ಕಾರ್‌ ರೇಸ್‌ ತಂಡ ಖರೀದಿಸಿದ ನಟ ಸುದೀಪ್‌

Published : Jul 05, 2025, 12:12 PM IST
Kichcha Sudeep

ಸಾರಾಂಶ

ಇಂಡಿಯನ್‌ ರೇಸಿಂಗ್‌ ಲೀಗ್‌ನ ಭಾಗವಾಗಿರುವ ಇಂಡಿಯನ್‌ ರೇಸಿಂಗ್‌ ಫೆಸ್ಟಿವಲ್‌ನಲ್ಲಿ ನಟ ಕಿಚ್ಚ ಸುದೀಪ್ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ. ಇದು ಎಫ್‌4 (ಫಾರ್ಮುಲಾ 4) ದರ್ಜೆಯ ರೇಸ್‌ ಆಗಿದೆ.

 ಬೆಂಗಳೂರು :  ಇಂಡಿಯನ್‌ ರೇಸಿಂಗ್‌ ಲೀಗ್‌ನ ಭಾಗವಾಗಿರುವ ಇಂಡಿಯನ್‌ ರೇಸಿಂಗ್‌ ಫೆಸ್ಟಿವಲ್‌ನಲ್ಲಿ ನಟ ಕಿಚ್ಚ ಸುದೀಪ್ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ. ಇದು ಎಫ್‌4 (ಫಾರ್ಮುಲಾ 4) ದರ್ಜೆಯ ರೇಸ್‌ ಆಗಿದೆ.

ಸುದೀಪ್ ತಮ್ಮ ತಂಡದ ಹೆಸರು, ಲೋಗೋ ಹಾಗೂ ಕಾರ್‌ಗಳನ್ನು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ತಮ್ಮ ತಂಡಕ್ಕೆ ಸುದೀಪ್‌, ಕಿಚ್ಚಾಸ್‌ ಕಿಂಗ್ಸ್‌ ಬೆಂಗಳೂರು(ಕೆಕೆಬಿ)ಎಂದು ಹೆಸರಿಟ್ಟಿದ್ದಾರೆ. ಈ ವರ್ಷದ ರೇಸ್‌ಗಳು ಆಗಸ್ಟ್‌ನಿಂದ ಶುರುವಾಗಲಿವೆ.

ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್‌, ಕೋಲ್ಕತಾ, ಚೆನ್ನೈ, ಗೋವಾ ಫ್ರಾಂಚೈಸಿಗಳು ಭಾಗಿಯಾಗಲಿವೆ.

ಇಂಡಿಯನ್‌ ರೇಸಿಂಗ್‌ ಲೀಗ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 5 ಸುತ್ತುಗಳು ನಡೆಯಲಿವೆ. ಮೊದಲ ಸುತ್ತಿನ ರೇಸ್‌ ಆ.15ರಿಂದ 17ರ ವರೆಗೂ ಕೊಯಮತ್ತೂರಿನ ಕರಿ ಮೋಟಾರ್‌ ಸ್ಪೀಡ್‌ ವೇ ರೇಸ್‌ ಟ್ರ್ಯಾಕ್‌ , 2ನೇ ಸುತ್ತು ಆ.22-24ರ ವರೆಗೂ ಚೆನ್ನೈನಲ್ಲಿರುವ ಮದ್ರಾಸ್‌ ಅಂ.ರಾ. ಸರ್ಕ್ಯೂಟ್‌, 3ನೇ ಸುತ್ತು ಅ.3ರಿಂದ 5ರ ವರೆಗೂ ಬೆಂಗಳೂರು ಹೊರವಲಯದಲ್ಲಿರುವ ಬ್ರೆನ್‌ ರೇಸ್‌ವೇನಲ್ಲಿ ನಡೆಯಲಿದೆ.

ಅ.10-12ರ ವರೆಗೂ 4ನೇ, ಅ.28-30ರ ವರೆಗೂ 5ನೇ ಸುತ್ತು ನಡೆಯಲಿದೆ. ಈ ಎರಡು ಸುತ್ತುಗಳಿಗೆ ಆತಿಥ್ಯ ವಹಿಸುವ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.

PREV
Read more Articles on

Recommended Stories

ಯುವ ಫುಟ್‌ಬಾಲ್ ಆಟಗಾರರಿಗಾಗಿ ರೆಸಿಡೆನ್ಷಿಯಲ್ ಅಕಾಡೆಮಿ ಆರಂಭಿಸಿದ ಎಸ್‌ಯುಎಫ್‌ಸಿ
ಕೆಎಸ್‌ಸಿಎ ಚುನಾವಣೆ: ವೆಂಕಟೇಶ್‌ ಪ್ರಸಾದ್‌ ಟೀಮ್‌ಗೆ ಕುಂಬ್ಳೆ, ದ್ರಾವಿಡ್‌, ಶ್ರೀನಾಥ್‌ ಬೆಂಬಲ