ಬೆಂಗಳೂರು: ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋುತುಜಾ ಭೋಸಲೆ 6-2, 5-7, 7-6 (5) ಸೆಟ್‌ಗಳಿಂದ ಜಪಾನ್ ನ ಮೊಯುಕಾ ಉಚಿಜಿಮಾ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಉಪಾಂತ್ಯ ಪ್ರವೇಶಿಸುವ ಮುನ್ನ ಅವರು 2 ಗಂಟೆ 58 ನಿಮಿಷ ನಡೆದ ಹೋರಾಟದಲ್ಲಿ ಕೆಲವು ನಾಟಕೀಯ ತಿರುವುಗಳನ್ನು ಎದುರಿಸಬೇಕಾಯಿತು. ಕರೋಲ್ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕ್ಲೋಯ್ ಪ್ಯಾಕೆಟ್ ವಿರುದ್ಧ 6-4, 6-1 ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಆಡುತ್ತಿರುವ 27ರ ಹರೆಯದ ಭಾರತೀಯ ಆಟಗಾರ್ತಿ, ನಾಲ್ಕರ ಘಟ್ಟದಲ್ಲಿ 6ನೇ ಶ್ರೇಯಾಂಕಿತೆ ಫ್ರಾನ್ಸ್‌ನ ಕರೋಲ್ ಮೊನೆಟ್ ವಿರುದ್ಧ ಸೆಣಸಲಿದ್ದಾರೆ.
ಅಂತಿಮ ಸೆಟ್‌ನಲ್ಲಿ 2-5ರಿಂದ ಹಿನ್ನಡೆ ಅನುಭವಿಸಿದ ಋುತುಜಾ ಹೊಸ ಶಕ್ತಿಯೊಂದಿಗೆ ಅದ್ಭುತ ಪುನರಾಗಮನ ಮಾಡಿದರು ಮತ್ತು ಕೆಲವು ಅತ್ಯುತ್ತಮ ಅಂಕಗಳನ್ನು ಗಳಿಸಿ 5ನೇ ಗೇಮ್‌ನಲ್ಲಿ ಸಮಬಲ ಸಾಧಿಸಿದರು. ನಂತರ ಅವರು ಆರು ‘ಡ್ಯೂಸ್’ ನಂತರ 5-6 ರಲ್ಲಿ ಮೂರು ಮ್ಯಾಚ್ ಪಾಯಿಂಟ್ ಗಳನ್ನು ಉಳಿಸಿದರು ಮತ್ತು ಅಂತಿಮವಾಗಿ ಟೈ-ಬ್ರೇಕರ್‌ನಲ್ಲಿ ಜಪಾನ್ ಆಟಗಾರ್ತಿಯನ್ನು 7-5 ರಿಂದ ಸೋಲಿಸಿದರು.ಏತನ್ಮಧ್ಯೆ, ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿಯು- ಯುನ್ ಲಿ (ತೈಪೆ) ಮತ್ತು ಶಿಮಿಜು (ಜಪಾನ್) ಜೋಡಿ 2-6, 6-3, 10-4 ಸೆಟ್‌ಗಳಿಂದ ಅಮಾಂಡಿನ್ ಹೆಸ್ಸೆ (ಫ್ರಾನ್ಸ್) ಮತ್ತು ದಲಿಲಾ ಜಾಕುಪೊವಿಕ್ (ಸ್ಲೋವಾಕಿಯಾ) ಜೋಡಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಮತ್ತೊಂದು ಡಬಲ್ಸ್ ಪಂದ್ಯದಲ್ಲಿಕೊಮಿಲ್ಲಾರೊಸಟೆಲ್ಲೊ(ಇಟಲಿ) ಮತ್ತು ದರ್ಜಾ (ಲಾತ್ವಿಯಾ) ಜೋಡಿ 6-1, 2-6, 10-5 ಸೆಟ್‌ಗಳಿಂದ ಸಕಿ ಇಮಾಮುರಾ/ನಹೊ ಸಾಟೊ (ಜಪಾನ್) ಜೋಡಿಯನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಹೊಂದಿದೆ.