ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ vs ಇಂಗ್ಲೆಂಡ್‌ ಹೈವೋಲ್ಟೆಜ್‌ ಪಂದ್ಯ ಇಂದು

KannadaprabhaNewsNetwork |  
Published : Jun 08, 2024, 12:30 AM ISTUpdated : Jun 08, 2024, 04:49 AM IST
ಆಸ್ಟ್ರೇಲಿಯಾ vs ಇಂಗ್ಲೆಂಡ್‌ | Kannada Prabha

ಸಾರಾಂಶ

ಮೊದಲ ಜಯಕ್ಕೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಕಾತರ. ಸ್ಕಾಟ್ಲೆಂಡ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್‌, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಪಡೆದಿತ್ತು.

ಬ್ರಿಡ್ಜ್‌ಟೌನ್‌(ಬಾರ್ಬಡೊಸ್): ಸಾಂಪ್ರದಾಯಿಕ ಬದ್ಧ ವೈರಿಗಳಾಗಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ನಡುವೆ ಟಿ20 ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಶನಿವಾರ ನಡೆಯಲಿದೆ.

‘ಬಿ’ ಗುಂಪಿನಲ್ಲಿರುವ ಇತ್ತಂಡಗಳು ಈಗಾಗಲೇ ಅಂಕಪಟ್ಟಿಯಲ್ಲಿ ಖಾತೆ ತೆರೆದಿವೆ. ಆಸೀಸ್‌ ತಂಡ ಆರಂಭಿಕ ಪಂದ್ಯದಲ್ಲಿ ಒಮಾನ್‌ ವಿರುದ್ಧ ರನ್‌ ಗೆಲುವು ಸಾಧಿಸಿತ್ತು. ಆದರೆ ಸ್ಕಾಟ್ಲೆಂಡ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್‌, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಪಡೆದಿತ್ತು.

ಆಸೀಸ್‌ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದು, ಈ ಪಂದ್ಯದಲ್ಲಿ ಇಂಗ್ಲೆಂಡ್‌ನಿಂದ ಕಠಿಣ ಸವಾಲು ಎದುರಾಗಬಹುದು. ವಾರ್ನರ್‌, ಸ್ಟೋಯ್ನಿಸ್‌, ಸ್ಟಾರ್ಕ್‌, ಝಂಪಾ ಉತ್ತಮ ಲಯದಲ್ಲಿದ್ದರೂ, ಮ್ಯಾಕ್ಸ್‌ವೆಲ್‌ರ ವೈಫಲ್ಯ ತಂಡವನ್ನು ಕಾಡುತ್ತಿದೆ. ಅತ್ತ ಇಂಗ್ಲೆಂಡ್‌ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿ ತೋರುತ್ತಿದ್ದು, ಬೌಲಿಂಗ್‌ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್‌, ಮಾರ್ಕ್‌ ವುಡ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಆಸ್ಟ್ರೇಲಿಯಾ-ಇಂಗ್ಲೆಂಡ್‌ ಪಂದ್ಯ: ರಾತ್ರಿ 10.30ಕ್ಕೆ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಕಿವೀಸ್‌ಗೆ ಆಫ್ಘನ್‌ ಸವಾಲು

ವಿಶ್ವಕಪ್ ಶುರುವಾಗಿ ವಾರ ಕಳೆದ ನಂತರ ಟೂರ್ನಿಯಲ್ಲಿ ಮೊದಲ ಪಂದ್ಯವಾಡಲು ಸಜ್ಜಾಗಿರುವ ನ್ಯೂಜಿಲೆಂಡ್‌ಗೆ ಶನಿವಾರ ಅಫ್ಘಾನಿಸ್ತಾನ ಸವಾಲು ಎದುರಾಗಲಿದೆ. ಟಿ20ಯ ಅಪಾಯಕಾರಿ ತಂಡ ಆಫ್ಘನ್‌ ವಿರುದ್ಧ ಗೆದ್ದು ಶುಭಾರಂಭ ಮಾಡಲು ಕಿವೀಸ್‌ ಕಾಯುತ್ತಿದೆ. ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಉಗಾಂಡವನ್ನು 125 ರನ್‌ಗಳಿಂದ ಮಣಿಸಿದ್ದ ಆಫ್ಘನ್‌, ಕಿವೀಸ್‌ಗೂ ಶಾಕ್‌ ನೀಡುವ ಕಾತರದಲ್ಲಿದೆ.

ಅಫ್ಘಾನಿಸ್ತಾನ-ನ್ಯೂಜಿಲೆಂಡ್‌ ಪಂದ್ಯ: ಬೆಳಗ್ಗೆ 5ಕ್ಕೆ

ನೆದರ್‌ಲೆಂಡ್ಸ್‌ vs ದ.ಆಫ್ರಿಕಾ

‘ಡಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಶನಿವಾರ ನೆದರ್‌ಲೆಂಡ್ಸ್‌ ಹಾಗೂ ದ.ಆಫ್ರಿಕಾ ಮುಖಾಮುಖಿಯಾಗಲಿವೆ. ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಆಫ್ರಿಕಾ, ಮತ್ತೊಂದು ಸುಲಭ ಜಯದ ನಿರೀಕ್ಷೆಯಲ್ಲಿದೆ. ಆದರೆ ಆರಂಭಿಕ ಪಂದ್ಯದಲ್ಲಿ ನೇಪಾಳಕ್ಕೆ ಸೋಲುಣಿಸಿದ್ದ ನೆದರ್‌ಲೆಂಡ್ಸ್‌ ಸತತ 2ನೇ ಜಯದ ಗುರಿ ಇಟ್ಟುಕೊಂಡಿದೆ.

ನೆದರ್‌ಲೆಂಡ್ಸ್‌-ದ.ಆಫ್ರಿಕಾ ಪಂದ್ಯ: ರಾತ್ರಿ 8ಕ್ಕೆಬಾಂಗ್ಲಾ vs ಲಂಕಾ ಸೆಣಸುಶನಿವಾರದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಮಾಜಿ ಚಾಂಪಿಯನ್‌ ಶ್ರೀಲಂಕಾ ಸೆಣಸಾಡಲಿವೆ. ಕೆಲ ವರ್ಷಗಳಿಂದ ಬದ್ಧವೈರಿಗಳಾಗಿ ಗುರುತಿಸಿಕೊಂಡಿರುವ ಇತ್ತಂಡಗಳ ನಡುವಿನ ಪಂದ್ಯ ಕುತೂಹಲ ಕೆರಳಿಸಿದ್ದು, ಮೊದಲ ಗೆಲುವಿಗಾಗಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ. ಬಾಂಗ್ಲಾಕ್ಕೆ ಟೂರ್ನಿಯಲ್ಲಿದು ಮೊದಲ ಪಂದ್ಯವಾಗಿದ್ದು, ಲಂಕಾಕ್ಕೆ 2ನೇ ಪಂದ್ಯ. ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಸೋತಿತ್ತು.

ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯ: ಬೆಳಗ್ಗೆ 6ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ ಮುನ್ನ ಭಾರತಕ್ಕೆ ಕೊನೆ ಚಾಲೆಂಜ್‌
ಭಾರತಕ್ಕೆ ಬರದಿದ್ದರೆ ವಿಶ್ವಕಪ್‌ನಿಂದ ಹೊರಕ್ಕೆ : ಬಾಂಗ್ಲಾಗೆ ಐಸಿಸಿ ಎಚ್ಚರಿಕೆ