ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ ನಗಾಲ್‌ ಶುಭಾರಂಭ

KannadaprabhaNewsNetwork |  
Published : Feb 14, 2024, 02:17 AM IST
ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ ನಗಾಲ್‌ ಶುಭಾರಂಭ | Kannada Prabha

ಸಾರಾಂಶ

ವಿಶ್ವ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಪ್ರವೇಶಿಸಿರುವ ಭಾರತದ ಸುಮಿತ್‌ ನಗಾಲ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುವಿಶ್ವ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಪ್ರವೇಶಿಸಿರುವ ಭಾರತದ ಸುಮಿತ್‌ ನಗಾಲ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್‌, ಫ್ರಾನ್ಸ್‌ನ ಜೆಫ್ರಿ ಬ್ಲ್ಯಾನ್‌ಕಾನೆಕ್ಸ್‌ ವಿರುದ್ಧ 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.ಟೂರ್ನಿಯಲ್ಲಿ 2ನೇ ಶ್ರೇಯಾಂಕಿತನಾಗಿ ಆಡುತ್ತಿರುವ 26 ವರ್ಷದ ಸುಮಿತ್‌, 2ನೇ ಸುತ್ತಿನಲ್ಲಿ ಹಾಕಾಂಗ್‌ನ ಕೊಲ್‌ಮನ್‌ ವಾಂಗ್‌ ವಿರುದ್ಧ ಸೆಣಸಲಿದ್ದಾರೆ. ವಾಂಗ್ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ರಾಫೆಲ್‌ ಕಾಲಿಗ್ನೊನ್‌ ವಿರುದ್ಧ 6-4, 7-6(4)ರಲ್ಲಿ ಜಯಿಸಿದರು.ಮಾಜಿ ವಿಶ್ವ ನಂ.25 ಕೆನಡಾದ ವಸೆಕ್‌ ಪಾಸ್ಪಿಸಿಲ್‌ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಎರಿಕ್‌ ವಾನ್ಶೆಲ್‌ಬೊಯ್ಮ್‌ ವಿರುದ್ಧ 7-6, 3-6, 6-4 ಸೆಟ್‌ಗಳ ಪ್ರಯಾಸದ ಜಯ ಸಾಧಿಸಿದರು.ಡಬಲ್ಸ್‌ನಲ್ಲಿ ಭಾರತದ ಸಾಯಿ ಕಾರ್ತಿಕ್‌ ರೆಡ್ಡಿ ಹಾಗೂ ಮನೀಶ್‌ ಸುರೇಶ್‌ ಕುಮಾರ್‌ ಮೊದಲ ಸುತ್ತಿನಲ್ಲಿ 2-6, 6-7ರಲ್ಲಿ ಫ್ರಾನ್ಸ್‌ನ ಕಾನ್ಸ್ಟೆಟಿನ್‌ ಹಾಗೂ ಮ್ಯಾಕ್ಸಿಮ್‌ ವಿರುದ್ಧ ಸೋಲುಂಡಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಡೆಲ್ಲಿ ಚಾಲೆಂಜ್‌ ಗೆಲ್ಲುತ್ತಾ ಆರ್‌ಸಿಬಿ?
ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು