ಹಾಂಕಾಂಗ್‌ ಸಿಕ್ಸಸ್‌ : ಪಾಕ್‌ ವಿರುದ್ಧ ಭಾರತಕ್ಕೆ ಸೋಲು - 5 ಓವರ್‌ನಲ್ಲೇ ಗುರಿ ತಲುಪಿದ ಪಾಕಿಸ್ತಾನ

KannadaprabhaNewsNetwork |  
Published : Nov 02, 2024, 01:35 AM ISTUpdated : Nov 02, 2024, 04:26 AM IST
ಹಾಂಕಾಂಗ್‌ ಸಿಕ್ಸಸ್‌ ಪಂದ್ಯದಲ್ಲಿ ಭಾರತ ವಿರುದ್ಧ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ ತಂಡ.  | Kannada Prabha

ಸಾರಾಂಶ

ಭಾರತ 6 ಓವರಲ್ಲಿ 119ಕ್ಕೆ 2, ಕೇವಲ 5 ಓವರ್‌ನಲ್ಲೇ ಗುರಿ ತಲುಪಿದ ಪಾಕಿಸ್ತಾನ. ವಿಕೆಟ್‌ ನಷ್ಟವಿಲ್ಲದೆ 121 ರನ್‌. ಇಂದು ಯುಎಇ ವಿರುದ್ಧ ಪಂದ್ಯ. ಭಾರತಕ್ಕೆ ಕ್ವಾರ್ಟರ್‌ ಫೈನಲ್‌ಗೇರುವ ಗುರಿ.

ಹಾಂಕಾಂಗ್‌: ಹಾಂಕಾಂಗ್‌ ಅಂ.ರಾ. ಸಿಕ್ಸಸ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದೆ. ಪ್ರತಿ ತಂಡದಲ್ಲಿ ತಲಾ 6 ಆಟಗಾರರು ಇರಲಿದ್ದು, ಪಂದ್ಯವು ತಲಾ 6 ಓವರ್‌ಗಳನ್ನು ಒಳಗೊಂಡಿರಲಿದೆ. 

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 6 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 119 ರನ್‌ ಸಿಡಿಸಿತು. ಕರ್ನಾಟಕದ ರಾಬಿನ್‌ ಉತ್ತಪ್ಪ ತಂಡದ ನಾಯಕರಾಗಿದ್ದು, ಅವರು 8 ಎಸೆತದಲ್ಲಿ 31 ರನ್‌ ಚಚ್ಚಿದ್ದರು. ರಾಜ್ಯದ ಮತ್ತೊಬ್ಬ ಆಟಗಾರ ಭರತ್‌ ಚಿಪ್ಲಿ 16 ಎಸೆತದಲ್ಲಿ 53 ರನ್‌ ಬಾರಿಸಿದರು. ಭಾರತದ ಇನ್ನಿಂಗ್ಸಲ್ಲಿ 8 ಸಿಕ್ಸರ್‌ಗಳಿದ್ದವು.

ಪಾಕಿಸ್ತಾನ ವಿಕೆಟ್‌ ನಷ್ಟವಿಲ್ಲದೆ 5 ಓವರಲ್ಲೇ 121 ರನ್‌ ಗಳಿಸಿ ಗುರಿ ತಲುಪಿತು. ಅಸಿಫ್‌ ಅಲಿ 14 ಎಸೆತದಲ್ಲಿ 55 ರನ್‌ ಗಳಿಸಿ ರಿಟೈರ್ಡ್‌ ಹರ್ಟ್‌ ಆಗಿ ಹೊರನಡೆದರು. ಮುಹಮ್ಮದ್‌ ಅಖ್ಲಾಕ್‌ 12 ಎಸೆತದಲ್ಲಿ 40 ರನ್‌ ಸಿಡಿಸಿದರೆ, ನಾಯಕ ಫಹೀಂ ಅಶ್ರಫ್‌ 5 ಎಸೆತದಲ್ಲಿ 22 ರನ್‌ ಬಾರಿಸಿದರು. ಪಾಕ್‌ ಇನ್ನಿಂಗ್ಸಲ್ಲಿ 14 ಸಿಕ್ಸರ್‌ಗಳಿದ್ದವು. ಶನಿವಾರ ಭಾರತ ತನ್ನ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿವೆ. ಶನಿವಾರವೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಭಾನುವಾರ ಸೆಮಿಫೈನಲ್‌, ಫೈನಲ್‌ ಪಂದ್ಯ ನಿಗದಿಯಾಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

‘ಭಾರತದ ಮುಕುಟ’ಕ್ಕೆ ಚೊಚ್ಚಲ ರಣಜಿ ಕಿರೀಟ
ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು: ಹೈಕೋರ್ಟ್‌