ರಾಷ್ಟ್ರೀಯ ಈಜು : 17 ಬಂಗಾರ ಸೇರಿ 33 ಪದಕ ಗೆದ್ದ ಕರ್ನಾಟಕ ಸಮಗ್ರ ಚಾಂಪಿಯನ್‌ ಈಜುಪಟುಗಳು

KannadaprabhaNewsNetwork |  
Published : Sep 14, 2024, 01:46 AM ISTUpdated : Sep 14, 2024, 04:21 AM IST
ಕರ್ನಾಟಕ ತಂಡ | Kannada Prabha

ಸಾರಾಂಶ

ರಾಜ್ಯದ ಈಜುಪಟುಗಳು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರ 6 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 2ನೇ ಸ್ಥಾನ ಪಡೆದುಕೊಂಡಿತು.

  ಮಂಗಳೂರು:  77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.ಶುಕ್ರವಾರ ಕೊನೆಗೊಂಡ ಕೂಟದಲ್ಲಿ ರಾಜ್ಯದ ಈಜುಪಟುಗಳು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರ 6 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 2ನೇ ಸ್ಥಾನ ಪಡೆದುಕೊಂಡಿತು.

ಕೊನೆ ದಿನ ರಾಜ್ಯಕ್ಕೆ 5 ಚಿನ್ನ, 1 ಬೆಳ್ಳಿ, 2 ಕಂಚು ಲಭಿಸಿತು. 200 ಮೀ. ಫ್ರೀಸ್ಟೈಲ್‌ ಮಹಿಳಾ ವಿಭಾಗದಲ್ಲಿ ಹಶಿಕಾ ರಾಮಚಂದ್ರ 2 ನಿಮಿಷ 06.49 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ ಅನೀಶ್‌ ಗೌಡ (1 ನಿಮಿಷ 52.09 ಸೆಕೆಂಡ್‌) ಚಿನ್ನ ಜಯಿಸಿದರು. ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್‌ ಶಂಕರ್‌, ಮಹಿಳೆಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ತಾನ್ಯಾ ಷಡಕ್ಷರಿ ಚಿನ್ನ ಗೆದ್ದರು. ಪುರುಷರ 4*100 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧೆಯಲ್ಲಿ ಪೃಥ್ವಿ, ಕಾರ್ತಿಕೇಯನ್‌, ಆಕಾಶ್‌ ಮಣಿ, ಶ್ರೀಹರಿ ನಟರಾಜ್‌ ಇದ್ದ ತಂಡ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿತು. ಮಹಿಳೆಯರ 4*100 ಫ್ರೀಸ್ಟೈಲ್‌ನಲ್ಲಿ ವಿಹಿತಾ, ಶಾಲಿನಿ, ಶಿರಿನ್‌, ಹಶಿಕಾ ಅವರನ್ನೊಳಗೊಂಡ ತಂಡ ಬೆಳ್ಳಿ ಪಡೆಯಿತು.

ಅನೀಶ್‌ ಗೌಡ, ಹಶಿಕಾ ವೈಯಕ್ತಿಕ ಚಾಂಪಿಯನ್‌

ಕೂಟದಲ್ಲಿ ಕರ್ನಾಟಕದ ಅನೀಶ್‌ ಗೌಡ ಹಾಗೂ ಹಶಿಕಾ ರಾಮಚಂದ್ರ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವೈಯಕ್ತಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಹಶಿಕಾ 4 ಚಿನ್ನದ ಪದಕ ಗೆದ್ದರೆ, ಅನೀಶ್‌ 3 ಚಿನ್ನ, 1 ಕಂಚು ಜಯಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!