ನವದೆಹಲಿ: ಗಾಯದಿಂದಾಗಿ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿರುವ ವೇಗಿ ಮೊಹಮದ್ ಶಮಿ ಬದಲು ಗುಜರಾತ್ ಟೈಟಾನ್ಸ್ ತಂಡಕ್ಕೆ ಸಂದೀಪ್ ವಾರಿಯರ್ ಸೇರ್ಪಡೆಗೊಂಡಿದ್ದಾರೆ. ಸಂದೀಪ್ ಐಪಿಎಲ್‌ನಲ್ಲಿ 5 ಪಂದ್ಯಗಳನ್ನಾಡಿದ್ದು, ಮೂಲ ಬೆಲೆ ₹50 ಲಕ್ಷಕ್ಕೆ ಗುಜರಾತ್ ತಂಡ ಸೇರಿಕೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ನ ವೇಗಿ ದಿಲ್ಶಾನ್ ಮಧುಶಂಕ ಐಪಿಎಲ್‌ನಿಂದ ಹೊರಬಿದ್ದಿದ್ದು, ಅವರ ಬದಲು ದ.ಆಫ್ರಿಕಾದ ಯುವ ವೇಗಿ ಕ್ವೆನಾ ಮಫಾಕ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಫಾಕ ಇತ್ತೀಚೆಗೆ ಅಂಡರ್-19 ವಿಶ್ವಕಪ್‌ನಲ್ಲಿ ಟೂರ್ನಿಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.16 ತಿಂಗಳ ಬಳಿಕ ರಾಷ್ಟ್ರೀಯ ಶಿಬಿರಕ್ಕೆ ಡಬ್ಲ್ಯುಎಫ್‌ಐ ಸಜ್ಜು
ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯು ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ ಬಳಿಕ ಭಾರತೀಯ ಕುಸ್ತಿ ಒಕ್ಕೂಟದ ಅಧಿಕಾರವನ್ನು ಮರಳಿ ಪಡೆದಿರುವ ಸಂಜಯ್ ಸಿಂಗ್ ನೇತೃತ್ವದ ಹೊಸ ಸಮಿತಿಯು ಮಾ.27ರಿಂದ ರಾಷ್ಟ್ರೀಯ ಶಿಬಿರ ಆಯೋಜಿಸಲಿದೆ.ಇದು ಕಳೆದ 16 ತಿಂಗಳಲ್ಲೇ ಡಬ್ಲ್ಯುಎಫ್‌ಐ ನಡೆಸುತ್ತಿರುವ ಮೊದಲ ರಾಷ್ಟ್ರೀಯ ಶಿಬಿರ. 2023ರ ಜನವರಿಯಲ್ಲಿ ಡಬ್ಲ್ಯುಎಫ್‌ಐನ ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಅತ್ಯಾಚಾರ, ಬೆದರಿಕೆ ಆರೋಪ ಹೊರಿಸಿ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದರು.ಆ ಬಳಿಕ ಡಬ್ಲ್ಯುಎಫ್‌ಐ ಯಾವುದೇ ಶಿಬಿರ ಆಯೋಜಿಸಿಲ್ಲ. ಈ ನಡುವೆ ಡಬ್ಲ್ಯುಎಫ್‌ಐ ಅನ್ನು ನಿಯಂತ್ರಿಸುತ್ತಿದ್ದ ಸ್ವತಂತ್ರ ಸಮಿತಿಯು ಇತ್ತೀಚೆಗೆ ರಾಷ್ಟ್ರೀಯ ಶಿಬಿರ ಆಯೋಜಿಸಿತ್ತು.ಸ್ವಿಸ್ ಓಪನ್: ಶ್ರೀಕಾಂತ್, ಸಿಂಧು, ಸೇನ್ ಶುಭಾರಂಭಬಾಸೆಲ್(ಸ್ವಿಜರ್‌ಲೆಂಡ್): ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್‌ನ ಚೋಕಿವೊಂಗ್ ವಿರುದ್ಧ 21-12, 21-13ರಲ್ಲಿ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸೇನ್ ಮಲೇಷ್ಯಾದ ಲಿಯಾಂಗ್ ಜುನ್ ಹೊ ವಿರುದ್ಧ 21-19, 15-21, 21-11 ಗೇಮ್‌ಗಳಲ್ಲಿ ಜಯಗಳಿಸಿದರೆ, ಶ್ರೀಕಾಂತ್ ಅವರು ಚೈನೀಸ್ ತೈಪೆಯ ವ್ಯಾಂಗ್ ತ್ಸು ವೀ ಎದುರು 21-17, 21-18ರಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಗೇರಿದರು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ, ಪ್ರಿಯಾ-ಶೃತಿ ಮಿಶ್ರಾ ಕೂಡಾ ಗೆಲುವು ಸಾಧಿಸಿದರು.ಫಿಫಾ ಅರ್ಹತಾ ಫುಟ್ಬಾಲ್: ಇಂದು ಭಾರತ vs ಆಫ್ಘನ್ಅಭಾ(ಸೌದಿ ಅರೇಬಿಯಾ): ಮೊದಲ ಬಾರಿ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿರುವ ಭಾರತ ತಂಡ ಗುರುವಾರ ಅಫ್ಘಾನಿಸ್ತಾನ ಸವಾಲು ಎದುರಿಸಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 117ನೇ ಸ್ಥಾನದಲ್ಲಿರುವ ಭಾರತ ‘ಎ’ ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 3 ಅಂಕ ಸಂಪಾದಿಸಿದ್ದು, 3ನೇ ಸ್ಥಾನದಲ್ಲಿದೆ. ಹಾಲಿ ಏಷ್ಯಾ ಚಾಂಪಿಯನ್ ಕತಾರ್ 6 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕುವೈತ್ 2ನೇ, ಇನ್ನಷ್ಟೇ ಖಾತೆ ತೆರೆಯಬೇಕಿರುವ ಅಫ್ಘಾನಿಸ್ತಾನ 4ನೇ ಸ್ಥಾನದಲ್ಲಿದೆ.ಭಾರತ ಟೂರ್ನಿಯಲ್ಲಿ ಕುವೈತ್ ವಿರುದ್ಧ ಗೆದ್ದಿದ್ದರೆ, ಕತಾರ್ ವಿರುದ್ಧ ಸೋತಿತ್ತು. 158ನೇ ಸ್ಥಾನದಲ್ಲಿರುವ ಆಫ್ಘನ್ ವಿರುದ್ಧ ಗೆಲ್ಲುವ ಮೂಲಕ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿದೆ.