ಜೈಪುರ: ಸ್ಪೋಟಕ ಬ್ಯಾಟರ್‌ಗಳು, ತಜ್ಞ ಸ್ಪಿನ್ನರ್‌ಗಳನ್ನೊಳಗೊಂಡ ರಾಜಸ್ಥಾನ ರಾಯಲ್ಸ್ ಈ ಬಾರಿ ಐಪಿಎಲ್‌ನಲ್ಲಿ ಶುಭಾಂಭದ ನಿರೀಕ್ಷೆಯಲ್ಲಿದ್ದು, ಆರಂಭಿಕ ಪಂದ್ಯದಲ್ಲಿ ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಗಾಯಗೊಂಡ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಲಖನೌ ನಾಯಕ ಕೆ.ಎಲ್.ರಾಹುಲ್ ಆಡಲು ಫಿಟ್ ಆಗಿದ್ದಾರೆ.
ಆದರೆ ವಿಕೆಟ್ ಕೀಪರ್ ಕಾರ್ಯ ನಿರ್ವಹಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಡಿ ಕಾಕ್ ಅಥವಾ ಪೂರನ್ ಜವಾಬ್ದಾರಿ ಹೊರಬೇಕಿದೆ. ದೇವದತ್ ಪಡಿಕ್ಕಲ್, ಆಯುಶ್ ಬದೋನಿ ಪ್ರಮುಖ ಆಕರ್ಷಣೆ.
ಮತ್ತೊಂದೆಡೆ ಅಭೂತಪೂರ್ವ ಲಯದಲ್ಲಿರುವ ಯಶಸ್ವಿ ಜೈಸ್ವಾಲ್, ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಬಟ್ಲರ್, ಹೆಟ್ಮೇಯರ್, ರೋವ್ಮನ್ ಪೋವೆಲ್ ರಾಜಸ್ಥಾನದ ಆಧಾರಸ್ತಂಭ.
ನಾಯಕ ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್ ಕೂಡಾ ಅಬ್ಬರಿಸಬಲ್ಲರು. ಇನ್ನು ಅನುಭವಿ ಸ್ಪಿನ್ನರ್‌ಗಳಾದ ಅಶ್ವಿನ್, ಚಹಲ್ ತಂಡದ ಟ್ರಂಪ್‌ಕಾರ್ಡ್. ವೇಗಿಗಳಾದ ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಆವೇಶ್ ಖಾನ್ ಮೇಲೂ ಭಾರೀ ನಿರೀಕ್ಷೆಯಿದೆ.
ಒಟ್ಟು ಮುಖಾಮುಖಿ: 03
ರಾಜಸ್ಥಾನ: 01
ಲಖನೌ: 02ಸಂಭವನೀಯ ಆಟಗಾರರ ಪಟ್ಟಿ
ರಾಜಸ್ಥಾನ: ಬಟ್ಲರ್, ಜೈಸ್ವಾಲ್, ಸ್ಯಾಮ್ಸನ್(ನಾಯಕ), ಪರಾಗ್, ಹೆಟ್ಮೇಯರ್, ಪೋವೆಲ್, ಅಶ್ವಿನ್, ಚಹಲ್, ಬೌಲ್ಟ್, ಸಂದೀಪ್, ಆವೇಶ್.
ಲಖನೌ: ಡಿ ಕಾಕ್, ರಾಹುಲ್(ನಾಯಕ), ದೇವದತ್, ಸ್ಟೋಯ್ನಿಸ್, ಪೂರನ್, ಕೃನಾಲ್, ಬದೋನಿ, ಶಿವಂ, ನವೀನ್, ಬಿಷ್ಣೋಯ್, ಮೊಹ್ಸಿನ್.ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ