ದೆಹಲಿ : ಐಪಿಎಲ್ ಪ್ಲೇ-ಆಫ್ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್‌ಗೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದು, ಸನ್‌ರೈಸರ್ಸ್‌ಗೆ ಪಂಜಾಬ್ ಕಿಂಗ್ಸ್, ರಾಜಸ್ಥಾನಕ್ಕೆ ಕೋಲ್ಕತಾ ನೈಟ್‌ರೈಡರ್ಸ್ ಎದುರಾಳಿಯಾಗಿವೆ. 17ನೇ ಆವೃತ್ತಿ ಐಪಿಎಲ್ ನಿರ್ಣಾಯಕ ಘಟ್ಟ ತಲುಪಿದ್ದು, ಈಗಾಗಲೇ 4 ತಂಡಗಳು ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಆದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದ ಕುತೂಹಲ ಮುಂದುವರಿದಿದೆ.
ಭಾನುವಾರ ಈ ಕುತೂಹಲಕ್ಕೆ ತೆರೆ ಬೀಳಲಿದ್ದು, ರಾಜಸ್ಥಾನ ಅಥವಾ ಹೈದರಾಬಾದ್ ಪೈಕಿ ಒಂದು ತಂಡ 2ನೇ ಸ್ಥಾನಕ್ಕೇರಿ, ಕ್ವಾಲಿಫೈಯರ್-1ರಲ್ಲಿ ಆಡುವ ಅವಕಾಶ ಪಡೆಯಬಹುದು.
ಸನ್‌ರೈಸರ್ಸ್ vs ಕಿಂಗ್ಸ್ ಫೈಟ್
ಹೈದರಾಬಾದ್: ತನ್ನ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿಗಳಲ್ಲಿ ನಡುವ ಹುಟ್ಟಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಭಾನುವಾರ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.ಸನ್‌ರೈಸರ್ಸ್ 13 ಪಂದ್ಯಗಳಲ್ಲಿ 15 ಅಂಕ ಸಂಪಾದಿಸಿ ಪ್ಲೇ-ಆಫ್‌ಗೇರಿದೆ. ಆದರೆ ತಂಡಕ್ಕೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಗುರಿ ಇದ್ದು, ಪಂಜಾಬ್ ವಿರುದ್ಧ ಗೆಲ್ಲಲೇಬೇಕಿದೆ. ಗೆದ್ದರೂ ಅತ್ತ ಕೋಲ್ಕತಾ ವಿರುದ್ಧ ರಾಜಸ್ಥಾನ ಸೋತರೆ ಮಾತ್ರ ತಂಡಕ್ಕೆ ಅಗ್ರ-2ರಲ್ಲಿ ಅವಕಾಶ ಸಿಗಲಿದೆ. ಮತ್ತೊಂದೆಡೆ ಪಂಜಾಬ್ 13 ಪಂದ್ಯಗಳಲ್ಲಿ 10 ಅಂಕ ಸಂಪಾದಿಸಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾತರಿಸುತ್ತಿದೆ. ಜಿತೇಶ್ ಶರ್ಮಾ ತಂಡ ಮುನ್ನಡೆಸಲಿದ್ದಾರೆ.
ಪಂದ್ಯ: ಮಧ್ಯಾಹ್ನ 3.30ಕ್ಕೆರಾಯಲ್ಸ್‌ಗೆ ಕೆಕೆಆರ್ ಸವಾಲುಗುವಾಹಟಿ: ಸತತ 4 ಪಂದ್ಯಗಳ ಸೋಲಿನೊಂದಿಗೆ ಕುಗ್ಗಿ ಹೋಗಿರುವ ರಾಜಸ್ಥಾನ ರಾಯಲ್ಸ್ ಭಾನುವಾರ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಸೆಣಸಾಡಲಿದ್ದು, ಪ್ಲೇ-ಆಫ್‌ಗೂ ಮುನ್ನ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ.
ಕೋಲ್ಕತಾ 13 ಪಂದ್ಯದಲ್ಲಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯ ಸೋತರೂ ನಂ.1 ಸ್ಥಾನಿಯಾಗಿಯೇ ಲೀಗ್ ಹಂತಕ್ಕೆ ವಿದಾಯ ಹೇಳಲಿದೆ. ರಾಜಸ್ಥಾನಲ್ಲಿ 16 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ 2ನೇ ಸ್ಥಾನದಲ್ಲೇ ಉಳಿಯಲಿದ್ದು, ಕ್ವಾಲಿಫೈಯರ್-1ಕ್ಕೆ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಒಂದು ವೇಳೆ ಸೋತರೂ, ಅತ್ತ ಸನ್‌ರೈಸರ್ಸ್ ವಿರುದ್ಧ ಪಂಜಾಬ್ ಗೆದ್ದರೆ ರಾಜಸ್ಥಾನ 2ನೇ ಸ್ಥಾನಿಯಾಗಿಯೇ ಲೀಗ್ ಹಂತ ಕೊನೆಗೊಳಿಸಲಿದೆ.
ಪಂದ್ಯ: ಸಂಜೆ 7.30ಕ್ಕೆ