ಬಾಂಗ್ಲಾ ಟೆಸ್ಟ್‌ ಸರಣಿ : 3 ಮಹತ್ವದ ಮೈಲಿಗಲ್ಲುಗಳ ಹೊಸ್ತಿಲಲ್ಲಿ ವಿರಾಟ್‌ ಕೊಹ್ಲಿ

KannadaprabhaNewsNetwork |  
Published : Sep 19, 2024, 01:50 AM ISTUpdated : Sep 19, 2024, 04:40 AM IST
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ವಿರಾಟ್‌ ಕೊಹ್ಲಿಯಿಂದ ಶತಕ ನಿರೀಕ್ಷೆ ಮಾಡುತ್ತಿರುವ ಅಭಿಮಾನಿಗಳು. | Kannada Prabha

ಸಾರಾಂಶ

2024ರಲ್ಲಿ ಮೊದಲ ಟೆಸ್ಟ್‌ ಸರಣಿಗೆ ಸಜ್ಜಾಗಿರುವ ವಿರಾಟ್‌ ಕೊಹ್ಲಿ, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮೂರು ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ನಿರೀಕ್ಷೆಯಲ್ಲಿದ್ದಾರೆ.  

ಚೆನ್ನೈ: ಭಾರತದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, 2024ರಲ್ಲಿ ಮೊದಲ ಟೆಸ್ಟ್‌ ಆಡಲು ಕಾತರಿಸುತ್ತಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ, ಇಂಗ್ಲೆಂಡ್‌ ವಿರುದ್ಧ ವರ್ಷದ ಆರಂಭದಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಕೊಹ್ಲಿ ಗೈರಾಗಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ವಿರಾಟ್‌ಗೆ ಮೂರು ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಅವಕಾಶವಿದ್ದು, ಅಭಿಮಾನಿಗಳಿಂದ ಅವರ ಬ್ಯಾಟ್‌ನಿಂದ ಶತಕವನ್ನು ನಿರೀಕ್ಷೆ ಮಾಡುತ್ತಿದ್ದಾರೆ. 1. ಬ್ರಾಡ್ಮನ್‌ರನ್ನು ಹಿಂದಿಕ್ಕಲು

ಬೇಕು ಒಂದೇ ಒಂದು ಶತಕ!

ಕ್ರಿಕೆಟ್‌ನ ದಂಥಕತೆ ಸರ್‌.ಡಾನ್‌ ಬ್ರಾಡ್ಮನ್‌, ಟೆಸ್ಟ್‌ನಲ್ಲಿ 29 ಶತಕಗಳನ್ನು ಬಾರಿಸಿದ್ದರು. ಕೊಹ್ಲಿ ಸಹ 29 ಟೆಸ್ಟ್‌ ಶತಕ ಗಳಿಸಿದ್ದು, ಇನ್ನೊಂದು ಶತಕ ಬಾರಿಸಿದರೆ ಬ್ರಾಡ್ಮನ್‌ರನ್ನು ಹಿಂದಿಕ್ಕಲಿದ್ದಾರೆ. 2. ಟೆಸ್ಟ್‌ನಲ್ಲಿ 9000 ರನ್‌

ಪೂರೈಸಲು 152 ರನ್‌ ಅಗತ್ಯ

ಭಾರತದ ಮಾಜಿ ನಾಯಕ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 9000 ರನ್‌ ಪೂರೈಸುವ ಹೊಸ್ತಿಲಲ್ಲಿದ್ದಾರೆ. ಈ ಮೈಲಿಗಲ್ಲು ತಲುಪಲು ಅವರಿಗೆ 152 ರನ್‌ ಬೇಕಿದೆ. ಸದ್ಯ ವಿರಾಟ್‌ 113 ಟೆಸ್ಟ್‌ಗಳಲ್ಲಿ 8848 ರನ್‌ ಕಲೆಹಾಕಿದ್ದಾರೆ. ಸಚಿನ್‌, ದ್ರಾವಿಡ್‌, ಗವಾಸ್ಕರ್‌ ಬಳಿಕ ಈ ಸಾಧನೆಗೈದ ಭಾರತೀಯ ಎನಿಸಲಿದ್ದಾರೆ. 3. ಅಂ.ರಾ. ಕ್ರಿಕೆಟ್‌ನಲ್ಲಿ 27000

ರನ್‌ ತಲುಪಲು ಬೇಕು 58 ರನ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ರನ್‌ ಪೂರೈಸಲು ವಿರಾಟ್‌ ಕೊಹ್ಲಿಗೆ ಕೇವಲ 58 ರನ್‌ ಬೇಕಿದೆ. ಅತಿವೇಗವಾಗಿ ಈ ಮೈಲಿಗಲ್ಲು ತಲುಪಿದ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ. ಸದ್ಯ ಆ ದಾಖಲೆ ಸಚಿನ್‌ ತೆಂಡುಲ್ಕರ್‌ ಹೆಸರಿನಲ್ಲಿದೆ. ಮಾಸ್ಟರ್‌ ಬ್ಲಾಸ್ಟರ್‌ 27000 ರನ್‌ ಪೂರೈಸಲು 623 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಕೊಹ್ಲಿ ಸದ್ಯ 591 ಇನ್ನಿಂಗ್ಸಲ್ಲಿ 26942 ರನ್‌ ಗಳಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!
ಹರಿಣ ಪಡೆಗೆ ಶರಣಾದ ಟೀಂ ಇಂಡಿಯಾ