ಊಹಾಪೋಗಳಿಗೆ ಕೊನೆಗೂ ತೆರೆ: ಭಾರತದಲ್ಲೇ ನಡೆಯಲಿದೆ 17ನೇ ಆವೃತ್ತಿ ಐಪಿಎಲ್‌

KannadaprabhaNewsNetwork |  
Published : Feb 15, 2024, 01:15 AM ISTUpdated : Feb 15, 2024, 12:52 PM IST
ಐಪಿಎಲ್‌ | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 17ನೇ ಆವೃತ್ತಿಯ ಕೆಲ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡಿತ್ತು. ಹಲವು ಮಾಧ್ಯಮಗಳ ವರದಿ ಪ್ರಕಾರ ಐಪಿಎಲ್‌ ಭಾರತದ ಜೊತೆಗೆ ವಿದೇಶದಲ್ಲೂ ನಡೆಯಲಿದೆ ಎಂದು ಹೇಳಲಾಗಿತ್ತು.

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 17ನೇ ಆವೃತ್ತಿಯ ಕೆಲ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡಿತ್ತು. 

ಹಲವು ಮಾಧ್ಯಮಗಳ ವರದಿ ಪ್ರಕಾರ ಐಪಿಎಲ್‌ ಭಾರತದ ಜೊತೆಗೆ ವಿದೇಶದಲ್ಲೂ ನಡೆಯಲಿದೆ ಎಂದು ಹೇಳಲಾಗಿತ್ತು. 

ಆದರೆ ಇದಕ್ಕೆಲ್ಲಾ ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಕೊನೆಗೂ ತೆರೆ ಎಳೆದಿದ್ದಾರೆ. ಈ ಬಾರಿ ಐಪಿಎಲ್‌ ಪಂದ್ಯಗಳು ಭಾರತದಲ್ಲೇ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಸಾರ್ವತ್ರಿಕ ಚುನಾವಣೆ ಹೊರತಾಗಿಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯಾ ಸ್ಥಳಗಳ ವೇಳಾಪಟ್ಟಿಯನ್ನು ನಿರ್ವಹಿಸುವ ಮೂಲಕ ಭಾರತದಲ್ಲೇ ಇಡೀ ಪಂದ್ಯಾವಳಿಯನ್ನು ಆಡಿಸಲು ನಿರ್ಧರಿಸಿದೆ.

ಈ ಬಗ್ಗೆ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ ಭಾರತದಲ್ಲೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. 

ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಳ್ಳಲು ಕಾಯುತ್ತಿದ್ದೇವೆ. ಆ ಬಳಿಕ ಐಪಿಎಲ್‌ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ’ ಎಂದಿದ್ದಾರೆ. ಮಾರ್ಚ್‌ ಕೊನೆ ವಾರದಲ್ಲಿ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆಯಿದೆ. 

ಏಪ್ರಿಲ್‌ನಲ್ಲಿ ಚುನಾವಣೆ ನಡೆಯಬಹುದು. ಹೀಗಾಗಿ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ. 2009ರ ಲೋಸಕಭೆ ಚುನಾವಣೆ ವೇಳೆ ಸಂಪೂರ್ಣ ಐಪಿಎಲ್‌ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. 

ಆದರೆ 2014ರಲ್ಲಿ ಯುಎಇಯಲ್ಲಿ ಮೊದಲ 20 ಪಂದ್ಯಗಳನ್ನು ಆಡಿಸಿ, ಚುನಾವಣೆಯ ನಂತರ ಭಾರತದಲ್ಲಿ ಟೂರ್ನಿಯನ್ನು ಮುಂದುವರಿಸಲಾಯಿತು. 

ಇನ್ನು, 2019ರಲ್ಲಿ ಸಾರ್ವತ್ರಿಕ ಚುನಾವಣೆ ಹೊರತಾಗಿಯೂ ಇಡೀ ಪಂದ್ಯಾವಳಿಯನ್ನು ಭಾರತದಲ್ಲೇ ಆಯೋಜಿಸಲಾಗಿತ್ತು. ಇದೀಗ ಬಿಸಿಸಿಐ ಆಡಳಿತ ಮಂಡಳಿ ಮತ್ತೊಮ್ಮೆ ಅದೇ ರೀತಿಯ ಯೋಜನೆ ರೂಪಿಸುತ್ತಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ