ಕೀನ್ಯಾ ಕ್ರಿಕೆಟ್‌ ತಂಡಕ್ಕೆ ಕರ್ನಾಟಕದ ಮುಂಚೂಣಿ ವೇಗಿ ದೊಡ್ಡ ಗಣೇಶ್‌ ಪ್ರಧಾನ ಕೋಚ್‌

KannadaprabhaNewsNetwork |  
Published : Aug 15, 2024, 01:58 AM ISTUpdated : Aug 15, 2024, 03:04 AM IST
ಕೀನ್ಯಾ ತಂಡದ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ದೊಡ್ಡ ಗಣೇಶ್‌. | Kannada Prabha

ಸಾರಾಂಶ

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡವೊಂದರ ಕೋಚ್‌ ಆಗಿ ನೇಮಕಗೊಂಡ ದೊಡ್ಡ ಗಣೇಶ್‌. ಹಲವು ವರ್ಷಗಳ ಕಾಲ ಕರ್ನಾಟಕದ ಮುಂಚೂಣಿ ವೇಗಿಯಾಗಿದ್ದ ಗಣೇಶ್‌.

ನೈರೋಬಿ: ಭಾರತದ ಮಾಜಿ ವೇಗಿ, ಕರ್ನಾಟಕದ ದೊಡ್ಡ ಗಣೇಶ್‌ ಕೀನ್ಯಾ ಕ್ರಿಕೆಟ್‌ ತಂಡದ ನೂತನ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ನ ಆಫ್ರಿಕಾ ಅರ್ಹತಾ ಟೂರ್ನಿಗೂ ಮುನ್ನ ಅವರು ತಂಡದೊಂದಿಗೆ ಕೆಲಸ ಆರಂಭಿಸಲಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್‌ ಅವರು ಅಂ.ರಾ. ತಂಡವೊಂದಕ್ಕೆ ಕೋಚ್‌ ಆಗಿದ್ದಾರೆ.

51 ವರ್ಷದ ಗಣೇಶ್‌ ಭಾರತ ಪರ 4 ಟೆಸ್ಟ್‌ ಹಾಗೂ 1 ಏಕದಿನ ಪಂದ್ಯವನ್ನಾಡಿದ್ದರು. ಆದರೆ, ಕರ್ನಾಟಕ ಪರ ಹಲವು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದ ಗಣೇಶ್‌, 365 ವಿಕೆಟ್‌ ಕಬಳಿಸಿದ್ದರು. 

ತಮ್ಮ ನೇಮಕದ ಬಗ್ಗೆ ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಗಣೇಶ್‌, ‘ಕೀನ್ಯಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಲು ಎಲ್ಲಾ ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?
ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!