ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಕತಾರ್‌ ಫೈಟ್‌

KannadaprabhaNewsNetwork |  
Published : Jun 11, 2024, 01:37 AM ISTUpdated : Jun 11, 2024, 04:01 AM IST
ಭಾರತ ಫುಟ್ಬಾಲ್‌ ತಂಡ | Kannada Prabha

ಸಾರಾಂಶ

ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್‌(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್‌(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

ದೋಹಾ: 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ವಿಶ್ವಾಸದಲ್ಲಿರುವ ಭಾರತ ತಂಡ, 2ನೇ ಸುತ್ತಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಕತಾರ್‌ ವಿರುದ್ಧ ಸೆಣಸಲಿದೆ. 

ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್‌(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್‌(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

 ಗುಂಪಿನಿಂದ ಅಗ್ರ-2 ಸ್ಥಾನ ಪಡೆದು 3ನೇ ಸುತ್ತಿಗೇರಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಸೋತರೆ ಕನಸು ಭಗ್ನಗೊಳ್ಳಲಿದ್ದು, ಡ್ರಾಗೊಂಡರೆ ಅತ್ತ ಆಫ್ಘನ್‌-ಕುವೈತ್ ಪಂದ್ಯದ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗಲಿದೆ.

ಪಂದ್ಯ: ರಾತ್ರಿ 9.15ಕ್ಕೆ

ಒಲಿಂಪಿಕ್ಸ್‌ನಲ್ಲಿ ನಗಾಲ್‌ ಸ್ಪರ್ಧೆ ಬಹುತೇಕ ಖಚಿತ

ನವದೆಹಲಿ: ಜರ್ಮನಿಯ ಎಟಿಪಿ 100 ಹ್ರೀಲ್‌ಬ್ರಾನ್ ಚಾಲೆಂಜರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ 77ನೇ ಸ್ಥಾನಕ್ಕೇರಿರುವ ಭಾರತದ ಅಗ್ರ ಟೆನಿಸಿ ಸುಮಿತ್‌ ನಗಾಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಗ್ರ-56 ಸ್ಥಾನಗಳಲ್ಲಿರುವವರು ಒಲಿಂಪಿಕ್ಸ್‌ ಅರ್ಹತೆ ಪಡೆಯಲಿದ್ದಾರೆ. 

ಆದರೆ ಒಂದು ದೇಶದಿಂದ 4 ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ರ್‍ಯಾಂಕಿಂಗ್‌ನಲ್ಲಿ 56ರಿಂದ ಕೆಳಗಿರುವವರಿಗೂ ಒಲಿಂಪಿಕ್ಸ್‌ ಪ್ರವೇಶಿಸಲು ಅವಕಾಶವಿದೆ. ಸದ್ಯದ ಲೆಕ್ಕಾಚಾರ ಪ್ರಕಾರ ನಗಾಲ್‌ ಒಲಿಂಪಿಕ್ಸ್‌ ಪ್ರವೇಶಿಸಲಿದ್ದು, ಶೀಘ್ರದಲ್ಲೇ ಅಧಿಕೃತಗೊಳ್ಳುವ ನಿರೀಕ್ಷೆಯಿದೆ. ಕೊನೆ ಬಾರಿ ಭಾರತದ ಸೋಮ್‌ದೇವ್‌ ದೇವ್‌ವರ್ಮನ್‌ 2012ರಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿ vs ಸಿಎಸ್‌ಕೆ ಟಿಕೆಟ್‌ ಒಂದೇ ನಿಮಿಷದಲ್ಲಿ ಸೋಲ್ಡೌಟ್‌
ರಾಯಲ್ಸ್‌ ಆರ್ಭಟಕ್ಕೆ ತತ್ತರಿಸಿದ ಚೆನ್ನೈ ಕಿಂಗ್ಸ್‌