ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮತ್ತೆ 1 ಚಿನ್ನ, 2 ಬೆಳ್ಳಿ

Published : Jul 31, 2026, 07:04 AM IST
Commonwealth Games 2026

ಸಾರಾಂಶ

ಗ್ಲಾಸ್ಗೋ ಕ್ರೀಡಾಕೂಟ: ಪ್ಯಾರಾ 100 ಮೀ.ರೇಸ್‌ನಲ್ಲಿ ದಿಲೀಪ್‌ಗೆ ಐತಿಹಾಸಿಕ ಚಿನ್ನ, ಮೊಹಮ್ಮದ್‌ ಬಾಸಿಲ್‌ಗೆ ಬೆಳ್ಳಿ । ಪ್ಯಾರಾ ವಿಭಾಗದಲ್ಲಿದು 2ನೇ ಚಿನ್ನಪುರುಷರ ಲಾಂಗ್‌ಜಂಪ್‌ನಲ್ಲಿ ಸತತ 2ನೇ ಬೆಳ್ಳಿ ಗೆದ್ದ ಶ್ರೀಶಂಕರ್‌ । ಕನ್ನಡಿಗ ಲೋಕೇಶ್‌ ಕೈತಪ್ಪಿದ ಪದಕ

ಗ್ಲಾಸ್ಗೋ: ಕಾಮನ್‌ವೆಲ್ತ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತಷ್ಟು ಪದಕ ಸಾಧನೆ ಮಾಡಿದೆ. ಪ್ಯಾರಾ ಅಥ್ಲೆಟಿಕ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ದಿಲೀಪ್‌ ಗಾವಿತ್‌ ಚಿನ್ನ, ಮೊಹಮ್ಮದ್‌ ಬಾಸಿಲ್‌ ಬೆಳ್ಳಿ ಪದಕ ಗೆದ್ದರೆ, ಪುರುಷರ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್‌ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ದೇಶದ ಪದಕ ಗಳಿಕೆ ಈಗ 15ಕ್ಕೆ ಏರಿಕೆಯಾಗಿದೆ. ಭಾರತದ ಬಳಿ ಈಗ 3 ಚಿನ್ನ, 9 ಬೆಳ್ಳಿ, 3 ಕಂಚಿನ ಪದಕಗಳಿವೆ.

ಪುರುಷರ 100 ಮೀ. ಟಿ47 ವಿಭಾಗದಲ್ಲಿ ದಿಲೀಪ್‌ 10.71 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಗೇಮ್ಸ್‌ ದಾಖಲೆಯೊಂದಿಗೆ ಚಾಂಪಿಯನ್‌ ಆದರು. ಇದು ಗೇಮ್ಸ್‌ನ ಇತಿಹಾಸದಲ್ಲೇ ಪುರುಷರ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನ. ಒಟ್ಟಾರೆ ಈ ಬಾರಿ ಗೇಮ್ಸ್‌ನಲ್ಲಿ ಭಾರತ 3ನೇ ಬಂಗಾರ ಗೆದ್ದಿತು. ಇದೇ ವೇಳೆ, ಈ ಋತುವಿನ ತಮ್ಮ ಶ್ರೇಷ್ಠ ಪ್ರದರ್ಶನ ದಾಖಲಿಸಿದ ಬಾಸಿಲ್‌ 10.83 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಿಯಾದರು. ಇಂಗ್ಲೆಂಡ್‌ನ ಕೆವಿನ್‌ ಸ್ಯಾಂಟೊಸ್‌(10.85 ಸೆಕೆಂಡ್) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಸತತ 4ನೇ ಬೆಳ್ಳಿ ಪದಕ:

ಗ್ಲಾಸ್ಗೋದಲ್ಲಿ ಪದಕ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದ ಮುರಳಿ ಶ್ರೀಶಂಕರ್‌, ತಮ್ಮ ಮೇಲಿದ್ದ ನಿರೀಕ್ಷೆ ಹುಸಿಗೊಳಿಸಲಿಲ್ಲ. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು, ಈ ಬಾರಿಯೂ 2ನೇ ಸ್ಥಾನಿಯಾದರು. 

ಗೇಮ್ಸ್‌ನ ಇತಿಹಾಸದಲ್ಲೇ ಲಾಂಗ್‌ಜಂಪ್‌ನಲ್ಲಿ ಸತತ ಪದಕ ಗೆದ್ದ ಭಾರತದ ಮೊದಲಿ

  ಗೇಮ್ಸ್‌ನ ಇತಿಹಾಸದಲ್ಲೇ ಲಾಂಗ್‌ಜಂಪ್‌ನಲ್ಲಿ ಸತತ ಪದಕ ಗೆದ್ದ ಭಾರತದ ಮೊದಲಿಗ ಎನಿಸಿಕೊಂಡರು. ಅವರು 8.09 ಮೀ. ದೂರಕ್ಕೆ ನೆಗೆದರು. ಮಾಜಿ ವಿಶ್ವ ಚಾಂಪಿಯನ್‌, ಜಮೈಕಾದ ತಜಯ್‌ ಗೇಲ್‌ 8.15 ಮೀ. ದೂರಕ್ಕೆ ನೆಗೆದು ಚಿನ್ನ ಗೆದ್ದರೆ, ಸ್ಕಾಟ್ಲೆಂಡ್‌ನ ಸ್ಟೀಫನ್‌ ಮೆಕೆನ್ಜೀ(8.08 ಮೀ.) ಕಂಚು ತಮ್ಮದಾಗಿಸಿಕೊಂಡರು. ಭಾರತದ ಮತ್ತೋರ್ವ ಸ್ಪರ್ಧಿ, ಕರ್ನಾಟಕದ ಲೋಕೇಶ್‌ ಸತ್ಯನಾಥನ್‌(7.97 ಮೀ.) 5ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ ದಾಖಲೆಯ 9 ಬಾಕ್ಸರ್ಸ್‌ಗೆ ಮೆಡಲ್‌ ಖಚಿತ!
ಭಾರತಕ್ಕೆ ವೇಟ್‌ಲಿಫ್ಟಿಂಗಲ್ಲಿ ಮತ್ತೆ 2 ಬೆಳ್ಳಿ, 1 ಕಂಚು!