ಹೈದರಾಬಾದ್: 17ನೇ ಆವೃತ್ತಿ ಐಪಿಎಲ್‌ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಮಾಜಿ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಬಾದ್ ತಂಡಗಳು ಬುಧವಾರ ಪರಸ್ಪರ ಮುಖಾಮುಖಿಯಾಗಲಿವೆ.
ಹಾರ್ದಿಕ್ ಪಾಂಡ್ಯ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ 5 ಬಾರಿ ಚಾಂಪಿಯನ್ ಮುಂಬೈ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪರಾಭವಗೊಂಡಿತ್ತು. ಅತ್ತ ಪ್ಯಾಟ್ ಕಮಿನ್ಸ್ ಸಾರಥ್ಯದ ಸನ್‌ರೈಸರ್ಸ್ ತಂಡ ಕೋಲ್ಕತಾ ವಿರುದ್ಧ ಸೋಲುಂಡಿತ್ತು.
ಗುಜರಾತ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಹೊರತಾಗಿಯೂ ಮುಂಬೈ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿತ್ತು.
ರೋಹಿತ್, ಇಶಾನ್ ಕಿಶನ್, ತಿಲಕ್ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದ್ದು, ಹಾರ್ದಿಕ್ ನಾಯಕತ್ವದ ಒತ್ತಡ ನಿಭಾಯಿಸಿ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ, ಪಿಯೂಶ್ ಚಾವ್ಲಾ ಪರಿಣಾಮಕಾರಿಯಾಗದ ಹೊರತು ತಂಡಕ್ಕೆ ಗೆಲುವು ಕಷ್ಟಸಾಧ್ಯ.
ಅತ್ತ ಸನ್‌ರೈಸರ್ಸ್ ತಂಡ ರನ್‌ಮಳೆ ಹರಿದಿದ್ದ ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಅಲ್ಪದರಲ್ಲೇ ಸೋಲು ಕಂಡಿತ್ತು. ಕ್ಲಾಸೆನ್ ಅಬ್ಬರದ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದ್ದು, ಮಯಾಂಕ್, ಅಭಿಷೇಕ್, ಮಾರ್ಕ್‌ರಮ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ₹20.5 ಕೋಟಿಗೆ ಹರಾಜಾಗಿದ್ದ ನಾಯಕ ಕಮಿನ್ಸ್ ಫ್ರಾಂಚೈಸಿ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವ ರೀತಿ ಪ್ರದರ್ಶನ ನೀಡಬೇಕಿದೆ.
ಒಟ್ಟು ಮುಖಾಮುಖಿ: 21
ಮುಂಬೈ: 12ಹೈದರಾಬಾದ್: 09
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್, ಇಶಾನ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್(ನಾಯಕ), ಟಿಮ್ ಡೇವಿಡ್, ಶಮ್ಸ್, ಚಾವ್ಲಾ, ಕೋಟ್ಜೀ, ಬೂಮ್ರಾ, ವುಡ್.
ಹೈದರಾಬಾದ್: ಮಯಾಂಕ್, ಅಭಿಷೇಕ್, ತ್ರಿಪಾಠಿ, ಮಾರ್ಕ್‌ರಮ್, ಕ್ಲಾಸೆನ್, ಸಮದ್, ಶಾಬಾಜ್, ಯಾನ್ಸನ್, ಕಮಿನ್ಸ್(ನಾಯಕ), ಭುವನೇಶ್ವರ್, ಮಾರ್ಕಂಡೆ
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ.