ಕೊಲಂಬೊದಲ್ಲಿ 4 ದಿನಗಳ ಐಸಿಸಿ ವಾರ್ಷಿಕ ಸಭೆ ನಿಗದಿ : ಹೊಸ ಮುಖ್ಯಸ್ಥ ಆಗ್ತಾರಾ ಜಯ್‌ ಶಾ?

KannadaprabhaNewsNetwork |  
Published : Jul 18, 2024, 01:31 AM ISTUpdated : Jul 18, 2024, 04:25 AM IST
ಜಯ್‌ ಶಾ | Kannada Prabha

ಸಾರಾಂಶ

ಕೊಲಂಬೊದಲ್ಲಿ 4 ದಿನಗಳ ಐಸಿಸಿ ವಾರ್ಷಿಕ ಸಭೆ ನಿಗದಿ. ಸಭೆಯಲ್ಲಿ ನೂತನ ಮುಖ್ಯಸ್ಥರ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ. ಸಭೆಯಲ್ಲಿ ಜಯ್‌ ಶಾ ಕೂಡಾ ಪಾಲ್ಗೊಳ್ಳಲಿದ್ದಾರೆ.

ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್‌ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ನ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಶುಕ್ರವಾರದಿಂದ ಕೊಲಂಬೊದಲ್ಲಿ 4 ದಿನಗಳ ಐಸಿಸಿ ವಾರ್ಷಿಕ ಮಹಾಸಭೆ ಆರಂಭಗೊಳ್ಳಲಿದ್ದು, ಸಭೆಯಲ್ಲಿ ನೂತನ ಮುಖ್ಯಸ್ಥರ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. 

ಸಭೆಯಲ್ಲಿ ಜಯ್‌ ಶಾ ಕೂಡಾ ಪಾಲ್ಗೊಳ್ಳಲಿದ್ದಾರೆ.ಸದ್ಯ ನ್ಯೂಜಿಲೆಂಡ್‌ನ ಗ್ರೆಕ್‌ ಬಾರ್ಕ್ಲೆ ಐಸಿಸಿ ಮುಖ್ಯಸ್ಥರಾಗಿದ್ದಾರೆ. ಅವರ ಅವಧಿ ಈ ವರ್ಷದ ಕೊನೆವರೆಗೆ ಇದೆ. ಅವರು 3ನೇ ಅವಧಿಗೆ ಅಂದರೆ 2024 ಡಿಸೆಂಬರ್‌ನಿಂದ 2026ರ ಡಿಸೆಂಬರ್‌ ವರೆಗೆ ಅಧಿಕಾರ ವಹಿಸುವ ಅವಕಾಶವಿದೆ.

 ಅತ್ತ ಜಯ್‌ ಶಾ ಅವರ ಬಿಸಿಸಿಐ ಕಾರ್ಯದರ್ಶಿ ಅವಧಿ 2025ರ ವರೆಗೂ ಇದೆ.ಒಂದು ವೇಳೆ ಶಾ ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೊರೆದು ಮುಂದಿನ ವರ್ಷ ಐಸಿಸಿ ಮುಖಸ್ಥನಾಗಲು ಬಯಸಿದರೆ, ಬಾರ್ಕ್ಲೆ 3ನೇ ಅವಧಿ ಪೂರ್ತಿಗೊಳಿಸುವ ಸಾಧ್ಯತೆ ಕಡಿಮೆ. ಬದಲಾಗಿ 2025ರಲ್ಲಿ ಜಯ್‌ ಶಾಗೆ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿದೆ. ಈ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಸಭೆಯಲ್ಲಿ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಟಿ20 ವಿಶ್ವಕಪ್‌ನ ಅಮೆರಿಕ ಚರಣದ ವೇಳೆ ಐಸಿಸಿಗೆ ಉಂಟಾದ ನಷ್ಟದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಸೆಮಿಫೈನಲ್‌ ಕದನಕ್ಕೆ ಅಖಾಡ ಸಿದ್ಧ - ಸೆಮಿಫೈನಲ್‌ಗಿದೆ ಮೀಸಲು ದಿನ
ಕ್ರೀಡಾಲೋಕದ ಮೇಲೆ ಯುದ್ಧದ ಕಾರ್ಮೋಡ