ರಾಜ್ಯದ ಚೊಚ್ಚಲ ರಣಜಿ ಗೆಲುವಿಗೆ 50ರ ಸಂಭ್ರಮ!

KannadaprabhaNewsNetwork |  
Published : Mar 28, 2024, 12:52 AM ISTUpdated : Mar 28, 2024, 12:10 PM IST
ಕೆಎಸ್‌ಸಿಎ| Kannada Prabha

ಸಾರಾಂಶ

1973-74ರ ರಣಜಿ ಟ್ರೋಫಿಯನ್ನು ಕರ್ನಾಟಕ ತಂಡ ಗೆದ್ದು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ, ಟ್ರೋಫಿ ವಿಜೇತ ತಂಡದಲ್ಲಿದ್ದ ಆಟಗಾರರನ್ನು ಸನ್ಮಾನಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಕ್ರಿಕೆಟ್‌ ತಂಡ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಬುಧವಾರ (ಮಾ.27)ಕ್ಕೆ ಸರಿಯಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು.

1973-74ರ ಋತುವಿನ ಫೈನಲ್‌ನಲ್ಲಿ ದಿಗ್ಗಜ ಸ್ಪಿನ್ನರ್‌ ಇಎಎಸ್‌ ಪ್ರಸನ್ನ ನೇತೃತ್ವದ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 185 ರನ್‌ ಗೆಲುವು ಸಾಧಿಸಿತ್ತು. 1974ರ ಮಾ.27ರಂದು ಫೈನಲ್‌ ಪಂದ್ಯ ಮುಕ್ತಾಯಗೊಂಡಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಸನ್ಮಾನ ಸಮಾರಂಭದಲ್ಲಿ 1973-74ರ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಇಎಎಸ್‌ ಪ್ರಸನ್ನ, ದಿಗ್ಗಜ ಸ್ಪಿನ್ನರ್‌ ಬಿ.ಎಸ್‌.ಚಂದ್ರಶೇಖರ್‌, ಭಾರತದ ಮಾಜಿ ಬ್ಯಾಟರ್‌ 

ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌, ದಿಗ್ಗಜ ಬ್ಯಾಟರ್‌, ಭಾರತದ ಮಾಜಿ ನಾಯಕ ಜಿ.ಆರ್‌.ವಿಶ್ವನಾಥ್‌, ಭಾರತದ ಮಾಜಿ ವಿಕೆಟ್‌ ಕೀಪರ್‌, 1983ರ ಏಕದಿನ ವಿಶ್ವಕಪ್‌ ತಂಡದ ಸದಸ್ಯ ಸಯ್ಯದ್‌ ಕಿರ್ಮಾನಿ, ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಸುಧಾಕರ್‌ ರಾವ್‌, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಸಂಜಯ್‌ ದೇಸಾಯಿ, ಇನ್ನಿತರರು ಇದ್ದರು.

PREV

Recommended Stories

ಇಂದಿನಿಂದ ದುಲೀಪ್‌ ಟ್ರೋಫಿ ಫೈನಲ್‌
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಭರ್ಜರಿ ಅಭ್ಯಾಸ