ವಿಶಾಖಪಟ್ಟಣಂ: ಇಂಗ್ಲೆಂಡ್‌ನ ಹಿರಿಯ ವೇಗಿ ಜೇಮ್ಸ್ ಆ್ಯಂಡರ್‌ಸನ್ ತಮ್ಮ ಕ್ರಿಕೆಟ್ ಬದುಕಿನುದ್ದಕ್ಕೂ ತಮಗಿಂತ ಹಲವು ವರ್ಷ ಕಡಿಮೆ ಪ್ರಾಯದ ಆಟಗಾರರ ಜೊತೆಗೆ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸದ್ಯ 6ನೇ ಬಾರಿ ಭಾರತ ಪ್ರವಾಸದಲ್ಲಿರುವ 41ರ ಆ್ಯಂಡರ್‌ಸನ್, ತಾವು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ಇನ್ನೂ ಹುಟ್ಟೇ ಇರದ ಇಬ್ಬರು ಆಟಗಾರರ ಜೊತೆ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯವಾಡಲಿದ್ದಾರೆ. ಆ್ಯಂಡರ್‌ಸನ್ 2003ರ ಮೇ ತಿಂಗಳಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಆದರೆ ಭಾರತ ವಿರುದ್ಧ 2ನೇ ಟೆಸ್ಟ್‌ನ ತಂಡಲ್ಲಿರುವ ಶೋಯೆಬ್ ಬಶೀರ್ ಹುಟ್ಟಿದ್ದು 2003ರ ಅಕ್ಟೋಬರ್ 13ಕ್ಕೆ. ಮತ್ತೋರ್ವ ಸ್ಪಿನ್ನರ್ ರೆಹಾನ್ ಅಹ್ಮದ್ ಜನ್ಮ ದಿನ 2004ರ ಆಗಸ್ಟ್ 13. ಅಂದರೆ ಆ್ಯಂಡರ್‌ಸನ್‌ನ ಟೆಸ್ಟ್ ಅನುಭವಕ್ಕಿಂತಲೂ ಇವರಿಬ್ಬರ ವಯಸ್ಸು ಕಡಿಮೆ.