ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದತ್ತಾ ಗಾಯಕ್ವಾಡ್‌ ನಿಧನ

KannadaprabhaNewsNetwork |  
Published : Feb 14, 2024, 02:19 AM IST
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದತ್ತಾ ಗಾಯಕ್ವಾಡ್‌ ನಿಧನ | Kannada Prabha

ಸಾರಾಂಶ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದತ್ತಾಜೀರಾವ್‌ ಗಾಯಕ್ವಾಡ್‌ (95) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತಿದ್ದ ಅವರನ್ನು ಬರೋಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದತ್ತಾಜೀರಾವ್‌ ಗಾಯಕ್ವಾಡ್‌ (95) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತಿದ್ದ ಅವರನ್ನು ಬರೋಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 12 ದಿನಗಳಿಂದ ಐಸಿಯುನಲ್ಲಿದ್ದ ಅವರು ಮಂಗಳವಾರ ಕೊನೆಯುಸಿರೆಳೆದರು. 2016ರಲ್ಲಿ 87ನೇ ವಯಸ್ಸಿನಲ್ಲಿ ನಿಧನರಾದ ದೀಪಕ್‌ ಶೋಧನ್‌ ನಂತರ ದತ್ತಾ ಭಾರತದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿದ್ದರು. 1952-61ರ ಅವಧಿಯಲ್ಲಿ ದತ್ತಾಜೀರಾವ್‌ 11 ಟೆಸ್ಟ್‌ ಪಂದ್ಯಗಳನ್ನಾಡಿದ್ದರು. ಭಾರತದ ಮಾಜಿ ನಾಯಕ, ಕೋಚ್‌ ಅಂಶುಮನ್‌ ಗಾಯಕ್ವಾಡ್‌ ಇವರ ಪುತ್ರ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಡೆಲ್ಲಿ ಚಾಲೆಂಜ್‌ ಗೆಲ್ಲುತ್ತಾ ಆರ್‌ಸಿಬಿ?
ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು