ಡೆಲ್ಲಿಗೆ ಇಂದು ಟೈಟಾನ್ಸ್‌ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ

KannadaprabhaNewsNetwork |  
Published : Apr 24, 2024, 02:33 AM IST
ರಾಹುಲ್‌ ತೆವಾಟಿಯಾ | Kannada Prabha

ಸಾರಾಂಶ

ಮೊದಲ ಮುಖಾಮುಖಿಯಲ್ಲಿ ಸೋತಿರುವ ಗುಜರಾತ್‌ಗೆ ಸೇಡಿನ ಕಾತರ. ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ.

ನವದೆಹಲಿ: ಸತತ ಸೋಲುಗಳೊಂದಿಗೆ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌, 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಗೆ ತಲುಪಿದ್ದು, ಬುಧವಾರ ನಿರ್ಣಾಯಕ ಕದನದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ಗುಜರಾತ್‌ ಕೂಡಾ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಗೆಲುವಿನ ಹಳಿಯಲ್ಲೇ ಉಳಿದುಕೊಳ್ಳುವ ಕಾತರದಲ್ಲಿದೆ.ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ತಂಡದ ತಾರಾ ಆಟಗಾರರು ಕೈಕೊಡುತ್ತಿದ್ದು, ವಾರ್ನರ್‌, ಪೃಥ್ವಿ ಶಾ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೈದ್ರಾಬಾದ್‌ ವಿರುದ್ಧ 18 ಎಸೆತದಲ್ಲಿ 65 ರನ್‌ ಸಿಡಿಸಿದ್ದ ಜೇಕ್‌ ಫ್ರೇಸರ್‌ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದಾರೆ. ರಿಷಭ್‌ ಕೂಡಾ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಿದ್ದು, ಬೌಲಿಂಗ್‌ ವಿಭಾಗ ಮೊನಚು ಕಂಡುಕೊಳ್ಳಬೇಕಿದೆ. 10 ವಿಕೆಟ್‌ ಕಿತ್ತಿರುವ ಕುಲ್ದೀಪ್‌ ಯಾದವ್‌ ಡೆಲ್ಲಿಯ ಶ್ರೇಷ್ಠ ಬೌಲರ್‌ ಎನಿಸಿಕೊಂಡಿದ್ದು, ಇತರರಿಂದ ಸೂಕ್ತ ಬೆಂಬಲ ಸಿಗಬೇಕಿದೆ.ಅತ್ತ ಡೆಲ್ಲಿ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಗುಜರಾತ್‌ ಈ ಬಾರಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ತಂಡ 8 ಪಂದ್ಯದಲ್ಲಿ ತಲಾ 4 ಗೆಲುವು, ಸೋಲು ಕಂಡಿದೆ. ತಂಡದ ಕಳೆದೆರಡು ಬಾರಿಯ ಪ್ರದರ್ಶನ ಈ ಸಲ ಕಣ್ಮರೆಯಾಗಿದ್ದು, ಅಸ್ಥಿರ ಆಟವಾಡುತ್ತಿದೆ. ಪ್ರಮುಖವಾಗಿ ರಶೀದ್‌ ಖಾನ್‌, ರಾಹುಲ್‌ ತೆವಾಟಿಯಾ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಒಟ್ಟು ಮುಖಾಮುಖಿ: 04

ಡೆಲ್ಲಿ: 02

ಗುಜರಾತ್‌: 02

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ವಾರ್ನರ್‌, ಫ್ರೇಸರ್‌, ಅಭಿಷೇಕ್‌, ರಿಷಭ್‌(ನಾಯಕ), ಸ್ಟಬ್ಸ್‌, ಅಕ್ಷರ್‌, ಕುಲ್ದೀಪ್‌, ಮುಕೇಶ್‌, ಇಶಾಂತ್‌, ಖಲೀಲ್‌.ಗುಜರಾತ್‌: ಗಿಲ್‌(ನಾಯಕ), ಸಾಹ, ಮಿಲ್ಲರ್‌, ಅಜ್ಮತುಲ್ಲಾ, ಶಾರುಖ್‌, ರಾಹುಲ್‌, ರಶೀದ್‌, ಕಿಶೋರ್‌, ನೂರ್‌, ಸಂದೀಪ್‌, ಮೋಹಿತ್‌.

ಪಂದ್ಯ: ಸಂಜೆ 7.30ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ ಸಮರಕ್ಕೆ ಸಿದ್ಧತೆ ಶುರು - ಬಹುತೇಕ ಎಲ್ಲಾ ತಂಡಗಳಿಂದಲೂ ಶಿಬಿರ ಆರಂಭ
ಅನುಮತಿ ಗೊಂದಲಗಳಿಗೆ ಬ್ರೇಕ್‌ : ಬೆಂಗಳೂರಿನಲ್ಲಿ ಐಪಿಎಲ್‌ ಖಚಿತ