ವಿಶಾಖಪಟ್ಟಣಂ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊರೆತಿದ್ದು ಅನಿರೀಕ್ಷಿತ ಗೆಲುವನ್ನು ಬದಲಿಗೆ ತನ್ನ ಯೋಜನಾಬದ್ಧ ಆಟಕ್ಕೆ ಸಿಕ್ಕ ಯಶಸ್ಸು ಎನ್ನುವುದನ್ನು ಸಾಬೀತುಪಡಿಸಲು ಡೆಲ್ಲಿ ಕ್ಯಾಪಿಟಲ್ಸ್ ಉತ್ಸುಕಗೊಂಡಿದ್ದು, ಬುಧವಾರ ಇಲ್ಲಿ ನಡೆಯಲಿರುವ ರೋಚಕ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಸವಾಲನ್ನು ಎದುರಿಸಲಿದೆ.
ಮತ್ತೊಂದೆಡೆ ಕೆಕೆಆರ್ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ.ಕಳೆದ ಭಾನುವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 20 ರನ್ ಗೆಲುವು ಸಾಧಿಸಿತ್ತು. ರಿಷಭ್ ಪಂತ್ ಪಡೆ ಎಲ್ಲಾ ಮೂರೂ ವಿಭಾಗಗಳಲ್ಲಿ ಉತ್ತಮ ಆಟ ಪ್ರದರ್ಶಿಸಿತ್ತು. ಪ್ರಮುಖವಾಗಿ ಪೃಥ್ವಿ ಶಾ ಹಾಗೂ ಪಂತ್ ಅಮೋಘ ಬ್ಯಾಟಿಂಗ್ ನಡೆಸಿದ್ದರು. ಖಲೀಲ್ ಅಹ್ಮದ್, ಮುಕೇಶ್ ಕುಮಾರ್‌ರ ಬೌಲಿಂಗ್ ದಾಳಿಗೆ ಚೆನ್ನೈ ತತ್ತರಿಸಿತ್ತು. ಡೆಲ್ಲಿ ಮತ್ತೊಮ್ಮೆ ಬಲಿಷ್ಠ ಪ್ರದರ್ಶನ ತೋರಲು ಎದುರು ನೋಡುತ್ತಿದೆ.
ಇನ್ನು ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಹೊಸಕಿ ಹಾಕಿದ್ದ ಕೆಕೆಆರ್, ತನ್ನ ಜಯದ ಓಟ ಮುಂದುವರಿಸಲು ಕಾಯುತ್ತಿದೆ.ತಂಡದಲ್ಲಿರುವ ಆಟಗಾರರ ಪೈಕಿ ಬಹುತೇಕರು ಉತ್ತಮ ಲಯದಲ್ಲಿದ್ದು, ಯಾವುದೇ ಹಂತದಿಂದ ಬೇಕಿದ್ದರೂ ತಂಡವನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿದ್ದಾರೆ.
ಮೇಲ್ನೋಟಕ್ಕೆ ಕೆಕೆಆರ್ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.ಒಟ್ಟು ಮುಖಾಮುಖಿ: 32ಕೆಕೆಆರ್: 16ಡೆಲ್ಲಿ: 15ಫಲಿತಾಂಶವಿಲ್ಲ: 01ಸಂಭವನೀಯ ಆಟಗಾರರ ಪಟ್ಟಿಕೆಕೆಆರ್: ಸಾಲ್ಟ್, ನರೈನ್, ವೆಂಕಟೇಶ್, ಶ್ರೇಯಸ್(ನಾಯಕ), ರಿಂಕು, ರಸೆಲ್, ರಮಣ್‌ದೀಪ್, ಸ್ಟಾರ್ಕ್, ಅನುಕೂಲ್, ಹರ್ಷಿತ್, ಅಂಗ್‌ಕೃಷ್, ವರುಣ್.ಡೆಲ್ಲಿ: ಪೃಥ್ವಿ, ವಾರ್ನರ್, ಪಂತ್(ನಾಯಕ), ಮಾರ್ಷ್, ಸ್ಟಬ್ಸ್, ಅಕ್ಷರ್, ಅಭಿಷೇಕ್ ಪೊರೆಲ್, ನೋಕಿಯ, ಮುಕೇಶ್, ಇಶಾಂತ್, ಖಲೀಲ್, ರಸಿಖ್.ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ; ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.