ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ರನ್ನರ್‌ ಅಪ್‌

KannadaprabhaNewsNetwork | Published : Jan 22, 2024 2:15 AM

ಸಾರಾಂಶ

ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಕೊರಿಯಾ ಕಾಂಗ್‌ ಮಿನ್‌ ಹ್ಯೂಕ್‌- ಸ್ಯೂ ಸಂಗ್‌ ಜೋಡಿಗೆ ಶರಣಾಯಿತು.

ನವದೆಹಲಿ: ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಸೋಲನುಭವಿಸಿದೆ. ದಕ್ಷಿಣ ಕೊರಿಯಾ ಕಾಂಗ್‌ ಮಿನ್‌ ಹ್ಯೂಕ್‌- ಸಾಂಗ್‌ ಜಾ ವಿರುದ್ಧ 21-15, 11-21, 18-21ರಿಂದ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡರು.

ಭಾನುವಾರ ಕೆ.ಡಿ.ಜಾದವ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಎದುರಾಳಿ ಜೋಡಿಗೆ ಪ್ರಬಲ ಪೈಪೋಟಿಯೊಡ್ಡಿದ ಸಾತ್ವಿಕ್‌-ಚಿರಾಗ್‌ ಮೊದಲ ಗೆದ್ದು 21-15ರಿಂದ ಗೆದ್ದು ಮುನ್ನಡೆ ಸಾಧಿಸಿದರು. 2ನೇ ಗೇಮ್‌ನ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಭಾರತೀಯ ಜೋಡಿ ಉತ್ತಮ ಆಟದ ಹೊರತಾಗಿಯೂ ಮುನ್ನಡೆ ಸಾಧಿಸಿಲು ಸಾಧ್ಯವಾಗಲಿಲ್ಲ. ಕೊರಿಯನ್‌ ಜೋಡಿಯ ವಿರುದ್ಧ ಅದ್ಬುತ ಪ್ರದರ್ಶನದೊಂದಿಗೆ 21-11ರ ಅಂತರದಿಂದ ಸಮಬಲ ಸಾಧಿಸಿದರು. ಮೂರನೇ ಗೇಮ್‌ನಲ್ಲೂ ಪಾರಮ್ಯ ಮೆರೆದ ಕಾಂಗ್‌-ಜಾ ಜೋಡಿ 21-18ರಿಂದ ಗೆದ್ದು, ಪ್ರಶಸ್ತಿ ಮುಡಿಗೇರಿ ಸಿಕೊಂಡರು.

ವರ್ಷದ 2ನೇ ರನ್ನರ ಅಪ್‌ :

ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮಲೇಷ್ಯಾ ಓಪನ್‌ನ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ಲಿಯಾಂಗ್‌ ಕೆಂಗ್‌- ವಾಂಗ್‌ ಚಾಂಗ್‌ ವಿರುದ್ಧ ಸೋಲನುಭವಿಸಿತ್ತು. ಸೆಮೀಸ್‌ನಲ್ಲಿ ದಕ್ಷಿಣ ಕೊರಿಯಾ ಕಾಂಗ್‌ ಮಿನ್‌ ಹ್ಯೂಕ್‌- ಸ್ಯೂ ಸಂಗ್‌ ಜಾ ಜೋಡಿಯನ್ನು ಸೋಲಿಸಿ ಫೈನಲ್‌ಗೇರಿತ್ತು.

ತೈ ತ್ಸು ಯಿಂಗ್‌ಗೆ ಚೊಚ್ಚಲ ಕಿರೀಟ:

ಚೈನೀಸ್‌ ತೈಪೆನ ತೈ ತ್ಸು ಯಿಂಗ್‌ ಅವರು ಚೀನಾದ ಚೆನ್‌ ಯು ಫೀ ಅವರನ್ನು 21-16 21-12ರಿಂದ ಸೋಲಿಸುವ ಮೂಲಕ ಮೊದಲ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು.

ಶಿ ಯು ಕಿಗೆ ಪುರುಷರ ಸಿಂಗಲ್ಸ್‌ ಪ್ರಶಸ್ತಿ:

ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಚೀನಾದ ಶಿ ಯು ಕಿ, ಹಾಂಗ್‌ಕಾಂಗ್‌ ಲಿ ಚ್ಯುಕ್‌ ಯಿ 23-21 21-17ರಲ್ಲಿ ಸೋಲಿಸಿ ತಮ್ಮದಾಗಿಸಿಕೊಂಡರು.

Share this article