ಒಂದೇ ದಿನ 7 ಪದಕ ಬಾಚಿಕೊಂಡ ಭಾರತ

Published : Sep 28, 2026, 11:52 AM IST
asian games 2026

ಸಾರಾಂಶ

2026ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪದಕಗಳು ಸಿಗದಿದ್ದರೂ, ದೇಶ ಪದಕ ಬರವನ್ನು ಎದುರಿಸುತ್ತಿಲ್ಲ. ಭಾನುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ 5, ಸ್ಕ್ವ್ಯಾಶ್‌ನಲ್ಲಿ 2 ಪದಕ ಜಯಿಸಿತು. 4 ಚಿನ್ನ, 16 ಬೆಳ್ಳಿ, 17 ಕಂಚಿನೊಂದಿಗೆ ಒಟ್ಟು 37 ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.

ನಗೋಯಾ: 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪದಕಗಳು ಸಿಗದಿದ್ದರೂ, ದೇಶ ಪದಕ ಬರವನ್ನು ಎದುರಿಸುತ್ತಿಲ್ಲ. ಭಾನುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ 5, ಸ್ಕ್ವ್ಯಾಶ್‌ನಲ್ಲಿ 2 ಪದಕ ಜಯಿಸಿತು. 4 ಚಿನ್ನ, 16 ಬೆಳ್ಳಿ, 17 ಕಂಚಿನೊಂದಿಗೆ ಒಟ್ಟು 37 ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.

ಸ್ಕ್ವ್ಯಾಶ್‌ ಸಿಂಗಲ್ಸ್‌ ವಿಭಾಗದಲ್ಲಿ ಭಾರತೀಯರಿಬ್ಬರಿಗೂ ಸೋಲು

ಕೂಟದ 8ನೇ ದಿನದ ಆರಂಭದಲ್ಲಿ ಸ್ಕ್ವ್ಯಾಶ್‌ ಸಿಂಗಲ್ಸ್‌ ವಿಭಾಗದಲ್ಲಿ ಭಾರತೀಯರಿಬ್ಬರಿಗೂ ಸೋಲು ಎದುರಾಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಅನಾಹತ್‌ ಸಿಂಗ್‌, ಪುರುಷರ ಸಿಂಗಲ್ಸ್‌ನಲ್ಲಿ ಅಭಯ್‌ ಸಿಂಗ್‌ ಬೆಳ್ಳಿಗೆ ತೃಪ್ತಿಪಟ್ಟರು. ಸಂಜೆ ಅಥ್ಲೀಟ್‌ಗಳು ಪದಕ ಬೇಟೆಯಾಡಿದರು. ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಆ್ಯನ್ಸಿ ಸೋಜನ್‌, ಪುರುಷರ ಹೈಜಂಪ್‌ನಲ್ಲಿ ಸರ್ವೇಶ್‌ ಕುಶಾರೆ ಬೆಳ್ಳಿ ಜಯಿಸಿದರೆ, ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ, ಮಹಿಳೆಯರ 200 ಮೀ. ಓಟದಲ್ಲಿ ಹರಿತಾ ಭದ್ರಾ, ಪುರುಷರ ಡೆಕಾಥ್ಲಾನ್‌ನಲ್ಲಿ ತೇಜಸ್ವಿನ್‌ ಶಂಕರ್‌ ಕಂಚು ಪಡೆದರು.

ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಭಾರೀ ನಿರಾಸೆ

ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಭಾರೀ ನಿರಾಸೆ ಎದುರಾಯಿತು. ಆರ್ಚರಿಯಲ್ಲಿ ಭಾರತ ಸೆಮೀಸ್‌ಗೇರಿದರೆ, 3 ಬಾಕ್ಸರ್‌ಗಳು ಉಪಾಂತ್ಯ ತಲುಪಿ ಪದಕ ಖಚಿತಪಡಿಸಿಕೊಂಡರು. ಮಹಿಳಾ ಹಾಕಿ ತಂಡ ಸತತ 4ನೇ ಜಯ ದಾಖಲಿಸಿ, ಲಯ ಮುಂದುವರಿಸಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಬೆಂಗಳೂರಿನ ವಿಪ್ರೋ ಮ್ಯಾರಥಾನ್‌ : ಬುಗಾಥಾ ಶ್ರೀನು, ಭಾಗೀರಥಿ ಚಾಂಪಿಯನ್‌
ಕನ್ನಡಿಗರ ಸಾರಥ್ಯದಲ್ಲಿ ಭಾರತಕ್ಕೆ ಕಬಡ್ಡಿ ಡಬಲ್‌ ಚಿನ್ನ!