6000 ರನ್‌, 400 ವಿಕೆಟ್‌: ರಣಜಿ ಕ್ರಿಕೆಟ್‌ನಲ್ಲಿ ಜಲಜ್‌ ಸಕ್ಸೇನಾ ಹೊಸ ಇತಿಹಾಸ!

KannadaprabhaNewsNetwork | Published : Nov 6, 2024 11:51 PM

ಸಾರಾಂಶ

2005ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಜಲಜ್‌ ಸಕ್ಸೇನಾ, 11 ವರ್ಷಗಳ ಕಾಲ ಮಧ್ಯಪ್ರದೇಶ ಪರ ಆಡಿದ್ದಾರೆ. ಬಳಿಕ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ತಿರುವನಂತಪುರಂ: ಕೇರಳದ ಆಲ್ರೌಂಡರ್‌ ಜಲಜ್‌ ಸಕ್ಸೇನಾ ರಣಜಿ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ 6000 ರನ್‌ ಹಾಗೂ 400 ವಿಕೆಟ್‌ ಕಿತ್ತ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬುಧವಾರ ಉತ್ತರ ಪ್ರದೇಶದ ನಿತೀಶ್‌ ರಾಣಾ ವಿಕೆಟ್‌ ಕಿತ್ತ 37 ವರ್ಷದ ಸಕ್ಸೇನಾ, ರಣಜಿ ವಿಕೆಟ್‌ ಗಳಿಕೆಯನ್ನು 400ಕ್ಕೆ ಹೆಚ್ಚಿಸಿದರು. ಈ ಸಾಧನೆ ಮಾಡಿದ 14ನೇ ಆಟಗಾರ ಎನಿಸಿಕೊಂಡರು. ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 5 ವಿಕೆಟ್‌ ಪಡೆದರು. ಕಳೆದ ಪಂದ್ಯದಲ್ಲಿ ಸಕ್ಸೇನಾ ರಣಜಿಯಲ್ಲಿ 6000 ರನ್‌ ಮೈಲುಗಲ್ಲು ತಲುಪಿದ್ದರು. 2005ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಸಕ್ಸೇನಾ, 11 ವರ್ಷ ಮಧ್ಯಪ್ರದೇಶ ಪರ ಆಡಿದ್ದಾರೆ. ಬಳಿಕ ಕೇರಳ ತಂಡ ಪ್ರತಿನಿಧಿಸುತ್ತಿದ್ದಾರೆ.

ರಣಜಿ ಆಡಿದ ಕರ್ನಾಟಕದ 313ನೇ ಆಟಗಾರ ಅಭಿಲಾಶ್‌ಬಂಗಾಳ ವಿರುದ್ಧ ಪಂದ್ಯದಲ್ಲಿ ಅಭಿಲಾಶ್‌ ಶೆಟ್ಟಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ರಾಜ್ಯ ತಂಡದ ಪರ ರಣಜಿ ಆಡಿದ 313ನೇ ಆಟಗಾರ ಎನಿಸಿಕೊಂಡಿರುವ ಉಡುಪಿಯ ಕುಂದಾಪುರದ ಅಭಿಲಾಶ್‌, ಚೊಚ್ಚಲ ಪಂದ್ಯದಲ್ಲೇ ಒಂದು ವಿಕೆಟ್‌ ಪಡೆದು ಗಮನ ಸೆಳೆದರು.ಶ್ರೇಯಸ್‌ ಸತತ 2ನೇ ಶತಕ: ಔಟಾಗದೆ 152

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿರುವ ತಾರಾ ಆಟಗಾರ ಶ್ರೇಯಸ್‌ ಅಯ್ಯರ್‌, ರಣಜಿ ಕ್ರಿಕೆಟ್‌ನಲ್ಲಿ ಸತತ 2ನೇ ಶತಕ ಬಾರಿಸಿದರು. ಕಳೆದ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 142 ರನ್‌ ಸಿಡಿಸಿದ್ದ ಮುಂಬೈ ತಂಡದ ಶ್ರೇಯಸ್‌, ಬುಧವಾರ ಒಡಿಶಾ ವಿರುದ್ಧ ಔಟಾಗದೆ 152 ರನ್‌ ಬಾರಿಸಿದರು. 164 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶ್ರೇಯಸ್‌ರ 15ನೇ ಶತಕ. ಮುಂಬೈ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 385 ರನ್‌ ಕಲೆಹಾಕಿದೆ.

Share this article