು ಮಾಡಿಕೊಡುವ ವಾಹನಗಳನ್ನು ಬಯಸುತ್ತಾರೆ. ಆ ಹಿನ್ನೆಲೆಯಲ್ಲಿ ನಾವು ನಮ್ಮ ಪ್ರಮುಖ ಪ್ರೈಮಾ 3540.ಕೆ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಅತ್ಯಂತ ಕಠಿಣ ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ವಾಹನವನ್ನು ಒದಗಿಸಿ ಗಣಿಗಾರಿಕಾ ಕ್ಷೇತ್ರಕ್ಕೆ ನಾವು ಪ್ರವೇಶಿಸುತ್ತಿದ್ದೇವೆ. ಜೊತೆಗೆ ನಮ್ಮ ಮೊದಲ ಎಲೆಕ್ಟ್ರಿಕ್ ವಿದ್ಯುತ್ ಟಿಪ್ಪರ್ ಪ್ರೈಮಾ ಇ.28ಕೆ ಅನ್ನು ಕೂಡ ಬಿಡುಗಡೆ ಮಾಡಿದ್ದೇವೆ’ ಎಂದು ಹೇಳಿದರು.ವಿವಿಧ ಘಟಕಗಳ (ಅಗ್ರಿಗೇಟ್ಸ್) ಶ್ರೇಣಿಯನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್ ನ ಸ್ಪೇರ್ಸ್ ಮತ್ತು ನಾನ್- ವೆಹಿಕಲ್ ವ್ಯವಹಾರ ಮುಖ್ಯಸ್ಥ ಶ್ರೀ ವಿಕ್ರಮ್ ಅಗ್ರವಾಲ್ ಅವರು, ‘ಎಕ್ಸ್ ಕಾನ್ 2025ರಲ್ಲಿ ನಮ್ಮ ವಿವಿಧ ಘಟಕಗಳ ಪ್ರದರ್ಶನ ಮಾಡಿದ್ದು, ಈ ಪ್ರದರ್ಶನವು ಕಠಿಣ, ವಿಶ್ವಾಸಾರ್ಹ ಮತ್ತು ಗ್ರಾಹಕ ಕೇಂದ್ರಿತ ಉತ್ಪನ್ನಗಳನ್ನು ನೀಡುವ ಟಾಟಾ ಮೋಟಾರ್ಸ್ ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಉತ್ಪನ್ನಗಳು ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸುಗಮ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ಹೊಸ 15 ಕೆವಿಎ ಮತ್ತು 35 ಕೆವಿಎ ಜೆನ್ ಸೆಟ್ ಗಳು ಹಾಗೂ ವಿಸ್ತೃತ ಸಿಇವಿ ಬಿಎಸ್ V ಕೈಗಾರಿಕಾ ಎಂಜಿನ್ ಗಳ ಶ್ರೇಣಿಯೊಂದಿಗೆ ನಾವು ಉತ್ತಮ ಕಾರ್ಯಕ್ಷಮತೆ, ಕಾರ್ಯನಿರ್ವಹಣಾ ಅವಧಿ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ’ ಎಂದು ಹೇಳಿದರು.
- ಟಾಟಾ ಪ್ರೈಮಾ 3540.ಕೆ ಆಟೋಶಿಫ್ಟ್: ಕಮಿನ್ಸ್ 8.5ಲೀ ಎಂಜಿನ್ ನಿಂದ ಚಾಲಿತ, 375 ಎಚ್‌ಪಿ ಪವರ್ ಮತ್ತು 1800ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಟಿಪ್ಪರ್ ಆಳವಾದ ಗಣಿಗಾರಿಕೆ ವಿನ್ಯಾಸಗೊಂಡಿದೆ. ಅತ್ಯುತ್ತಮ ಇಂಧನ ದಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸುತ್ತದೆ. 12 ಸ್ಪೀಡ್ ಎಎಂಟಿ, ಪ್ರೀಮಿಯಂ ಕ್ಯಾಬಿನ್ ಮತ್ತು ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಕಠಿಣ ಹೆವಿ-ಹಾಲೇಜ್ ಕೆಲಸಗಳಿಗೆ ಸೂಕ್ತವಾಗಿದೆ.
- ಸಿಗ್ನಾ 2820.ಟಿಕೆ ಸಿಎನ್‌ಜಿ: 28-ಟನ್ ವಿಭಾಗದಲ್ಲಿ ಭಾರತದ ಸಿಎನ್‌ಜಿ ಟಿಪ್ಪರ್ ಆಗಿದ್ದು, ಸುಸ್ಥಿರ ನಿರ್ಮಾಣ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.
- ಪ್ರೈಮಾ 3532.ಟಿಕೆ: ತನ್ನ ವರ್ಗದಲ್ಲಿ ಅತಿ ದೊಡ್ಡ 26m³ ಘನ ಮೀಟರ್ ಲೋಡ್ ಬಾಡಿ ಹೊಂದಿರುವ ವಾಹನ ಇದಾಗಿದ್ದು, ನಿರ್ಮಾಣ ಘಟಕಗಳ ಮೇಲ್ಮೈ ಸಾಗಾಟಕ್ಕೆ ಉತ್ತಮವಾಗಿದೆ.
ಇದರೊಂದಿಗೆ ಟಾಟಾ ಮೋಟಾರ್ಸ್ ಜೆನ್ ಸೆಟ್ ಗಳು, ಟಾಟಾ ಮೋಟಾರ್ಸ್ ಕೈಗಾರಿಕಾ ಎಂಜಿನ್‌ಗಳು, ಟಾಟಾ ಮೋಟಾರ್ಸ್ ಲೈವ್ ಆಕ್ಸಲ್‌ಗಳು, ಟಾಟಾ ಮೋಟಾರ್ಸ್ ಟ್ರೇಲರ್ ಆಕ್ಸಲ್ ಮತ್ತು ಘಟಕಗಳನ್ನು ಪ್ರದರ್ಶಿಸಲಾಗಿದೆ.