ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕದ ರಾಜಲಕ್ಷ್ಮಿ, ಲಲಿತಾಗೆ ಕಂಚಿನ ಪದಕ

KannadaprabhaNewsNetwork |  
Published : Dec 17, 2023, 01:45 AM IST
ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದ ಕರ್ನಾಟಕದ ಲಲಿತಾ, ಡಾ.ರಾಜಲಕ್ಷ್ಮಿ (ಫೋಟೋ: ವಿಶೇಷ ವ್ಯವಸ್ಥೆ) | Kannada Prabha

ಸಾರಾಂಶ

ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿಕೆ. ಪ್ಯಾರಾ ಟೇಬಲ್‌ ಟೆನಿಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳು.

ನವದೆಹಲಿ: ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೆರಡು ಕಂಚಿನ ಪದಕಗಳು ದೊರೆತಿವೆ. ಪ್ಯಾರಾ ಟೇಬಲ್‌ ಟೆನಿಸ್‌ನ ಮಹಿಳೆಯರ ವೀಲ್ಹ್‌ಚೇರ್‌ 1-3 ವಿಭಾಗದಲ್ಲಿ ಡಾ. ಎಸ್‌.ಜಿ. ರಾಜಲಕ್ಷ್ಮಿ ಹಾಗೂ ಮಹಿಳೆಯರ ವೀಲ್ಹ್‌ಚೇರ್‌-4 ವಿಭಾಗದಲ್ಲಿ ಲಲಿತಾ ಶಂಕರ್‌ ಕಂಚಿನ ಪದಕ ಪಡೆದಿದ್ದಾರೆ.ಕ್ರೀಡಾಕೂಟದಲ್ಲಿ ಕರ್ನಾಟಕ 6 ಚಿನ್ನ, 8 ಬೆಳ್ಳಿ, 10 ಕಂಚಿನೊಂದಿಗೆ ಒಟ್ಟು 24 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.ತಲಾ 38 ಚಿನ್ನ, ಬೆಳ್ಳಿ, 24 ಕಂಚಿನೊಂದಿಗೆ ಒಟ್ಟು 100 ಪದಕಗಳನ್ನು ಗೆದ್ದಿರುವ ಹರ್ಯಾಣ ಅಗ್ರಸ್ಥಾನ ಕಾಯ್ದುಕೊಂಡಿದ್ದು, 24 ಚಿನ್ನ ಸೇರಿ ಒಟ್ಟು 54 ಪದಕ ಗೆದ್ದಿರುವ ಉತ್ತರ ಪ್ರದೇಶ, 18 ಚಿನ್ನ ಸೇರಿ ಒಟ್ಟು 38 ಪದಕ ಗೆದ್ದಿರುವ ತಮಿಳುನಾಡು ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿವೆ. ಭಾನುವಾರ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!